Bengaluru 27°C
Ad

ನೇಜಾರು ತಾಯಿ ಮತ್ತು ಮಕ್ಕಳ ಕೊಲೆ ಕೇಸ್: ಆರೋಪಿಯ ಜಾಮೀನು ಅರ್ಜಿ‌ ವಜಾಗೊಳಿಸಿದ ಹೈಕೋರ್ಟ್

Udupi

ಉಡುಪಿ: ನೇಜಾರು ತಾಯಿ ಮತ್ತು ಮಕ್ಕಳ ಕೊಲೆ ಪ್ರಕರಣದ ಆರೋಪಿ ಪ್ರವೀಣ್ ಅರುಣ್ ಚೌಗುಲೆ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶ ನೀಡಿದೆ.

ನೇಜಾರಿನಲ್ಲಿ ಒಂದೇ ಕುಟುಂಬದ ಐನಾಜ್, ಹಸೀನಾ, ಅಫ್ನಾನ್ ಹಾಗೂ ಅಸೀಮ್ ಎಂಬವರ ಹತ್ಯೆ ನಡೆದಿತ್ತು. ಈ ಕುರಿತು ಸಾಂದರ್ಭಿಕ ಸಾಕ್ಷಿ, ಸಿಸಿಟಿವಿ ದೃಶ್ಯ, ಆರೋಪಿ ಕೂದಲಿನ DNA ಆಧರಿಸಿ ಹೆಚ್ಚುವರಿ ಎಸ್ಪಿಪಿ ಬಿ.ಎನ್.ಜಗದೀಶ್ ಅವರು ಇಂದು(ಗುರುವಾರ) ವಾದ ಮಂಡಿಸಿದ್ದರು. ಅದರಂತೆ ಬರ್ಬರ ಹತ್ಯೆ ಆರೋಪಿಯ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ

Ad
Ad
Nk Channel Final 21 09 2023
Ad