Bengaluru 22°C
Ad

ಅಪಾಯ ಆಹ್ವಾನಿಸುತ್ತಿದೆ ಟ್ರಾನ್ಸ್ ಫಾರ್ಮರ್: ಹೊಸ ಕಂಬ ಅಳವಡಿಕೆಗೆ ಗ್ರಾಮಸ್ಥರ ಆಗ್ರಹ

ಬ್ರಹ್ಮಾವರ ತಾಲೂಕಿನ ಮಟಪಾಡಿ ಶಾಲೆ ಬಳಿ ಇರುವ ಮೆಸ್ಕಾಂ ಟ್ರಾನ್ಸ್ ಫಾರ್ಮರ್ ಗ್ರಾಮಸ್ಥರ ನಿದ್ದೆಗೆಡಿಸಿದೆ.

ಉಡುಪಿ: ಬ್ರಹ್ಮಾವರ ತಾಲೂಕಿನ ಮಟಪಾಡಿ ಶಾಲೆ ಬಳಿ ಇರುವ ಮೆಸ್ಕಾಂ ಟ್ರಾನ್ಸ್ ಫಾರ್ಮರ್ ಗ್ರಾಮಸ್ಥರ ನಿದ್ದೆಗೆಡಿಸಿದೆ.
ಕಬ್ಬಿಣದ ಕಂಬಗಳನ್ನು ಅಳವಡಿಸಿ ದಶಕಗಳ ಹಿಂದೆ ನಿರ್ಮಿಸಿರುವ ಈ ಟ್ರಾನ್ಸ್‌ಫಾರ್ಮ‌ರ್ ಮಳೆಗಾಲದಲ್ಲಿ ಆತಂಕ ಉಂಟು ಮಾಡಿದೆ.

ಪಕ್ಕದಲ್ಲಿ ಶ್ರೀನಿಕೇತನ ಪ್ರೌಢಶಾಲೆ ಇದ್ದು, ಅಂಗನವಾಡಿ ಕೇಂದ್ರ ಸೇರಿದಂತೆ ವಿದ್ಯಾರ್ಥಿಗಳು ಚಟುವಟಿಕೆ ನಡೆಸುವ ಸ್ಥಳ ಇದಾಗಿದೆ. ಬೇರೆ ಬೇರೆ ಕಚೇರಿಗಳಿದ್ದು ಜನನಿಬಿಡ ಪ್ರದೇಶವಾಗಿದೆ.

ಕಬ್ಬಿಣದ ಕಂಬಕ್ಕೆ ವಿದ್ಯುತ್‌ ಹರಿದು ಅಪಾಯ ಸಂಭವಿಸುವ ಮುಂಚೆ ಮೆಸ್ಕಾಂ ಎಚ್ಚೆತ್ತುಕೊಳ್ಳಬೇಕಾಗಿದೆ. ಟ್ರಾನ್ಸಾರ್ಮರ್ ಗೆ ಆವರಣ ಗೋಡೆ ನಿರ್ಮಿಸಿದರೆ ಸಂಭಾವ್ಯ ಅಪಾಯ ತಪ್ಪಿಸಬಹುದಿತ್ತು. ಈ ಟ್ರಾನ್ಸ್‌ಫಾರ್ಮ‌ರ್ ನಲ್ಲಿ ಕೆಲಸ ಮಾಡಲು ಲೈನ್ ಮ್ಯಾನ್ ಗಳು ಕೂಡ ಭಯಪಡುವಂತಾಗಿದೆ.

ಮೂರು ದಶಕಕ್ಕಿಂತಲೂ ಹಳೆದಾದ ಈ ಕಬ್ಬಿಣದ ಕಂಬವನ್ನು ತೆರವುಗೊಳಿಸಿ, ಹೊಸ ಕಂಬಗಳನ್ನು ಅಳವಡಿಸುವಂತೆ ಮಟಪಾಡಿಯ ಗ್ರಾಮಸ್ಥರು ಮನವಿ ಮಾಡಿದ್ದಾರೆ.

Ad
Ad
Nk Channel Final 21 09 2023
Ad