ಮಧ್ಯಪ್ರದೇಶ: ಬಿಜೆಪಿ ಗೆಲುವು ಸಾಧಿಸಿರುವ ಮೂರು ರಾಜ್ಯಗಳ ಪೈಕಿ ಈಗಾಗಲೇ ಛತ್ತೀಸ್ಗಢಕ್ಕೆ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎನ್ನುವ ಪ್ರಶ್ನಗೆ ಇದೀಗ ತೆರೆ ಬಿದ್ದಿವೆ. ಇಂದು ರಾಜಸ್ಥಾನ ಹಾಗೂ ಮಧ್ಯಪ್ರದೇಶಕ್ಕೂ ಮುಖ್ಯಮಂತ್ರಿಗಳ ಹೆಸರನ್ನು ಘೋಷಣೆ ಮಾಡುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ಬೆಳಗ್ಗೆ 11 ಗಂಟೆಗೆ ವೀಕ್ಷಕರು ಮಧ್ಯಪ್ರದೇಶಕ್ಕೆ ತಲುಪಿದ್ದಾರೆ. ರಾಜಸ್ಥಾನದಲ್ಲಿ ಸಿಎಂ ಹುದ್ದೆಗೆ ಪೈಪೋಟಿ ಬಿಜೆಪಿ ನಾಯಕರಲ್ಲಿ ಮಾತ್ರ ಇತ್ತು, ಆದರೆ ಈಗ ಕಾಂಗ್ರೆಸ್ ನಾಯಕರೂ ಪೈಪೊಟಿ ಶುರುವಾಗಿದೆ. ಕಿಶೋರಿ ಮೀನಾ ಅವರನ್ನು ಸಿಎಂ ಮಾಡುವಂತೆ ಕಾಂಗ್ರೆಸ್ ಶಾಸಕ ರಾಮಕೇಶ್ ಮೀನಾ ಬಿಜೆಪಿಗೆ ಒತ್ತಾಯಿಸುತ್ತಿದ್ದಾರೆ.
ಮಧ್ಯಪ್ರದೇಶದ ನೂತನ ಸಿಎಂ ಆಯ್ಕೆ ಕುರಿತು ಬಿಜೆಪಿ ಇಂದು ಸಂಜೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ನಂತರ ಪಕ್ಷದ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.
ಇಂದು ಮಧ್ಯಾಹ್ನ 3.30ರ ನಂತರ ಮಧ್ಯಪ್ರದೇಶದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಈ ಸಭೆಯಲ್ಲಿ ವೀಕ್ಷಕರು ಕೂಡ ಭಾಗವಹಿಸಲಿದ್ದಾರೆ. ಇದರಲ್ಲಿ ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ವಿಚಾರ ನಡೆಯಲಿದೆ.