News Karnataka Kannada
Saturday, May 18 2024
ಮೈಸೂರು

ಮೈಸೂರು: ಮನೆಯಲ್ಲೇ ವೇಶ್ಯಾವಾಟಿಕೆ, ಮಹಿಳೆ ಬಂಧನ

ವಿಮಾನ ನಿಲ್ದಾಣದ ಬಳಿ ಇರುವ ಏರೋಸಿಟಿಯ ಐಷಾರಾಮಿ ಹೋಟೆಲ್‌ನಲ್ಲಿ 15 ದಿನಗಳ ಕಾಲ ಯಾವುದೇ ಹಣವನ್ನು ಪಾವತಿಸದೆ ತಂಗಿದ್ದ ಆರೋಪದ ಮೇಲೆ 37 ವರ್ಷದ ಆಂಧ್ರದ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Photo Credit : Pexels

ಮೈಸೂರು: ಮನೆಯಲ್ಲಿಯೇ ಯುವತಿಯರನ್ನಿಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆಯನ್ನು ಸಿಸಿಬಿ.ಘಟಕದ ಪೊಲೀಸರು ಬಂಧಿಸಿ ಇಬ್ಬರು ಯುವತಿಯರನ್ನು ರಕ್ಷಿಸಿದ ಘಟನೆ ನಗರದ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗುರುಮಲ್ಲೇಶ್ವರ ಬಡಾವಣೆಯಲ್ಲಿ ನಡೆದಿದೆ.

ಮಹಿಳೆಯೊಬ್ಬಳು ಗುರುಮಲ್ಲೇಶ್ವರ ಬಡಾವಣೆಯಲ್ಲಿ ಮನೆ(ನಂ: 583/1) ಯನ್ನು ಪಡೆದು ಅದರಲ್ಲಿ ಸ್ಥಳೀಯ ಮತ್ತು ಹೊರ ರಾಜ್ಯದ ಯುವತಿಯರಿಗೆ ಹಣದ ಆಮಿಷವೊಡ್ಡಿ ಕರೆಯಿಸಿಕೊಂಡು ಅವರನ್ನು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಸಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದಳು.

ಈ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ಮೈಸೂರು ನಗರದ ಡಿ.ಸಿ.ಪಿ ಗೀತ ಎಂ.ಎಸ್ ಐ.ಪಿ.ಎಸ್. ಮತ್ತು ಸಿ.ಸಿ.ಬಿ.ಯ ಎ.ಸಿ.ಪಿ ಸಿ.ಕೆ.ಅಶ್ವತನಾರಾಯಣರವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ.ಯ ಇನ್ಸ್ ಪೆಕ್ಟರ್ ಎ.ಮಲ್ಲೇಶ, ಆಲನಹಳ್ಳಿ ಠಾಣಾ ಇನ್ಸ್‌ಪೆಕ್ಟರ್ ಶ್ರೀಕಾಂತ್, ಪಿ.ಎಸ್.ಐ ಪ್ರತಿಭಾ ಜಂಗವಾಡ ಸಿಬ್ಬಂದಿಗಳಾದ ರಾಜು.ಆರ್, ಎ.ಎಸ್.ಐ ಕೆ.ಜಿ. ಶ್ರೀನಿವಾಸ್, ರಾಧೇಶ್ ಮತ್ತು ಎನ್.ಜಿ.ಮಮತ ಅವರು ಕಾರ್ಯಾಚರಣೆ ನಡೆಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆಯನ್ನು ಬಂಧಿಸಿ ಆಕೆ ಬಳಿಯಿಂದ ಮೂರು ಮೊಬೈಲ್ ಫೋನ್‌ಗಳು ಹಾಗೂ 2ಸಾವಿರ ನಗದನ್ನು ವಶಪಡಿಸಿಕೊಂಡು ಕೋಲ್ಕತ್ತಾ ಹಾಗೂ ಮೈಸೂರು ಮೂಲದ ಇಬ್ಬರು ಯುವತಿರನ್ನು ರಕ್ಷಣೆ ಮಾಡಿದ್ದಾರೆ. ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು