News Karnataka Kannada
Monday, April 29 2024
ಮೈಸೂರು

ಮೈಸೂರಿನ ರಿಂಗ್ ರಸ್ತೆ ಸ್ವಚ್ಛತೆಗೆ ಕ್ರಮ – ಪ್ರತಾಪ್ ಸಿಂಹ

Steps taken to clean the Ring Road in Mysuru - Pratap Simha
Photo Credit : By Author

ಮೈಸೂರು: ನಗರದ ವ್ಯಾಪ್ತಿಗೆ ಒಳಪಡುವ 45 ಕಿ.ಲೋ ಮೀಟರ್ ರಿಂಗ್ ರಸ್ತೆಯಲ್ಲಿ ಬೆಂಕಿಗೆ ಆಹುತಿಯಾಗಿರುವ ಗಿಡ ಮರ ಮತ್ತು ತ್ಯಾಜ್ಯಗಳ  ತೆರವು ಅಭಿಯಾನಕ್ಕೆ ಫೆ.27ರಂದು ಚಾಲನೆ ನೀಡಲಾಗುವುದು ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದರು.

ನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ರಿಂಗ್ ರಸ್ತೆಯ (ರಾಷ್ರ್ಟೀಯ ಹೆದ್ದಾರಿ-275ಕೆ) ಸ್ವಚ್ಛತೆಗೆ ಸಂಬಂಧಿಸಿದಂತೆ  ಧಿಕಾರಿಗಳ ಸಭೆ ನಡೆಸಿದ ಅವರು, ಅನವಶ್ಯಕವಾಗಿ ರಿಂಗ್ ರಸ್ತೆಯಲ್ಲಿ ಕಸ ಸುರಿಯಲಾಗುತ್ತಿದೆ. ಅಲ್ಲದೆ ಕೆಲ ಕಿಡಿಗೇಡಿಗಳು ರಾತ್ರಿ ವೇಳೆ ಹಚ್ವಿದ ಬೆಂಕಿಯಿಂದಾಗಿ ಕಳೆದ ಮೂರು ನಾಲ್ಕು ವರ್ಷಗಳಿಂದ ಪೋಷಣೆ ಮಾಡಿದ ಗಿಡಗಳು ಸುಟ್ಟುಹೊಗಿವೆ. ರಾತ್ರಿ ವೇಳೆ ಕಳ್ಳರ ಕಾಟ ಹೆಚ್ಚಾಗಿದೆ ಎಂದು ರಿಂಗ್ ರಸ್ತೆಗಳಿಗೆ ಬೀದಿ ದೀಪ ಅಳವಡಿಸಿದ್ದರೂ ಕೆಲವು ಕಿಡಿಗೇಡಿಗಳು ಇಂತಹ ಕೃತ್ಯ ಎಸಗುತ್ತಿದ್ದಾರೆ ಎಂದು ಕಿಡಿ ಕಾರಿದರು.

ಬಾರ್ ತ್ಯಾಜ್ಯ, ಮಾಸಂದ ಅಂಗಡಿ, ಅನಿಮಲ್ ವೇಸ್ಟೇಜ್, ಕಟ್ಟಿಂಗ್ ಶಾಪ್‌ನವರು ಎಲ್ಲೆಂದರಲ್ಲಿ  ಬಿಸಾಡುವ ಕಸದಿಂದ ರಿಂಗ್ ರಸ್ತೆಯನ್ನು  ನೋಡಲು ಆಗುತ್ತಿಲ್ಲ. ಇದನ್ನು ಪಾಲಿಕೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಒಂದು ವೇಳೆ ಇದು ಮತ್ತೆ ಮುಂದುವರಿದರೆ ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬಿಲ್ಡರ್ಸ್‌ಗಳನ್ನು ಕಪ್ಪು ಪಟ್ಟಿಗೆ ಸೇರಿಸಿ: ಬಡಾವಣೆಗಳಿಗೆ ಸರಿಯಾದ ರೀತಿಯಲ್ಲಿ ನಲ್ಲಿ ಸಂಪರ್ಕ, ಯುಜಿಡಿಯಂತಹ ಮೂಲಭೂತ  ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸದೆ ಇರುವ ಲ್ಯಾಂಡ್ ಡೆವಲಪರ್ಸ್‌ಗಳನ್ನು ಮುಲಾಜಿಲ್ಲದೇ ಕಪ್ಪುಪಟ್ಟಿಗೆ ಸೇರಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ರಸ್ತೆಗಳಲ್ಲೆಲ್ಲ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು, ಪುಟ್ಟ ಮಕ್ಕಳ ಮೇಲೆ ದಾಳಿ ಮಾಡುತ್ತಿವೆ. ಅಲ್ಲದೇ ರಸ್ತೆಯಲ್ಲಿ ಓಡಾಡುವ  ಸಾರ್ವಜನಿಕರು ಮತ್ತು ವಾಹನ ಸವಾರರು ಇದರಿಂದ ಸಾಕಷ್ಟು ತೊಂದರೆಗೆ ಒಳಗಾಗುತ್ತಿದ್ದಾರೆ. ಹೀಗಾಗಿ ಕೂಡಲೇ ಬೀದಿ ನಾಯಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.

ಸಭೆಯಲ್ಲಿ ಉಪ ಮೇಯರ್ ಡಾ.ರೂಪ, ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು