Bengaluru 22°C
Ad

ಅಧೀಕ್ಷಕ ಚಂದ್ರಶೇಖರ್ ಆತ್ಮಹತ್ಯೆ: ಕುಟುಂಬಕ್ಕೆ ಸಾಂತ್ವಾನ‌ ಹೇಳಿದ ಗೃಹಸಚಿವ ಡಾ.ಜಿ.ಪರಮೇಶ್ವರ್

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಅವರ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಕುಟುಂಬಕ್ಕೆ ಸಾಂತ್ವಾನ‌ ಹೇಳಲು ರಾಜಕೀಯ ವ್ಯಕ್ತಿಗಳ ದಂಡೇ ಹರಿದು ಬರುತ್ತಿದೆ. 

ಶಿವಮೊಗ್ಗ:  ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಅವರ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಕುಟುಂಬಕ್ಕೆ ಸಾಂತ್ವಾನ‌ ಹೇಳಲು ರಾಜಕೀಯ ವ್ಯಕ್ತಿಗಳ ದಂಡೇ ಹರಿದು ಬರುತ್ತಿದೆ.

ವಿಪಕ್ಷಗಳ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಸಚಿವ ಮಧು ಬಂಗಾರಪ್ಪ, ಬಿ.ವೈ.ವಿಜೇಂದ್ರ ಭೇಟಿ ನೀಡಿ ಸಾಂತ್ವಾನ ಹೇಳಿದ್ದರು.  ಗೃಹಸಚಿವ ಡಾ. ಜಿ.ಪರಮೇಶ್ವರ್ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೃಹ ಮಂತ್ರಿ ಡಾ.ಪರಮೇಶ್ವರ್, ಮೇ.26 ರಂದು ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಕುಟುಂಬಕ್ಕೆ ದುಖ ಭರಿಸುವ ಶಕ್ತಿ ದೇವರು ತುಂಬಲಿ ಎಂದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಚಂದ್ರಶೇಖರ್ ಕೆಲಸ ಮಾಡುತ್ತಿದ್ದರು. ಎಸ್ಐಟಿ ತನಿಖೆ ನಡೆಸುತ್ತಿದೆ. ಕೆಲಸ ಮಾಡುವಾಗ ಒತ್ತಡವಿತ್ತಾ ಅಥಚಾ ಅದೇ ಕಾರಣಕ್ಕೆ ಆತ್ಮಹತ್ಯೆ ನಡೆದಿದೆಯಾ ಎಂಬುದು ತನಿಖೆಯಲ್ಲಿ ಬರುವ ತನಕ ಮಾತಬಾಡಲು ಸಾಧ್ಯವಿಲ್ಲ ಎಂದರು.

ಕೋವಿಡ್ ನಲ್ಲಿ ಸಾವಿನ ದವಡೆಯಿಂದ ಗೆದ್ದುಬಂದಿದ್ದಾರೆ. ಅವರ ಒಡವೆಯಲ್ಲಾ ಅಡವಿಟ್ಟು ಜೀವ ಉಳಿಸಿಕೊಂಡಿದ್ದೆ ಎಂದಿರುವ ಪತ್ನಿ ವಿಧಿ ಈ ರೀತಿ ನಡೆದುಕೊಳ್ಳುವ ನಿರೀಕ್ಷೆ ಇರಲಿಲ್ಲ ಎಂದ ಡಾ.ಪರಮೇಶ್ವರ್, ಮೇ.6 ರ‌ನಂತರ ಜಿಲ್ಲಾ ಉಸ್ತುವಾರಿ ಸಚಿವರು ಏನು ಬೇಡಿಕೆ ಇತ್ತು ಅದರ ಬಗ್ಗೆ ಗಮನ ಹರಿಸಲಿದ್ದಾರೆ ಎಂದರು.

187 ಕೋಟಿಯ ಅವ್ಯವಹಾರದ ಬಗ್ಗೆ ತನಿಖೆ ನಡೆದಿದೆ. ಡೆತ್ ನೋಟ್ ನಲ್ಲಿ ಸಚಿವರ ಮೌಖಿಕ ಆದೇಶ ಎಂದು ಬರೆದಿದ್ದಾರೆ. ತನಿಖೆಯಲ್ಲಿ ಬರುವ ತನಕ ಏನೂ ಹೇಳಲು ಆಗೊಲ್ಲ. ಸಚಿವರ ಹೆಸರು ಉಲ್ಲೇಖವಿಲ್ಲದ ಕಾರಣ ರಾಜೀನಾಮೆ ಪಡೆಯಲು ಸಾಧ್ಯವಿಲ್ಲ. ಈಶ್ವರಪ್ಪನವರ ಪ್ರಕರಣದಲ್ಲಿ ಅವರ ಹೆಸರಿತ್ತು. ಹಾಗಾಗಿ ಈ ಪ್ರಕರಣವನ್ನ ಈಶ್ವರಪ್ಪನವರ ಪ್ರಕರಣದ ಜೊತೆ ಹೊಙದಾಣಿಕೆ ಮಾಡಲು ಸಾಧ್ಯವಿಲ್ಲ ಎಂದರು.

