ಉಡುಪಿ: ಕಾಂಗ್ರೆಸ್ ಶಾಸಕರ ವಿದೇಶಿ ಪ್ರವಾಸ ವಿಚಾರವಾಗಿ ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ. ವಿದೇಶಕ್ಕೆ ಹೋಗಿ ಏನು ಅಧ್ಯಯನ ಮಾಡ್ತಾರೆ. ನಮ್ಮ ಪಾರ್ಲಿಮೆಂಟರಿ ವ್ಯವಸ್ಥೆಯೇ ಬೇರೆ ವಿದೇಶಗಳ ವ್ಯವಸ್ಥೆಯೇ ಬೇರೆ. ಅಮೆರಿಕ ಆಸ್ಟ್ರೇಲಿಯಾ ನ್ಯೂಜಿಲ್ಯಾಂಡ್ ಗೆ ಹೋಗಿ ಏನು ಅಧ್ಯಯನ ಮಾಡುವುದು. ಅಲ್ಲೆಲ್ಲ ಜನರಿಂದ ಆಯ್ಕೆ ಆದ ಅಧ್ಯಕ್ಷರು ಇರುತ್ತಾರೆ ಎಂದರು.

ಭ್ರಷ್ಟಾಚಾರ ಹೇಗೆ ಕಡಿಮೆ ಮಾಡಬೇಕು ಎಂದು ಅಧ್ಯಯನ ಮಾಡಲಿ. ಕರ್ನಾಟಕದಲ್ಲಿ ಎಷ್ಟು ಶೇಕಡ ಭ್ರಷ್ಟಾಚಾರ ಕಡಿಮೆಯಾಗಿದೆ, ಸಿದ್ದರಾಮಯ್ಯ ಉತ್ತರಿಸಲಿಲ್ಲ, ಮೂವತ್ತು ಸಾವಿರ ಕೋಟಿ ರೂಪಾಯಿ ಗುತ್ತಿಗೆದಾರರ ಬಿಲ್ ಬಾಕಿ ಇದೆ. ಗ್ಯಾರೆಂಟಿಯಿಂದ ಅಭಿವೃದ್ಧಿ ಆಗ್ತಾ ಇಲ್ಲ ಎಂದು ದೇಶಪಾಂಡೆ ಅವರೇ ಹೇಳಿದ್ದಾರೆ. ಅಧ್ಯಯನ ಮಾಡಲು ವಿದೇಶಕ್ಕೆ ಹೋಗಿಲ್ಲ ಶಕ್ತಿಪ್ರದರ್ಶನಕ್ಕೆ ಹೋಗಿದ್ದಾರೆ ಎಂದರು.

ನಮ್ಮ ಬಳಿ ಎಷ್ಟು ಶಾಸಕರ ಒಲವಿದೆ ಎಂದು ತೋರಿಸಲು ಹೋಗಿದ್ದಾರೆ. ಈ ಸರ್ಕಾರ ಪತನವಾಗುವ ಹಂತಕ್ಕೆ ಬರುತ್ತೆ, ಡಿಕೆ ಶಿವಕುಮಾರ್ ಯಾವುದೇ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಆಗಲು ಹೊರಟಿದ್ದಾರೆ. ಸರ್ಕಾರ ಬಿದ್ದರೂ ತೊಂದರೆ ಇಲ್ಲ ಎಂಬ ಹಂತಕ್ಕೆ ತಲುಪಿದೆ. ಎರಡು ಮೂರು ದಿನದ ಹೇಳಿಕೆಯಲ್ಲಿ ಗಟ್ಟಿಯಾಗಿ ಮಾತನಾಡಿದ್ದಾರೆ. ದೆಹಲಿಗೆ ಗಾಳಿ ಬಿಸಿಲು ನೋಡಲು ಬಂದಿಲ್ಲ ಎಂದು ಹೇಳಿದ್ದಾರೆ. ರಾಜ್ಯ ಸರ್ಕಾರ ಪತನವಾದರೂ ಆಶ್ಚರ್ಯ ಇಲ್ಲ ಎಂದರು.