News Karnataka Kannada
Sunday, April 28 2024
ಮೈಸೂರು

ಬ್ರ್ಯಾಂಡ್ ಮೈಸೂರು ಲೋಗೋ,ಟ್ಯಾಗ್‌ಲೈನ್  ಬಿಡುಗಡೆ

Mysuru: Brand Mysore logo launched
Photo Credit : By Author

ಮೈಸೂರು: ಮೈಸೂರನ್ನು ಜಾಗತಿಕ ಮಟ್ಟದಲ್ಲಿ ಬ್ರ್ಯಾಂಡಿಂಗ್ ಮಾಡುವ ಹಾಗೂ ಜಿಲ್ಲೆಯ ಪ್ರವಾಸೋದ್ಯಮ, ಕಲೆ, ಸಂಸ್ಕೃತಿ, ಪರಂಪರೆ ಬಿಂಬಿಸುವ ಉದ್ದೇಶದಿಂದ ಹೊರ ತರಲಾದ ಬ್ರ್ಯಾಂಡ್ ಮೈಸೂರು ಲೋಗೋ ಹಾಗೂ ಟ್ಯಾಗ್‌ಲೈನನ್ನು  ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಅನಾವರಣಗೊಳಿಸಿದರು.

ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ  ಆಯೋಜಿಸಿದ್ದ ಲೋಗೋ ಬಿಡುಗಡೆ ಕಾರ್ಯಕ್ರಮದಲ್ಲಿ ಲೋಗೋ ಜೊತೆ ನಮ್ಮ ಪರಂಪರೆ, ನಿಮ್ಮ ತಾಣ ಎಂಬ ಅಡಿಬರಹ (ಟ್ಯಾಗ್‌ಲೈನ್) ಅನ್ನು ಹೊರತರಲಾಯಿತು.

ಈ ವೇಳೆ ಮಾತನಾಡಿದ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್, ಮೈಸೂರು ಬ್ರ್ಯಾಂಡಿಂಗ್‌ಗಾಗಿ ಇದು ದೊಡ್ಡ ಹೆಜ್ಜೆ. ಇದರಿಂದ ಹಲವಾರು ಅನುಕೂಲತೆಗಳು ಆಗಲಿದೆ. ಅಕ್ಕಪಕ್ಕದ ಜಿ ಹಾಗೂ ರಾಜ್ಯಗಳನ್ನು ಆರ್ಕಸಿಸುವುದಕ್ಕಾಗಿ ಮಾಡುತ್ತಿಲ್ಲ. ವಿಶ್ವದ ಪ್ರವಾಸಿ ಪ್ರೇಮಿಗಳನ್ನು ಸೆಳೆಯಲು ಮುಖ್ಯ ಉದ್ದೇಶವಾಗಿದೆ. ಇತಿಹಾಸ ತಿಳಿಯಲು ಅನುಕೂಲವಾಗುತ್ತದೆ ಎಂದರು.

ಮೈಸೂರನ್ನು ಕೇವಲ ಅರಮನೆಗಳ ನಗರಿ ಎಂದೇ ನೋಡುತ್ತೇವೆ. ಆದರೆ, ಇಲ್ಲಿ ಪ್ರವಾಸಿ ಕ್ಷೇತ್ರಗಳನ್ನು ಇಲ್ಲಿ ನೋಡಬಹುದು. ಜಗತ್ತಿನಲ್ಲಿ ಹಲವಾರು ಪ್ರವಾಸಿ ಕ್ಷೇತ್ರಗಳು ಪ್ರವಾಸಿಗರನ್ನು ಆಕರ್ಷಿಸುವಂತೆ ಮಾಡುತ್ತದೆ. ಹಳೆಬೇಡು  ಬೇಲೂರಿನ ೭೨  ಸುಂದರಮೂರ್ತಿಗಳನ್ನು ಬ್ರಿಟಿಷರು ತಮ್ಮ ದೇಶದ ಮ್ಯೂಸಿಯಂನಲ್ಲಿ ಇಟ್ಟುಕೊಂಡಿzರೆ. ಇದನ್ನು ಮತ್ತೆ ರಾಜ್ಯಕ್ಕೆ ತರುವ  ಬಗ್ಗೆ ಪ್ರಮಾಣಿಕವಾಗಿ ಸರ್ಕಾರ ಪ್ರಯತ್ನ ಮಾಡಲಿದೆ ಎಂದು ಹೇಳಿದರು.

