ಉಡುಪಿ: ಅಧಿವೇಶನದಲ್ಲಿ ವಿಪರೀತ ವರ್ತನೆಗೆ ರಾಹುಲ್ ಗಾಂಧಿಯನ್ನು ಯತ್ನಾಳ್ ಟೀಕಿಸಿದರು. ರಾಹುಲ್ ಗಾಂಧಿ ಒಬ್ಬ ಅಪ್ರಾಪ್ತ ಬುದ್ಧಿಹೀನ. ಸದನದಲ್ಲಿ ಚರ್ಚೆ ಮಾಡೋಲ್ಲ ಅಂದ್ರೆ ಹೇಗೆ. ಬಿಡುಗಡೆಯಾಗದ ಪುಸ್ತಕದ ಬಗ್ಗೆ ಮಾತನಾಡುತ್ತಾರೆ. ನೆಹರು ಮನೆತನದ ಹಗರಣಗಳು ಸೆಕ್ಸ್ ಹಗರಣಗಳು ಸಾಕಷ್ಟು ಈ ದೇಶದಲ್ಲಿ ಇದೆ ಎಂದರು.
ನೆಹರು ಮೌಂಟ್ ಬ್ಯಾಟನ್ ಪತ್ನಿ ಜೊತೆ ಏನು ಸಂಪರ್ಕ ಇತ್ತು ಚರ್ಚೆ ಆಗಲಿ, ಫ್ರೀ ಹ್ಯಾಂಡ್ ಅಂದರೆ ನಿರ್ಣಯ ತೆಗೆದುಕೊಳ್ಳಲು ಸ್ವತಂತ್ರರು ಎಂದರ್ಥ, ಮಿಲಿಟರಿಗೆ ಸ್ವತಂತ್ರ ನಿರ್ಣಯ ತೆಗೆದುಕೊಳ್ಳಲು ಅವಕಾಶ ನೀಡಿದ್ದರಿಂದ ಕಾಶ್ಮೀರದಲ್ಲಿ ನೆಮ್ಮದಿ ಇದೆ. ಫ್ರೀ ಹ್ಯಾಂಡ್ ಇರುವುದರಿಂದಲೇ ದೇಶ ನೆಮ್ಮದಿಯಾಗಿದೆ. ಎಲ್ಲೂ ಕೂಡ ಕಲ್ಲುತೂರಾಟ ಇಲ್ಲ. ಫ್ರೀ ಹ್ಯಾಂಡ್ ಅಂದರೆ ನಾಯಕತ್ವ ವಿಫಲ ಎಂದು ಈ ಮೂರ್ಖ ಹೇಳುತ್ತಾನೆ.
ಕಲ್ಲು ಹೊಡೆದರು ಸುಮ್ಮನಿರಬೇಕು ಎಂದು ಈ ಹಿಂದೆ ಹೇಳಲಾಗುತ್ತಿತ್ತು. ಕಾಂಗ್ರೆಸ್ ಪೂರ್ಣ ದಿವಾಳಿ ಆಗಿದೆ. ತಮ್ಮ ನಾಯಕನ ತಪ್ಪು ಹೇಳುವ ಒಬ್ಬ ಲೀಡರ್ ಇಲ್ಲ. ಪ್ರಣವ್ ಮುಖರ್ಜಿ ತಪ್ಪಾದಾಗ ಹೇಳುತ್ತಿದ್ದರು ಈಗ ಎಲ್ಲಾ ಚೇಲಾಗಳು ಸೇರಿಕೊಂಡಿದ್ದಾರೆ. ಸಂತವಾಗಿ ಲೋಕಸಭೆ ಗೆಲ್ಲಲಾಗದ ರಾಜ್ಯ ಸದಾ ಸದಸ್ಯ ಈ ರೀತಿ ಮಾರ್ಗದರ್ಶನ ಮಾಡುತ್ತಿದ್ದಾರೆ. ದೇಶದ ಬಗ್ಗೆ ಇವರಿಗೆ ಚರ್ಚೆ ಬೇಡ. ಪ್ರಧಾನಿ ಕುಳಿತುಕೊಳ್ಳುವ ಸ್ಥಾನಕ್ಕೆ ಬಂದು ಅಪಮಾನ ಮಾಡಲು ಯೋಜಿಸಿದ್ದರು. ರಾಹುಲ್ ಗಾಂಧಿ ಚೀನಾ ಪಾಕಿಸ್ತಾನ ಏಜೆಂಟ್ ತರ ಇದ್ದಾನೆ. ರಾಹುಲ್ ಗಾಂಧಿಯ ಡಿಎನ್ಎ ಚೆಕ್ ಮಾಡಬೇಕು ಎಂದರು.

