Bengaluru 24°C
Ad

ಶಿವಮೊಗ್ಗದಲ್ಲಿ 200ರ ಗಡಿ‌ದಾಟಿದ ಡೆಂಘೀ ಪ್ರಕರಣ : ಇನ್ನೂ ಏರಿಕೆ ಸಾಧ್ಯತೆ

ಮಲೆನಾಡು ಶಿವಮೊಗ್ಗದಲ್ಲಿ ಡೆಂಘೀ ಪ್ರಕರಣಗಳ ಸಂಖ್ಯೆ 200ರ ಗಡಿ‌ದಾಟಿದೆ. ಬಿಸಿಲ ಝಳದಿಂದ ಕಂಗೆಟ್ಟಿದ್ದ ಜಿಲ್ಲೆಗೆ ವರುಣರಾಯನ ಆಗಮನವಾಗಿದೆ. ಈ ಮಧ್ಯೆ ಡೆಂಘೀ ಪ್ರಕರಣಗಳು ದಿನದಿಂದ ದಿನಕ್ಕೆ ಜಿಲ್ಲೆಯನ್ನು ಕಾಡುತ್ತಿದೆ. ಕಳೆದ ಎರಡು ತಿಂಗಳಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.

ಶಿವಮೊಗ್ಗ: ಮಲೆನಾಡು ಶಿವಮೊಗ್ಗದಲ್ಲಿ ಡೆಂಘೀ ಪ್ರಕರಣಗಳ ಸಂಖ್ಯೆ 200ರ ಗಡಿ‌ದಾಟಿದೆ. ಬಿಸಿಲ ಝಳದಿಂದ ಕಂಗೆಟ್ಟಿದ್ದ ಜಿಲ್ಲೆಗೆ ವರುಣರಾಯನ ಆಗಮನವಾಗಿದೆ. ಈ ಮಧ್ಯೆ ಡೆಂಘೀ ಪ್ರಕರಣಗಳು ದಿನದಿಂದ ದಿನಕ್ಕೆ ಜಿಲ್ಲೆಯನ್ನು ಕಾಡುತ್ತಿದೆ. ಕಳೆದ ಎರಡು ತಿಂಗಳಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.

ಡೆಂಘೀ ಜ್ವರದಿಂದ ಈವರೆಗೆ ಇಬ್ಬರು ಮೃತಪಟ್ಟಿದ್ದರೂ ಮೃತಪಟ್ಟವರಲ್ಲಿ ಬೇರೆ ರೋಗಗಳ ಲಕ್ಷಣಗಳು ಕಂಡು ಬಂದಿರುವುದರಿಂದ ಡೆಂಘೀ ಜ್ವರದಿಂದಲೇ ಮೃತಪಟ್ಟಿರುವ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಖಚಿತಪಡಿಸಿಲ್ಲ.ಕಳೆದ ಬಾರಿಗೆ ಹೋಲಿಸಿಕೊಂಡರೆ ಈ ಬಾರಿ ಡೆಂಘೀ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ.ಕಳೆದ ವರ್ಷ ಒಟ್ಟು 456 ಪ್ರಕರಣಗಳು ಖಂಡು ಬಂದಿದ್ದವು.ಆದರೆ, ಬಾರಿ ಜೂನ್‌ನಲ್ಲೇ ಪ್ರಕರಣಗಳ ಸಂಖ್ಯೆ 200ರ ಗಡಿ ದಾಟಿದೆ. ಜೂನ್‌ ಬಳಿಕ ಇವುಗಳ ಸಂಖ್ಯೆ ಇನ್ನೂ ಏರಿಕೆಯಾಗುವ ಸಾಧ್ಯತೆಗಳು ಹೆಚ್ಚಿವೆ.

Ad
Ad
Nk Channel Final 21 09 2023
Ad