News Karnataka Kannada
Friday, May 10 2024
ಮೈಸೂರು

ಮೈಸೂರು: ಹುಣಸೂರಿನಲ್ಲಿ ಹೆಚ್1 ಎನ್1ಗೆ ಗರ್ಭಿಣಿ ಬಲಿ

Mysuru: Pregnant woman dies of H1N1 in Hunsur
Photo Credit : By Author

ಮೈಸೂರು: ಕೊರೊನಾ ನಡುವೆಯೇ ಡೆಂಗ್ಯೂ ಮತ್ತು ಹೆಚ್1ಎನ್1ಜನರನ್ನು ಕಾಡುತ್ತಿದ್ದು, ಈಗಾಗಲೇ ಹಲವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿರಲಿಲ್ಲ. ಆದರೆ ಇದೀಗ ಗರ್ಭಿಣಿಯೊಬ್ಬರು ಮೃತಪಟ್ಟಿದ್ದು, ಇವರ ಸಾವಿಗೆ ಹೆಚ್1ಎನ್1 ಕಾರಣ ಎಂದು ಹೇಳಲಾಗಿದೆ.

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕೋಣನಹೊಸಹಳ್ಳಿ ಗ್ರಾಮದ ಛಾಯಾ ಮೃತಪಟ್ಟ ದುರ್ದೈವಿ. ಇವರು ಗರ್ಭಿಣಿಯಾಗಿದ್ದು, ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಮೈಸೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಇತ್ತೀಚೆಗಿನ ದಿನಗಳಲ್ಲಿ ಬಹಳಷ್ಟು ಜನರನ್ನು ಕಾಡುತ್ತಿದ್ದು, ಕೆಲವರು ಆಸ್ಪತ್ರೆಗೆ ತೆರಳದೆ ಮನೆಯಲ್ಲಿಯೇ ಮಾತ್ರೆಗಳನ್ನು ಸೇವಿಸುತ್ತಿದ್ದಾರೆ. ಆದರೆ ತಮಗೆ ಬಂದಿರುವ ಜ್ವರ ಸಾಮಾನ್ಯ ಜ್ವರನಾ ಅಥವಾ ಹೆಚ್1ಎನ್1, ಡೆಂಗ್ಯೂನಾ ಎಂಬುದು ಗೊತ್ತಾಗುವುದಿಲ್ಲ. ಜ್ವರ ಉಲ್ಭಣಗೊಂಡ ಬಳಿಕ ಆಸ್ಪತ್ರೆಗೆ ತೆರಳುತ್ತಾರೆ. ಇದು ಒಳ್ಳೆಯದಲ್ಲ. ಜ್ವರ ಬಂದ ತಕ್ಷಣ ಆಸ್ಪತ್ರೆಗೆ ತೆರಳಿ ತಪಾಸಣೆ ನಡೆಸುವುದು ಬಹುಮುಖ್ಯವಾಗಿದೆ.

ಈಗಾಗಲೇ ಸೊಳ್ಳೆಗಳು ಹೆಚ್ಚಾಗುತ್ತಿದ್ದು, ಮನೆ ಸೇರಿದಂತೆ ಸುತ್ತಮುತ್ತ ನೀರು ನಿಲ್ಲುವುದಕ್ಕೆ ಅವಕಾಶ ನೀಡದೆ ಶುಚಿತ್ವಕ್ಕೆ ಆದ್ಯತೆ ನೀಡುವುದು ಬಹುಮುಖ್ಯವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು