ಬೆಂಗಳೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಫೆಬ್ರವರಿ 16, 2025 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟ ಡಾಲಿ ಧನಂಜಯ್ ಮತ್ತು ಧನ್ಯತಾ ಜೋಡಿ ಇದೀಗ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಇಂದು ಉದಯ ಕನ್ನಡಿಗ 2025 ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ ಡಾಲಿ ಧನಂಜಯ್ ಪರೋಕ್ಷವಾಗಿ ತಾವು ತಂದೆಯಾಗುತ್ತಿರುವ ಸಂತಸವನ್ನು ವೇದಿಕೆಯಲ್ಲಿ ವ್ಯಕ್ತಪಡಿಸಿದ್ದಾರೆ.
ಒಂದು ಗುಲಾಬಿ ಹೆಂಡ್ತಿಗೆ, ಮತ್ತೊಂದು ಗುಲಾಬಿ ನನ್ನ ಅಪ್ಪ ಅಂತ ಕರಿಯೋಕೆ ಬರ್ತಿರೋ ಮಗುಗೆ’ ಎಂದು ಹೇಳುವ ಮೂಲಕ ಸದ್ಯದಲ್ಲೇ ತಾವು ತಂದೆ ತಾಯಿಯ ಆಗುತ್ತಿರುವ ವಿಚಾರ ಹಂಚಿಕೊಂಡಿದ್ದಾರೆ.

