ಮಂಗಳೂರು: “ಕಾಂಗ್ರೆಸ್ ಕಾಲದಲ್ಲಿ 10 ರೂ. ಗ್ಯಾಸ್ ಬೆಲೆ ಏರಿಕೆಯಾದಾಗ ಬೀದಿಗಿಳಿದು ಒಲೆ ಹಚ್ಚಿ ಚಹಾ ಮಾಡುತ್ತಿದ್ದ ಸಚಿವೆ ಶೋಭಾ ಕರಂದ್ಲಾಜೆ ಅವರು ಈಗ ಎಲ್ಲಿ ಹೋಗಿದ್ದಾರೆ? ಈಗ ಸಿಲಿಂಡರ್ ಬೆಲೆ 60 ರೂ. ಏರಿಕೆಯಾಗಿದ್ದರೂ ಅವರ ಅಡ್ರೆಸ್ಸೇ ಇಲ್ಲ. ಜಿಲ್ಲೆಯ ಸಂಸದರು ಮತ್ತು ಬಿಜೆಪಿ ಶಾಸಕರು ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ” ಎಂದು ಹರೀಶ್ ಕುಮಾರ್ ವ್ಯಂಗ್ಯವಾಡಿದರು.
“ದೇಶದಲ್ಲಿ ಈಗ ನಡೆಯುತ್ತಿರುವುದು ಪ್ರಜಾಪ್ರಭುತ್ವವಲ್ಲ, ಅದು ಸಂಪೂರ್ಣವಾಗಿ ತುಘಲಕ್ ದರ್ಬಾರ್ ಅನ್ನು ನೆನಪಿಸುತ್ತಿದೆ. ಯಾವುದೇ ಮಹತ್ವದ ನಿರ್ಧಾರಗಳನ್ನು ಜನಪರವಾಗಿ ತೆಗೆದುಕೊಳ್ಳುವ ಬದಲು, ರಾತ್ರಿ 12 ಗಂಟೆಗೆ ಏಕಾಏಕಿ ಜಿಎನ್ಟಿ ಅಥವಾ ಬ್ಯಾಂಕ್ ವಿಲೀನದಂತಹ ಘೋಷಣೆಗಳನ್ನು ಹೊರಡಿಸಿ ಜನರನ್ನು ಸಂಕಷ್ಟಕ್ಕೆ ತಳ್ಳಲಾಗುತ್ತಿದೆ.
ಅಧಿಕಾರಿಗಳು ಒಂದು ಕಡೆ 75 ದಿನಗಳ ತೈಲ ದಾಸ್ತಾನು ಇದೆ ಎನ್ನುತ್ತಾರೆ, ಆದರೆ ಮಾರುಕಟ್ಟೆಯಲ್ಲಿ ಕಮರ್ಷಿಯಲ್ ಗ್ಯಾಸ್ ಮತ್ತು ತೈಲ ಸಿಗುತ್ತಿಲ್ಲ. ಈ ದ್ವಂದ್ವ ನೀತಿಯಿಂದಾಗಿ ದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ. ಹಾರ್ಮುಜ್ ಜಲಸಂಧಿ ಬಂದ್ ಆಗಿರುವ ಸುದ್ದಿ ಬೆನ್ನಲ್ಲೇ ಹೋಟೆಲ್, ಫ್ಯಾಕ್ಟರಿಗಳು ಸ್ಥಗಿತಗೊಳ್ಳುತ್ತಿವೆ. ಕಾರ್ಮಿಕರು ಮತ್ತು ಸಾಮಾನ್ಯ ಜನರ ಬದುಕು ಬೀದಿಗೆ ಬೀಳುತ್ತಿದ್ದರೂ ಕೇಂದ್ರ ಸರ್ಕಾರ ಮಾತ್ರ ಮೌನ ವಹಿಸಿರುವುದು ದುರಂತ,” ಎಂದು ಹರೀಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

