News Karnataka Kannada
Thursday, May 02 2024
ಮೈಸೂರು

ಮೈಸೂರು: ದಸರಾ ಕುಸ್ತಿಗೆ ತೊಡೆ ತಟ್ಟಲು ಪೈಲ್ವಾನರು ತಯಾರಿ

Mysore
Photo Credit : By Author

ಮೈಸೂರು: ಮೈಸೂರು ಕುಸ್ತಿ ಪಂದ್ಯಾವಳಿಗೆ ಜೋಡಿ ಕಟ್ಟುವ ಕಾರ್ಯ ಆರಂಭವಾಗಿದ್ದು, ಭಾನುವಾರ 140 ಜೋಡಿಗಳನ್ನು ಕಟ್ಟಲಾಗಿದೆ.

ನಗರದ ವಸ್ತುಪ್ರದರ್ಶನ ಪ್ರಾಧಿಕಾರದ ಕಾಳಿಂಗರಾವ್ ಭವನದಲ್ಲಿ ಕುಸ್ತಿಪಟುಗಳಿಗೆ ಬೆನ್ನುತಟ್ಟುವ ಮೂಲಕ ಜೋಡಿ ಕಟ್ಟುವ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮತ್ತು ಶಾಸಕ ಜಿ.ಟಿ.ದೇವೇಗೌಡ ಚಾಲನೆ ನೀಡಿದ್ದಾರೆ.

ಜೋಡಿಕಟ್ಟುವ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪಸಿಂಹ, ಮೇಯರ್ ಶಿವಕುಮಾರ್, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್, ದಸರಾ ಕುಸ್ತಿ ಉಪ ಸಮಿತಿಯ ವಿಶೇಷಾಧಿಕಾರಿಯೂ ಆದ ಎಸ್‌ಪಿ ಬಿ.ಎನ್.ನಂದಿನಿ ಭಾಗವಹಿಸಿದ್ದರು.

ಜೋಡಿ ಕಟ್ಟುವ ಕಾರ್ಯದಲ್ಲಿ ತೊಡಗಿರುವ ಮಲ್ಲುಸ್ವಾಮಿ ಮಾತನಾಡಿ ರಾಷ್ಟ್ರ ಮತ್ತು ಅಂತಾಷ್ಟ್ರೀಯ ಮಟ್ಟದ ಹೊರ ರಾಜ್ಯ, ಜಿಲ್ಲೆಗಳ ಪ್ರಖ್ಯಾತ ಪೈಲ್ವಾನರು ಜೋಡಿ ಕಟ್ಟುವ ಕಾರ್ಯ ಮುಂದಿನ ಎರಡು ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಮಂಗಳೂರಿನಲ್ಲಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಮೈಸೂರಿನ ಪ್ರಸಿದ್ದ ಮತ್ತು ರಾಜ್ಯದ ವಿವಿಧ ಭಾಗಗಳ ಪೈಲ್ವಾನರು ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ ಇಂದು ಪ್ರಖ್ಯಾತ ಕುಸ್ತಿ ಪಟುಗಳು ಜೋಡಿ ಕಟ್ಟಿಲ್ಲ ಎಂದು ಹೇಳಿದರು.

ನಶಿಸಿ ಹೋಗುತ್ತಿರುವ ಗಂಡುಕಲೆ ನಾಡ ಕುಸ್ತಿಗೆ ವರ್ಷದಿಂದ ವರ್ಷಕ್ಕೆ ಕುಸ್ತಿ ಪಟುಗಳ ಸಂಖ್ಯೆ ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಈ ಬಾರಿ ಬಹಳಷ್ಟು ಹೊಸ ಪ್ರತಿಭೆಗಳು ಕುಸ್ತಿ ಅಖಾಡಕ್ಕಿಳಿದಿರುವುದು ವಿಶೇಷವಾಗಿದೆ ಎಂದು ತಿಳಿಸಿದರು.

ಜೋಡಿ ಕಟ್ಟುವ ಕಾರ್ಯಕ್ಕೆ ನಗರವೂ ಸೇರಿದಂತೆ ನಾಡಿನ ವಿವಿಧ ಗರಡಿ ಮನೆಗಳಿಂದ ಮಹಿಳೆಯರೂ ಸೇರಿದಂತೆ 300ಕ್ಕೂ ಹೆಚ್ಚು ಪೈಲ್ವಾನರು ಆಗಮಿಸಿದ್ದರು.

