ಮೈಸೂರು: ಬೇಸಿಗೆ ಬೆನ್ನಲ್ಲೇ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ನೀರಿನ ಕೊರತೆಗೆ ಅವಕಾಶ ನೀಡಬಾರದೆಂದು ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದರೂ ಅಭಾವ ಶುರುವಾಗಿದೆ. ಕೆ.ಆರ್.ನಗರ ಪುರಸಭೆ 6 ನೇ ವಾರ್ಡ್ ಅರ್ಕೇಶ್ವರ ನಗರದಲ್ಲಿ ಕಳೆದ 6 ತಿಂಗಳಿಂದ ನೀರಿನ ಸಮಸ್ಯೆಗೆ ಪರಿಹಾರ ದೊರೆತಿಲ್ಲ.

ದಿನೇ ದಿನೇ ಅಭಾವ ಹೆಚ್ಚಾಗುತ್ತಿದೆ. ಪುರಸಭೆ ಅಧಿಕಾರಿಗಳಿಗೆ ದೂರು ನೀಡಿದರೂ ಕೇರ್ ಮಾಡುತ್ತಿಲ್ಲ.ಇನ್ನು ವಾಟರ್ ಮ್ಯಾನ್ ಅಂತೂ ಸಮಯಕ್ಕೆ ಸರಿಯಾಗಿ ಕೈಕೊಡುತ್ತಿದ್ದಾನೆ. ನೀರಿನ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳ ವಿರುದ್ದ ಸ್ಥಳೀಯ ಮಹಿಳೆಯರು ಸಿಡಿದೆದ್ದಿದ್ದಾರೆ. ಖಾಲಿ ಬಿಂದಿಗೆಗಳನ್ನ ಪ್ರದರ್ಶಿಸಿ ಬೀದಿಗೆ ಇಳಿದು ಆಕ್ರೋಷ ವ್ಯಕ್ತಪಡಿಸಿದ್ದಾರೆ.

ಓಟ್ ಕೇಳಕ್ಕೆ ಮಾತ್ರ ಬರ್ತೀರಾ ಈಗ ಸಮಸ್ಯೆ ಅರ್ಥ ಆಗ್ತಿಲ್ವಾ ಎಂದು ಕಿಡಿಕಾರಿದ್ದಾರೆ. ಸ್ಥಳೀಯರ ಸಹನೆಗೂ ಮಿತಿ ಇದೆ. ಕೂಡಲೇ ಅಧಿಕಾರಿಗಳು ಸ್ಪಂದಿಸದಿದ್ದಲ್ಲಿ ಮಹಿಳೆಯರ ಆಕ್ರೋಶ ಬುಗಿಲೇಳುವುದು ಗ್ಯಾರೆಂಟಿ.