Bengaluru 27°C
Ad

ಬಸ್ ಚಲಾಯಿಸುತ್ತಿದ್ದ ವೇಳೆಯೇ ಮೂರ್ಛೆಹೋದ ಚಾಲಕ: ಕೂದಲೆಳೆಯ ಅಂತರದಲ್ಲಿ ಪ್ರಯಾಣಿಕರು ಪಾರು

Bus

ಉಡುಪಿ: ಚಾಲಕನೋರ್ವ ಮೂರ್ಛೆಹೋದ ಪರಿಣಾಮ ಸಿಟಿ ಬಸ್ ವೊಂದು ಹಿಂಮುಖವಾಗಿ ಚಲಿಸಿ ರಸ್ತೆ ಬದಿಯ ಕಂದಕಕ್ಕೆ ಬಿದ್ದ ಘಟನೆ ಉಡುಪಿಯ ಕೆಳಪರ್ಕಳದ ಬಳಿ ಇಂದು ಸಂಜೆ ಸಂಭವಿಸಿದೆ.

ಎಚ್ ಎಂಟಿ ಸಿಟಿ ಬಸ್ ಪರ್ಕಳದಿಂದ ಮಣಿಪಾಲದ ಕಡೆಗೆ ಪ್ರಯಾಣಿಕರನ್ನು ಕೊಂಡೊಯ್ಯುತ್ತಿತ್ತು. ಬಸ್ ಕೆಳಪರ್ಕಳದ ಏರಿನಲ್ಲಿ ಬರುತ್ತಿದ್ದಂತೆ ಚಾಲಕ ಕೃಷ್ಣ ಎಂಬವರಿಗೆ ಹಠಾತ್ ಆಗಿ ಫಿಟ್ಸ್ ಬಂದಿದೆ. ಇದರಿಂದ ಏಕಾಏಕಿಯಾಗಿ ಬಸ್ ಹಿಂದಕ್ಕೆ ಚಲಿಸಿ ಕಂದಕಕ್ಕೆ ನುಗ್ಗಿದೆ. ಕೆಲವು ಪ್ರಯಾಣಿಕರು ಬಸ್ ನಿಂದ ಜಿಗಿದು ತಮ್ಮ ಪ್ರಾಣವನ್ನು ರಕ್ಷಿಸಿಕೊಂಡರು. ಅದೃಷ್ಟವಶಾತ್ ಭಾರೀ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಚಾಲಕ ಕೃಷ್ಣ‌ ಅವರನ್ನು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

Ad
Ad
Nk Channel Final 21 09 2023
Ad