ಮಹಿಳೆಯರು, ಪುರುಷರು, ಯುವಕರು, ಚಿಣ್ಣರಿಗೆ ಪ್ರತ್ಯೇಕವಾಗಿ ಜೋಡಿ ಕಟ್ಟಲಾಯಿತು. ನಂತರ ಚಿಣ್ಣರು, ಪೈಲ್ವಾನರು ಗದೆ ತಿರುಗಿಸುವ, ಕಲ್ಲು ಗುಂಡು ಎತ್ತುವ, ದಂಡ ಹೊಡೆಯುವ ಸ್ಪರ್ಧೆ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ಭಾಗಿಯಾದರು.

ವಯಸ್ಸು, ತೂಕ, ದೇಹದಾರ್ಢ್ಯತೆ, ವೈಯಕ್ತಿಕ ಮಾಹಿತಿಗಳ ಆಧಾರದ ಮೇಲೆ ಹಿರಿಯ ಉಸ್ತಾದ್‌ಗಳು ಒಟ್ಟು 140 ಜೋಡಿಗಳನ್ನು ಕಟ್ಟಿದರು. ಇದರಲ್ಲಿ 15 ಮಹಿಳಾ ಕುಸ್ತಿ ಪಟುಗಳು ಮತ್ತು 20 ಪುಟಾಣಿ ಪೈಲ್ವಾನರ ಜೋಡಿಗಳು ಇದ್ದವು.

ಇದೇ ವೇಳೆ ನಡೆದ ಪುರುಷರ ವಿಭಾಗ ದಂಡ ಹೊಡೆಯುವ ಸ್ಪರ್ಧೆಯಲ್ಲಿ ಶಾಹೀದ್ ಪಾಷ್ (ಪ್ರ-51 ದಂಡ), ಮೊಹ್ಮದ್ ಸಾಕೀಬ್ (ದ್ವಿ-46 ದಂಡ), ಸೈಯದ್ ಹುಸೇನ್ (ತೃ-43 ದಂಡ). ಗದೆ ತಿರುಗಿಸುವ ಸ್ಪರ್ಧೆಯಲ್ಲಿ ಸಲ್ಮಾನ್ ಖಾನ್ (ಪ್ರ-97 ಬಾರಿ), ಯಶವಂತ (ದ್ವಿ-82), ಯುನಿಸ್ ಖಾನ್ (ತೃ-80). ದಂಡ ಸರ್ಪೋರ್ಟ್ ಸ್ಪರ್ಧೆಯಲ್ಲಿ ಆಕಾಶ್ (ಪ್ರ), ವಿಕಾಸ (ದ್ವಿ), ಸೈಯದ್ ಹುಸೇನ್ (ತೃ). ಬಸ್ಕಿ ಹೊಡೆಯುವ ಸ್ಪರ್ಧೆ ಮಕ್ಕಳ ವಿಭಾಗದಲ್ಲಿ ನಿಖಿಲ್ (ಪ್ರ-71ಬಸ್ಕಿ), ಚೈತನ್ಯ (ದ್ವಿ-67), ಧನುಷ್ (ತೃ-62), ಯುವಕರ ವಿಭಾಗದಲ್ಲಿ ವಿಕಾಸ್ (ಪ್ರ-74 ಬಸ್ಕಿ), ಸೈಯದ್ ಹುಸೇನ್ (ದ್ವಿ-73) ಮತ್ತು ಕಿರಣ್ (ತೃ-72), ಹೆಣ್ಣು ಮಕ್ಕಳ ವಿಭಾಗ ದಂಡ ಸರ್ಪೋಟ್ ಸ್ಪರ್ಧೆಯಲ್ಲಿ ಜಾನ್ಹವಿ (ಪ್ರ-32ದಂಡ), ರಕ್ಷ (ದ್ವಿ-28), ನಂದಿನಿ (ತೃ-26), ದಂಡ ಹೊಡೆಯುವ ಸ್ಪರ್ಧೆಯಲ್ಲಿ ಸ್ಪರ್ಧಿಸಿದ 4 ಮಂದಿಯಲ್ಲಿ ನಂದಿನಿ ಎಂಬುವರು 48 ದಂಡ ಹೊಡೆದು ಪ್ರಥಮ ಸ್ಥಾನ ಗಳಿಸಿ ಗಮನಸೆಳೆದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು