News Karnataka Kannada
Monday, May 13 2024
ಮೈಸೂರು

ಮೈಸೂರು: ನಗರದಲ್ಲಿ ಅ.12ರವರೆಗೆ ವಿದ್ಯುತ್ ದೀಪಾಲಂಕಾರ

Mysuru: Electric lights to be lit in the city till Oct. 12
Photo Credit : By Author

ಮೈಸೂರು: ಮೈಸೂರಿಗರಿಗೆ ಮತ್ತು ಮೈಸೂರಿಗೆ ಬರುವ ಪ್ರವಾಸಿಗರಿಗೆ ಇನ್ನೆರಡು ದಿನ ನಗರದ ವಿದ್ಯುತ್ ದೀಪಾಲಂಕಾರ ವೀಕ್ಷಣೆಗೆ ಅವಕಾಶವನ್ನು ಸೆಸ್ಕಾಂ ಕಲ್ಪಿಸಿದ್ದು, ಮೈಸೂರು ಹೃದಯಭಾಗದಲ್ಲಿ ಅ.12ರವರೆಗೆ ದೀಪಾಲಂಕಾರ ಇರಲಿದೆ.

ಈ ಕುರಿತು ಮಾತನಾಡಿದ ಸೆಸ್ಕಾಂ ಎಂಡಿ ಜಯವಿಭವಸ್ವಾಮಿ, ಎರಡು ದಿನ ಟ್ರಯಲ್ ಸೇರಿದಂತೆ ಇದುವರೆಗೂ 17ದಿನ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಸುಮಾರು 5ಕೋಟಿ ರೂ. ವೆಚ್ಚವಾಗಿದೆ. ಸಾರ್ವಜನಿಕರಿಂದ ಇನ್ನಷ್ಟು ದಿನಗಳ ಕಾಲ ವೀಕ್ಷಣೆಗೆ ಅವಕಾಶ ನೀಡುವಂತೆ ಸಾಕಷ್ಟು ಒತ್ತಾಯ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ಈ ವಿಷಯ ತರಲಾಗಿದ್ದು, ಇನ್ನೆರಡು ದಿನಗಳ ಕಾಲ ನಗರದ ಹೃದಯ ಭಾಗದಲ್ಲಿ ಮಾತ್ರ ದೀಪಾಲಂಕಾರ ಮುಂದುವರೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ದಸರಾ ಮಹೋತ್ಸವದ ಪ್ರಯುಕ್ತ ನಗರದಲ್ಲಿ ಮಾಡಲಾಗಿದ್ದ ವಿದ್ಯುತ್ ದೀಪಾಲಂಕಾರ ಉತ್ತಮ ಪ್ರತಿಕ್ರಿಯೆ ಮತ್ತು ಇನ್ನಷ್ಟು ದಿನಗಳ ಕಾಲ ಮುಂದುವರಿಸುವಂತೆ ಸಾರ್ವಜನಿಕರು ಮನವಿ ಮಾಡಿದ ಹಿನ್ನೆಲೆಯಲ್ಲಿ ನಗರದ ಹೃದಯ ಭಾಗದಲ್ಲಿ ಮಾತ್ರ ವಿದ್ಯುತ್ ದೀಪಾಲಂಕಾರವನ್ನು ಮುಂದುವರೆಸಲಾಗುತ್ತಿದೆ. ದೀಪಾಲಂಕಾರವನ್ನು ಅ.10ಕ್ಕೆ ಅಂತಿಮಗೊಳಿಸಲಾಗಿತ್ತು. ಹೀಗಾಗಿ ಸೋಮವಾರ ರಾತ್ರಿ ಅರಮನೆ ಸುತ್ತಲಿನ ರಸ್ತೆಗಳು, ಚಾಮರಾಜ ಜೋಡಿ ರಸ್ತೆ, ಜೆಎಲ್ಬಿ ರಸ್ತೆಗಳಲ್ಲಿ ಹೆಚ್ಚು ಜನಸಂದಣಿ ಕಂಡು ಬಂದಿತು. ಇದೀಗ ಇನ್ನೆರಡು ದಿನ ವಿಸ್ತರಣೆ ಮಾಡಿರುವುದರಿಂದ ರಾತ್ರಿಯಾಗುತ್ತಿದ್ದಂತೆಯೇ ಜನಜಂಗುಳಿ ಹೆಚ್ಚಾಗುವ ಸಾಧ್ಯತೆಯಿದೆ.

ಈ ಬಾರಿ ಮೈಸೂರು ದಸರಾ ಹಿನ್ನಲೆಯಲ್ಲಿ, 124 ಕಿ.ಮೀ ರಸ್ತೆ ಹಾಗೂ 96 ವೃತ್ತ ಹಾಗೂ ನಗರದಾದ್ಯಂತ ಸುಮಾರು 30 ಬೃಹತ್ ಕಲಾಕೃತಿಗಳನ್ನು ನಿರ್ಮಾಣ ಮಾಡಲಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು