News Karnataka Kannada
Wednesday, May 08 2024
ಮೈಸೂರು

ನಂಜನಗೂಡು: ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತೋತ್ಸವ

Kannada Sahitya Parishat celebrates the birth anniversary of Sri Nalwadi Krishnaraja Wadiyar
Photo Credit : News Kannada

ನಂಜನಗೂಡು: ನಗರದ ಶ್ರೀ ನೀಲಕಂಠೇಶ್ವರ ಶಾಲೆಯಲ್ಲಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ 139ನೇ ಜಯಂತೋತ್ಸವ ಕಾರ್ಯಕ್ರಮವನ್ನು
ನಂಜನಗೂಡು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇವರ ವತಿಯಿಂದ ಆಯೋಜನೆ ಮಾಡಲಾಗಿತ್ತು.

ಶ್ರೀ ನೀಲಕಂಠೇಶ್ವರ ಶಾಲೆಯ ಅಧ್ಯಕ್ಷ ಕೆ.ಎಸ್ ಅರುಣೇಶ್ ಜಯಂತೋತ್ಸವವನ್ನು ಉದ್ಘಾಟಿಸಿದರು. ಬಳಿಕ ಕನ್ನಡ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಚಿಕ್ಕ ರಂಗನಾಯಕ ಮಾತನಾಡಿ, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದಾರೆ. ಕೆಆರ್‌ಎಸ್‌ ಅಣೆಕಟ್ಟು ನಿರ್ಮಿಸಲು ಅರಮನೆಯಲ್ಲಿದ್ದ ಚಿನ್ನಾಭರಣ ಮಾರಾಟ ಮಾಡಿ ಕಟ್ಟಿಸಿದರು.

ಯುವರಾಜ ಕಾಲೇಜು, ಮಹಿಳಾ ವಿಜ್ಞಾನ ಕಾಲೇಜು, ಬ್ಯಾಂಕ್ ಸ್ಥಾಪನೆ, ಕೆಆರ್ ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆ, ವಿಶ್ವದಲ್ಲಿಯೇ ಮೊಟ್ಟಮೊದಲ ಬಾರಿಗೆ ಜಲ ವಿದ್ಯುತ್ ಸ್ಥಾಪನೆ. ಕಬ್ಬಿನ ಮತ್ತು ಉಕ್ಕಿನ ಕಾರ್ಖಾನೆ, ಮೈಸೂರು ವಿಶ್ವವಿದ್ಯಾನಿಲಯ, ಮಹಾರಾಜ ಮತ್ತು ಮಹಾರಾಣಿ ಕಾಲೇಜು ಸ್ಥಾಪನೆ ಮಾಡಿದ್ದರು. ಹೆಣ್ಣು ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಬೇಕು ಎಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಹೇಳಿದ್ದರು.

ಹಿಂದುಳಿದವರಿಗೆ ಮೊದಲಿಗೆ ಮೀಸಲಾತಿಯನ್ನು ಕಲ್ಪಿಸಿದ್ದರು. ರಾಜರುಗಳು ಯುದ್ಧವನ್ನು ಮಾಡುತ್ತಿದ್ದರು‌ ಆದರೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಜನಪರ ಕೆಲಸಗಳನ್ನು ಮಾಡಿ ಇನ್ನು ಜನರ ಮನಸ್ಸಲ್ಲಿ ಜೀವಂತವಾಗಿರುವ ಮಹಾರಾಜರು ಎಂದು ಬಣ್ಣಿಸಿದರು.

ಇನ್ನೂ ವಿದ್ಯಾರ್ಥಿಗಳಿಂದ ಭರತನಾಟ್ಯ ಹಾಗೂ ಲಘು ಗಾಯನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಲತಾ ಮುದ್ದು ಮೋಹನ್, ಸಾಹಿತಿ ಕೊತ್ತಲವಾಡಿ ಶಿವಕುಮಾರ್, ನಗರಸಭಾ ಸದಸ್ಯ ಶ್ವೇತ ಲಕ್ಷ್ಮಿ, ಶ್ರೀಕಂಠೇಶ್ವರ ಶಾಲೆಯ ಕಾರ್ಯದರ್ಶಿ ಕುಮಾರಸ್ವಾಮಿ, ಗೌರವ ಕಾರ್ಯದರ್ಶಿ ಮಂಜುನಾಥ್, ಗೌರವ ಕೋಶಾಧ್ಯಕ್ಷ ರಂಗಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು