ಮಂಗಳೂರು: ಮಾಜಿ ಸಚಿವ ರಮಾನಾಥ್ ರೈ ಕೇಸರಿ ಬಗ್ಗೆ ತನ್ನ ಅಲರ್ಜಿಯನ್ನ ತೋರಿಸಿಕೊಂಡಿದ್ದಾರೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.
ಹಿಂದೂ ಸಮಾಜದ ಧಾರ್ಮಿಕ ಕಾರ್ಯಕ್ರಮದಲ್ಲಿ ಯಾವ ಧ್ವಜ ಉಪಯೋಗಿಸಬೇಕು. ಮಸೀದಿಗಳಲ್ಲಿ ಹಸಿರು ಧ್ವಜ ಉಪಯೋಗಿಸುತ್ತಾರೆ ಅದು ಕೂಡ ತಪಲ್ಲವೇ, ಉಡುಪಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪರ್ಯಾಯ ಉದ್ಘಾಟನೆಗೆ ಬರ್ಲಿಲ್ಲ ಎಂದರು.

ಅದರ ಬದಲು ಜಿಲ್ಲಾಧಿಕಾರಿ ಪರ್ಯಾಯ ಉದ್ಘಾಟನೆ ಮಾಡಿದ್ದಾರೆ. ಒಂದು ವೇಳೆ ಲಕ್ಷ್ಮಿ ಹೆಬ್ಬಾಳ್ಕರ್ ಇರುತ್ತಿದ್ದರೆ ಅವರ ಕೈಯಲ್ಲಿ ಕೇಸರಿ ಧ್ವಜ ಕೊಟ್ಟು ಉದ್ಘಾಟನೆ ಮಾಡುತಿದ್ದರು. ಕಾಂಗ್ರೆಸ್ ನಾಯಕರಿಗೆ ತಾಕತ್ತು ಇದ್ದರೆ ಒಂದು ಸವಾಲು, ಕಾಂಗ್ರೆಸ್ ನಾಯಕರಾಗಲಿ, ಕಾರ್ಯಕರ್ತರಾಗಲಿ ಕೇಸರಿ ತೊಟ್ಟು ಕಾಂಗ್ರೆಸ್ ಕಚೇರಿಗೆ ಹೋಗುವ ಧೈರ್ಯ ಇದೆಯೇ ಎಂದರು.