ಮೈಸೂರಿನ ಹಳೆಯ ಪಾರಂಪರಿಕ ಅಥವಾ ಹಳೆಯ ಕಟ್ಟಡಗಳನ್ನು ಸರ್ಕಾರ ಒಂದೇ ರಕ್ಷಿಸಲು ಸಾಧ್ಯವಿಲ್ಲ. ಅದರ  ರಕ್ಷಣೆಗೆ ಜನರ ಸಹಕಾರ, ಸಹಾಯ ಅಗತ್ಯವಿದೆ. ೨೫ ಸಾವಿರಕ್ಕೂ ಹೆಚ್ಚು ಸ್ಮಾರಕಗಳು ನಮ್ಮಲ್ಲಿವೆ. ಇದರಲ್ಲಿ ಎಲ್ಲವನ್ನೂ  ರಕ್ಷಿಸಲಾಗುತ್ತಿಲ್ಲ. ೫೦೦ ಸ್ಮಾರಕ ಗುರುತಿಸಿ ರಕ್ಷಿಸುವುದರ ಜೊತೆಗೆ ದತ್ತು ಕೊಡುವ ಪ್ರಕ್ರಿಯೇಯನ್ನು ಶೀಘ್ರದ ತರುತ್ತೇವೆ  ಎಂದರು.

ವಿದೇಶಗಲ್ಲಿರುವ ಭಾರತೀಯರಿಗೆ ತಮ್ಮ ಊರಿನ, ಗ್ರಾಮದ ಸ್ಮಾರಕಗಳ ಬಗ್ಗೆ ಅಭಿಮಾನದ ಆಸಕ್ತಿ ಇದೆ. ಇದರಿಂದ  ಅವರು  ತಮ್ಮ ಗ್ರಾಮದ ಅಭಿಮಾನವಿದೆ. ಅಂತಹವರು ತಮ್ಮ ಊರಿನ ಸ್ಮಾರಕಗಳನ್ನು ದತ್ತು ತೆಗೆದುಕೊಳ್ಳಲು ಆಸಕ್ತರಾಗಿದ್ದರೆ.  ಹೀಗಾಗಿ ಸ್ಮಾರಕಗಳನ್ನು ಮುಂದಿನ ದಿನಗಳಲ್ಲಿ ದತ್ತು ತೆಗೆದುಕೊಳ್ಳುವವರಿಗೆ ಸರ್ಕಾರ ಪ್ರೋತ್ಸಾಹ ನೀಡಲಿದೆ ಎಂದು  ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ಜಿಲ್ಲೆಯಲ್ಲಿ ಕೇವಲ ಅರಮನೆ, ಮೃಗಾಲಯ ಮಾತ್ರವಲ್ಲದೇ 24ಕ್ಕೂ ಹೆಚ್ಚು ಪ್ರವಾಸಿ ತಾಣಗಳಿವೆ. ಇವುಗಳನ್ನು ಜಗತ್ತಿಗೆ ತೋರಿಸಬೇಕು. ಮೈಸೂರು ಪ್ರವಾಸಿಗರಿಗೆ ಸುರಕ್ಷಿತವಾಗಿದೆ ಎಂದು ತಿಳಿಸಬೇಕು.  ದಸರಾ ಹಾಗೂ ಅರಮನೆ ಮಾತ್ರ ಪ್ರವಾಸೋದ್ಯಮದ ಕೇಂದ್ರ ಬಿಂದುವಲ್ಲ. ತಲಕಾಡಿನ ಸೋಮನಾಥಪುರ ಸೇರಿದಂತೆ  ಹಲವಾರು ತಾಣಗಳಿವೆ. ಅವುಗಳನ್ನು ಪ್ರವಾಸಿಗರಿಗೆ ತಲುಪುವಂತೆ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಶಾಸಕರಾದ ರವಿಶಂಕರ್, ದರ್ಶನ್ ಧ್ರುವನಾರಾಯಣ್, ಎಂಎಲ್‌ಸಿ ಸಿ.ಎನ್.ಮಂಜೇಗೌಡ, ಜಿಪಂ  ಸಿಇಒ ಕೆ.ಎಂ.ಗಾಯತ್ರಿ, ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಎಂ.ಕೆ.ಸವಿತಾ, ಪುರಾತತ್ವ ಇಲಾಖೆ ಆಯುಕ್ತ  ದೇವರಾಜು, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ.ಹರೀಶ್ ಸೇರಿದಂತೆ ಇತರರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು