ನಂಜನಗೂಡು: ನಾಳೆಯಿಂದ ನಡೆಯುವ ಜನಗಣತಿಯಲ್ಲಿ ಎಲ್ಲರೂ ಭಾಗವಹಿಸಿ ಎಂದು ನಂಜನಗೂಡಿನ ತಹಶೀಲ್ದಾರ್ ಡಾ.ಸ್ಮಿತಾ ರಾಮು ಮನವಿ ಮಾಡಿದ್ದಾರೆ.
ನಂಜನಗೂಡಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಏ.16 ರಿಂದ ಮೇ.16 ರವರಿಗೆ ಜನಗಣತಿ ನಡೆಯಲಿದೆ. ಪ್ರತಿಯೊಬ್ಬರು ಕೂಡ ಜನಗಣತಿಯಲ್ಲಿ ಭಾಗವಹಿಸುವ ಮೂಲಕ ತಮ್ಮ ಅಂಕಿ ಅಂಶಗಳನ್ನು ನೈಜ್ಯವಾಗಿ ಕೊಡಬೇಕು. ನಾಳೆಯಿಂದಲೇ ನಿಮ್ಮ ಮನೆ ಬಾಗಿಲಿಗೆ ಜನಗಣತಿದಾರರು ಬರಲಿದ್ದಾರೆ.
ಬಿಸಿಲಿನ ತಾಪಮಾನವು ಹೆಚ್ಚಾಗಿರುವುದರಿಂದ ನಿಮ್ಮ ಮನೆ ಬಾಗಿಲಿಗೆ ಬರುವ ಅಧಿಕಾರಿಗಳಿಗೆ ಸರಿಯಾದ ಮಾಹಿತಿಯನ್ನು ನೀಡುವುದರಿಂದ ನಮ್ಮ ಮುಂದಿನ ಜನಸಂಖ್ಯೆಗೆ ಅನುಗುಣವಾಗಿ ಸೌಲಭ್ಯಗಳನ್ನು ಕಲ್ಪಿಸಲು ಅನುಕೂಲವಾಗಲಿದೆ.
ಕೋವಿಡ್ ಇದ್ದ ಕಾರಣದಿಂದ ಜನಗಣತಿಯನ್ನು ಮಾಡಿರಲಿಲ್ಲ. ಈಗ ಕೇಂದ್ರ ಸರ್ಕಾರ ಜನಗಣತಿ ಮಾಡುತ್ತಿರುವುದರಿಂದ ಎಲ್ಲರೂ ಸಮೀಕ್ಷೆಯಲ್ಲಿ ಭಾಗವಹಿಸಿ ನೈಜವಾದ ಅಂಕಿ ಅಂಶಗಳನ್ನು ನೀಡುವಂತೆ ನಂಜನಗೂಡಿನಲ್ಲಿ ತಹಶೀಲ್ದಾರ್ ಡಾ.ಸ್ಮಿತಾ ರಾಮು ತಿಳಿಸಿದ್ದಾರೆ.

