Bengaluru 22°C
Ad

“ಪೊಲೀಸರಿಂದ ಬೆದರಿಸಿದರು, ಭಿಕ್ಷೆ ಬೇಡಿಕೊಂಡು ಬದುಕಲು ಹೇಳಿದ್ರು “

ನಿಶಾ ಯೋಗೇಶ್ವರ್ ತಮ್ಮ ತಂದೆಯಾದ ಯೋಗೆಶ್ವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.ನಿಶಾ ಯೋಗೇಶ್ವರ್ ಅವರು ಇತ್ತೀಚೆಗೆ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಹಲವು ಬಾರಿ ಭೇಟಿಯಾಗಿದ್ದರು.

ರಾಮನಗರ: ನಿಶಾ ಯೋಗೇಶ್ವರ್ ತಮ್ಮ ತಂದೆಯಾದ ಯೋಗೆಶ್ವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.ನಿಶಾ ಯೋಗೇಶ್ವರ್ ಅವರು ಇತ್ತೀಚೆಗೆ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಹಲವು ಬಾರಿ ಭೇಟಿಯಾಗಿದ್ದರು. ಇದಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ತಂದೆ ಹೆಸರು ತೆಗೆದು ನೀವು ಯಾವ ಕೆಲಸ ಬೇಕಾದರೂ ಮಾಡಿ. ಯೋಗೇಶ್ವರ್ ಇಲ್ಲವಾದರೆ ನಿಮ್ಮ ಅಸ್ತಿತ್ವ ಇಲ್ಲ ಎಂದು ಕಮೆಂಟ್ ಗಳು ಬಂದಿದ್ದವು. ಇದಕ್ಕೆ ನಿಶಾ ಯೋಗೇಶ್ವರ್ ಉತ್ತರ ನೀಡಿದ್ದಾರೆ.

ಯೋಗೇಶ್ವರ್ ಅವರ ಮೊದಲ ಹೆಂಡತಿ ಮಗಳಾಗಿರುವುದರಿಂದ ಅವರ ಮನೆಯಲ್ಲಿ ನನಗೆ ಸ್ಥಾನವಿಲ್ಲ. ತನ್ನ ಚಿಕ್ಕಮ್ಮ ಯಾವತ್ತೂ ನನಗೆ ಅಮ್ಮನಾಗಲಿಲ್ಲ. ಮಲತಾಯಿ ಬಿಡಿ, ಸಾರ್ವಜನಿಕ ಬದುಕಿನಲ್ಲಿರುವ ತನ್ನ ತಂದೆಯೇ ಆದರ್ಶ ಅಪ್ಪ ಆಗಲಿಲ್ಲ ಎಂದು ನಿಶಾ ಯೋಗೇಶ್ವರ್ ಹೇಳಿದ್ದಾರೆ.

”ಮಾತನಾಡಿಸಲು ಹೋದಾಗ ತಂದೆ ಹೊಡೆದರು. ಪೊಲೀಸರನ್ನು ಕರೆಸಿ ಬೆದರಿಸುತ್ತಾರೆ,” ಎಂದು ನಿಶಾ ಯೋಗೇಶ್ವರ್‌ ಗಂಭೀರ ಆರೋಪ ಮಾಡಿದ್ದಾರೆ.”10 ವರ್ಷದವಳಾಗಿದ್ದಾಗಲೇ ನನ್ನ ತಂದೆ ನನ್ನಿಂದ ದೂರವಾದರು. ನನ್ನ ಚಿಕ್ಕಮ್ಮ(ಮಲತಾಯಿ)ನ ಮಗಳು ಅವರ ಜತೆ ಇರಬಹುದು. ಸ್ವಂತ ಮಗಳಾದ ನಾನು ಅವರ ಜತೆಯಲ್ಲಿಇರುವಂತಿಲ್ಲ. ನಾನು ಅಂದಿನಿಂದಲೂ ವನವಾಸದಲ್ಲಿಇದ್ದೇನೆ. ಚುನಾವಣೆ ಸಮಯದಲ್ಲಿಮಾತ್ರ ನನ್ನನ್ನು ಕರೆಯುತ್ತಿದ್ದರು. ಆಗ ಆದರ್ಶ ಮಗಳಾಗಿದ್ದ ನಾನು, 24 ವರ್ಷದ ಬಳಿಕ ನನ್ನ ಬಗ್ಗೆ ಯೋಚನೆ ಮಾಡಿದ್ದಕ್ಕೆ ಆದರ್ಶ ಮಗಳಾಗಲಿಲ್ಲವಾ,” ಎಂದು ಪ್ರಶ್ನಿಸಿದ್ದಾರೆ.

ನಾನು ಏನಾದರೂ ಕೇಳಿದರೆ ನನ್ನ ಮೇಲೆ ಡಿಪೆಂಡ್‌ ಆಗಬೇಡ. ನನ್ನ ಹತ್ತಿರ ಒಂದು ರೂಪಾಯಿ ಕೇಳಬೇಡ ಅಂತಾರೆ. ನೀನು ಭಿಕ್ಷೆ ಬೇಡಿಕೊಂಡು ಜೀವನ ನಡೆಸು ಎಂದು ಹೇಳುತ್ತಾರೆ ” ಎಂದು ನಿಶಾ ಆರೋಪಿಸಿದ್ದಾರೆ.

ಜಾಲತಾಣದಲ್ಲಿತಂದೆಗೆ ತಕ್ಕ ಮಗಳಾಗು ಎಂದು ಹೇಳುತ್ತಿರುವವರ ವಿರುದ್ಧ ಕಿಡಿಕಾರಿರುವ ನಿಶಾ,”20 ವರ್ಷಗಳ ಹಿಂದೆ ನನ್ನ ತಂದೆ ಬೇರೆ ಕುಟುಂಬವನ್ನೇ ಕಟ್ಟಿಕೊಂಡರು. ರಾಮನಿಗೆ 14 ವರ್ಷ ವನವಾಸವಿತ್ತು. ಆದರೆ, ನಾನು ಜೀವನ ಪೂರ್ತಿ ವನವಾಸದಲ್ಲೇ ಇದ್ದೇನೆ ಎಂದು ಕಣ್ಣೀರು ಹಾಕಿದ್ದಾರೆ.

Ad
Ad
Nk Channel Final 21 09 2023
Ad