ಸ್ವಯತ್ತ ಸಂಸ್ಥೆಗಳು ದುರುಪಯೋಗ ಆಗುವ ಸಾಧ್ಯತೆ ಇದೆ ಎಂಬ ಆರೋಪ ಸತ್ಯ. ಹಾಗಾಗಿ ಸಧ್ಯಕ್ಕೆ ಸಿಐಡಿಗೆ ನೀಡಲಾಗಿದೆ. ಬಿ.ವೈ ವಿಜೇಂದ್ರರ ಗಡವಿಗೆ ಅವರು ಹೇಳಿದಂತೆ ನಡೆದುಕೊಳ್ಳಲು ಸಾಧ್ಯವಿಲ್ಲ. ಸತ್ಯಾಸತ್ಯತೆ‌ ಹೊರ ಬರುವ ತನಕ ಸರ್ಕಾರಕ್ಕೆ ಮುಜುಗರ ಆಗುತ್ತೆ.

ಕಾನೂನು ಸುವ್ಯವಸ್ಥೆ ಹಾಳಾಗಿಲ್ಲ. ಅನವಶ್ಯಕ ಬೈಗುಳ ಬಿಜೆಪಿ ಮಾಡುತ್ತಿದೆ. ಶಿವಮೊಗ್ಗದಲ್ಲಿ ಗೂಂಡಾ ಎಲಿಮೆಂಟ್ಸ್ ನ್ನ ಬಿಡಲ್ಲ. ಹತ್ತಿಕ್ಕುವ ಕೆಲಸ ಮಾಡ್ತೀವಿ. ಯಾವ ಕಾನೂನಿನ ಸುವ್ಯವಸ್ಥೆ ಕೆಟ್ಟಿದೆ ಮರ್ಡರ್ ಯಾಕೆ ಆಗಿದೆ. ಧರ್ಮದ ಹತ್ಯೆ ಆಗಿದೆಯಾ? ಗಣಪತಿ ಹಬ್ಬಕ್ಕೆ ರಂಜಾನ್ ಹಬ್ಬಕ್ಕೆ ಗಲಾಟೆ ಆಗ್ತಾ‌ಇದೆಯಾ? ಬಿಜೆಪಿ ಕಾಲದಲ್ಲಿ ಮರ್ಡರ್ ಎಷ್ಟಾಗಿದೆ‌ ನಾವು ಅಧಿಕಾರಕ್ಕೆ ಬಂದಮೇಲೆ ಎಷ್ಟಾಗಿದೆ ಲೆಕ್ಕ ಕೊಡಬಲ್ಲೆ ಎಂದರು.

ಸೈಬರ್ ಕ್ರೈಂ ಹೆಚ್ಚಾಗಿದೆ. ಬಹಳ ಜೆಪಿಯ ಸಮಯದಲ್ಲಿ ಸೆನ್ ಇರಲಿಲ್ಲ. 45 ಸೆನ್ ಪೊಕೀಸ್ ಠಾಣೆಯನ್ನ ಹೆಚ್ಚಸಲಿದ್ದೇವೆ. ಭತವಿಲ್ಲದೆ ಪೊಲೀಸ್ ಠಾಣೆಗೆ ಬಂದು ಎಫ್ಐಆರ್ ಕೊಡಲು ಅವಕಾಶ ನೀಡಲಾಗಿದೆ. ಹಾಗಾಗಿ ಕ್ರೈಂ ಹೆಚ್ಚಾಗಿದೆ.
ಪೊಲೀಸರ ಮೇಲೆ ಹಲ್ಲೆ ನಡೆದಿದೆ. ಯಾವಕಾಲದಲ್ಲೂ ನಡೆದಿದೆ. ಚೆನ್ಬಗಿ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿರುವುರನ್ನ ರಕ್ಷಿಸಲು ಸಾಧ್ಯವಿಲ್ಲ. 25 ಜನರನ್ನ ಬಂಧಿಸಲಾಗಿದೆ.

ಬಾಲ್ಕು ವರ್ಷ ಬಿಜೆಪಿ ನೇಮಿಸಲಿಲ್ಲ. ಈಗ ನೇಮಕಾತಿ ಮಾಡಿಕೊಳ್ಳುತ್ತಿದ್ದೇವೆ.‌ ನ್ಯಾಯಾಲದಲ್ಲಿ ನೇಮಕಾತಿ ಪ್ರಕ್ರಿಯೆ ಇತ್ತು.ಈಗ ಮುಕ್ತವಾಗಿದೆ ಪೊಲೀಸ್ ಸಿಬ್ವಂದಿ ನೇಮಕಾತಿ ಮಾಡಿಕೊಳ್ಳುತ್ತಿದ್ದೇವೆ. ಪ್ರಜ್ವಲ್ ರೇವಣ್ಣ ವಿಮಾನದಲ್ಲಿದ್ದಾರೆ ಎಂಬ ಮಾಹಿತಿ ಇಲ್ಲ. ಈಗ ಟೇಕ್ ಆಫ್ ಆದರೆ ಬೆಂಗಳೂರಿಗೆ ಬರಲು 9 ಗಂಟೆ ಬೇಕಿದೆ ಎಂದರು.

ಶಿವಮೊಗ್ಗದಲ್ಲಿ ಪೊಲೀಸ್ ಆಯುಕ್ತರ ಕಚೇರಿ ಆರಂಭಿಸುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.ಅಗತ್ಯ ಬಿದ್ದರೆ ಆರಂಭಿಸೋಣ ಎಂದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ್ ದಗ್ಗಲ್, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್, ಕಲೀಂ ಪಾಶ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್ ಪ್ರಸನ್ನ ಕುಮಾರ್‌, ಮನನ ಅಜಿ ಪಾಲಿಕೆ ಸದಸ್ಯ ಹೆಚ್ ಸಿ ಯೋಗೀಶ್ ಹಾಗೂ ಇತರರು ಉಪಸ್ಥಿತರಿದ್ದರು

Ad
Ad
Nk Channel Final 21 09 2023
Ad