ಮೈಸೂರು: ಡಿಸಿಎಂ ಡಿಕೆ ಶಿವಕುಮಾರ್ ಅವರು ಮತ್ತೆ ತಿಹಾರ್ ಜೈಲು ಸೇರುತ್ತಾರೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಡಿ.ಕೆ ಶಿವಕುಮಾರ್ ಹಾಗೂ ಡಿ.ಕೆ ಸುರೇಶ್ ಇಬ್ಬರು ಗೂಂಡಾಗಳು ಎಂಬುದು ಜನರಿಗೆ ಗೊತ್ತಿದೆ. ನನ್ನ ಮಾತಿಗೆ ಸಿನ್ಮಾ ಸ್ಟೈಲ್ನಲ್ಲಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಅವರ ಅರ್ಧ ಜೀವನ ತಿಹಾರ್ ಜೈಲಿನಲ್ಲಿ ಸೆಟ್ಲ್ಮೆಂಟ್ ಆಗಿದೆ. ಉಳಿದ ಇನ್ನೊಂದು ಪಾರ್ಟ್ ಕೂಡ ಜೈಲಿನಲ್ಲೇ ಸೆಟ್ಲ್ಮೆಂಟ್ ಆಗುತ್ತೆ. ನೋಡ್ತಾ ಇರಿ ಇಷ್ಟರಲ್ಲೆ ಡಿಕೆಶಿ ಮತ್ತೆ ತಿಹಾರ್ ಜೈಲು ಸೇರುತ್ತಾರೆ ಎಂದು ಹೇಳಿದರು.