ಮಂಡ್ಯ: ಹೃದಯಾಘಾತದಿಂದ ಸರ್ಕಾರಿ ಶಾಲಾ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ನಡೆದಿದೆ. ಎಸ್.ಸಿ.ಎಂ.ಎಂ ಫ್ರೌಡಶಾಲೆಯ 9 ನೇ ತರಗತಿಯ ವೀರಮಣಿ (14) ಸಾವಿಗೀಡಾದ ವಿದ್ಯಾರ್ಥಿ.

ಇಂದು ಮಧ್ಯಾಹ್ನ ಊಟದ ವಿರಾಮದ ವೇಳೆ ನೀರು ಕುಡಿಯುವಾಗ ವೀರಮಣಿ ಕುಸಿದು ಬಿದ್ದಿದ್ದ.ತಕ್ಷಣ ಶಾಲಾ ವಾಹನದಲ್ಲಿ ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಮಿಮ್ಸ್ ಗೆ ತೆರಳುವಂತೆ ವೈದ್ಯರ ಸಲಹೆ ನೀಡಿದ್ದರು.

ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದಾಗ ವಿಧ್ಯಾರ್ಥಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರ ಧೃಡಪಡಿಸಿದ್ದಾರೆ. ಮಿಮ್ಸ್ ಬಳಿ ಪೊಷಕರ ಆಕ್ರಂಧನ ಮುಗಿಲು ಮುಟ್ಟಿದೆ. ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.