ನಂಜನಗೂಡು: ಅಧಿಕಾರಿಗಳಿಗೆ ವರ್ಗಾವಣೆ ಒಂದು ಪ್ಯಾಕೇಜ್ ಆಗಿದೆ. ಯಾರು ಬರ್ತಾರೆ, ಯಾರು ಹೋಗ್ತಾರೆ ಯಾವುದು ಗೊತ್ತಾಗ್ತಾ ಇಲ್ಲ. ಅಧಿಕಾರಿಗಳು ಬಂದ ಮೇಲಷ್ಟೇ ನಮಗೆ ತಿಳಿಯುತ್ತಿದೆ ಎಂದು ಸಂಸದ ಸುನೀಲ್ ಬೋಸ್ ಕಿಡಿಕಾರಿದರು.
ನಂಜನಗೂಡಿನಲ್ಲಿ ನಡೆದ ಕೆಡಿಪಿ ಸಭೆಗೆ ಸಂಜೆ 5:30ಕ್ಕೆ ಆಗಮಿಸಿದ ಸಂಸದರು. ಸಭೆಯಲ್ಲಿ ಮಾತನಾಡಿದರು, ಜನಪ್ರತಿನಿಧಿಗಳಾದ ನಾವು ಡಾ. ಯತೀಂದ್ರ ಸಿದ್ದರಾಮಯ್ಯರವರು ಮತ್ತು ಶಾಸಕ ದರ್ಶನ್ ಧ್ರುವನಾರಾಯಣ್ ರವರು ಮತ್ತು ನನು ಕರೆ ಮಾಡಿದರು ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡುತ್ತಿಲ್ಲ. ನಾಳೆ ಎಲೆಕ್ಷನ್ ಗೆ ಹೋಗೋರು ನಾವು, ನೀವಲ್ಲ. ನೀವು ಬೇರೆಬೇರೆ ತಾಲ್ಲೂಕುಗಳಿಗೆ ಹೊರಟು ಹೋಗುತ್ತೀರಿ.
ಆದರೆ, ಜನ ನಮ್ಮನ್ನು ಮತ್ತೆ ಗೆಲ್ಲಿಸುತ್ತಾರಾ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಮುಖ್ಯಮಂತ್ರಿಗಳ ಕ್ಷೇತ್ರ ಮತ್ತು ಜಿಲ್ಲೆಯಲ್ಲಿ ಅಧಿಕಾರಿಗಳಾದ ನೀವು ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ ಎಂದು ಸಾರ್ವಜನಿಕರಿಂದ ದೂರು ಕೇಳಿ ಬಂದಿವೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಜನರು ನಮ್ಮನ್ನು ಆಯ್ಕೆ ಮಾಡಿದ್ದಾರೆ. ಅವರ ಕೆಲಸ ಕಾರ್ಯಗಳನ್ನು ನಾವು ಮಾಡಬೇಕು. ಅಧಿಕಾರಿಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳಿ ಎಂದು ಶಾಸಕ ದರ್ಶನ್ ಮತ್ತು ಡಾ.ಯತೀಂದ್ರ ಸಿದ್ದರಾಮಯ್ಯಗೆ ಸಂಸದ ಸುನೀಲ್ ಬೋಸ್ ಸಲಹೆ ನೀಡಿದರು.
ನಾವು ಏನು ಕೆಲಸ ಇಲ್ಲದೆ ಇಲ್ಲಿ ಬಂದು ಕುಳಿತಿಲ್ಲ. ಮುಖ್ಯಮಂತ್ರಿಗಳ ಪುತ್ರ ಹಾಗೂ ಶಾಸಕರಾದ ದರ್ಶನ್ ರವರ ಮಾತನ್ನು ಕೂಡ ಅಧಿಕಾರಿಗಳು ಕೇಳುತ್ತಿಲ್ಲ. ಸಾರ್ವಜನಿಕರಿಗೆ ಸ್ಪಂದಿಸಿ ಅವರ ಕೆಲಸವನ್ನು ತುರ್ತಾಗಿ ಮಾಡಿಕೊಟ್ಟರೆ ಅವರು ನಮ್ಮ ಬಳಿ ಯಾಕೆ ಬರುತ್ತಾರೆ ಎಂದು ಪ್ರಶ್ನಿಸಿದರು. ಇನ್ನು ಮುಂದೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

