News Karnataka Kannada
Friday, May 10 2024
ಮೈಸೂರು

ಜಾಗತಿಕ ಮಟ್ಟದ ಮನ್ನಣೆ ಪಡೆದುಕೊಂಡ ‘ಮೈಸೂರ್ ಪಾಕ್​’

mysore pak
Photo Credit : News Kannada

ಮೈಸೂರು: ಮೈಸೂರು ಮಲ್ಲಿಗೆ, ಮೈಸೂರು ವೀಳ್ಯದೆಲೆ ಜತೆಗೆ ಮೈಸೂರ್ ಪಾಕ್ ಗೂ ಸ್ಥಾನ ಇದ್ದೇ ಇದೆ. ಸಿಹಿ ತಿನಿಸುಗಳಲ್ಲಿ ಮೈಸೂರನ್ನು ದೇಶ ವಿದೇಶಗಳಲ್ಲಿ ಪರಿಚಯಿಸುತ್ತಿರುವ ಏಕೈಕ ತಿನಿಸು ಮೈಸೂರ್ ಪಾಕ್. ತನ್ನ ಹೆಸರಿನಲ್ಲಿಯೇ ಮೈಸೂರನ್ನು ಪ್ರತಿನಿಧಿಸುವ ಮೈಸೂರ್ ಪಾಕ್ ದೇಶ ವಿದೇಶಗಳ ತನಕ ಹೆಸರು ವಾಸಿಯಾಗಿದೆ. ಇದೀಗ ಈ ಮೈಸೂರುಪಾಕ್​ ವಿಶ್ವದ ಸ್ಟ್ರೀಟ್​ ಫುಡ್​ನಲ್ಲಿ 14ನೇ ಸ್ಥಾನ ಪಡೆದುಕೊಂಡಿದೆ.

ಮೈಸೂರು ಅರಸರ ಕಾಲದಲ್ಲಿ ತಯಾರಾಗಿದ್ದ ಮೈಸೂರುಪಾಕ್, ಮೈಸೂರು ಅಂದ್ರೆ ಮೈಸೂರುಪಾಕ್ ಎನ್ನುವಷ್ಟು ಖ್ಯಾತಿ ಗಳಿಸಿದ್ದು, ಇದೀಗ ಜಾಗತಿಕ ಮಟ್ಟದ ಮನ್ನಣೆ ಪಡೆದುಕೊಂಡಿದೆ. 4.4 ರೇಟಿಂಗ್ ಪಡೆದ ಮೈಸೂರುಪಾಕ್, ಆನ್‌ಲೈನ್‌ ಮಾರ್ಕೆಟ್​ನಲ್ಲಿ ವಿಶ್ವದ 50 ತಿಂಡಿ ತಿನಿಸುಗಳಲ್ಲಿ ಸ್ಥಾನ ಪಡೆದುಕೊಂಡಿದೆ. ಇನ್ನು ಕುಲ್ಫಿಗೆ 18ನೇ ಸ್ಥಾನ, ಕುಲ್ಫಿ ಫಲೂದಾಗೆ 32ನೇ ಸ್ಥಾನ ಸಿಕ್ಕಿದೆ.

ಟೇಸ್ಟ್ ಅಟ್ಲಾಸ್, ವಿಶ್ವದ ಬೆಸ್ಟ್ ಸ್ಟ್ರೀಟ್ ಫುಡ್ ಸ್ವೀಟ್​ನ ಟಾಪ್ 50​ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಮೈಸೂರುಪಾಕ್​ಗೆ 4.4 ರೇಟಿಂಗ್​ನಿಂದಿಗೆ 14ನೇ ಸ್ಥಾನ​ ಸಿಕ್ಕಿದೆ. ಇನ್ನು ಕುಲ್ಫಿಗೆ 4.3 ರೇಟಿಂಗ್​ ನೋಂದಿಗೆ 18ನೇ ಸ್ಥಾನ ನೀಡಲಾಗಿದೆ. ಫಲೂದಾ 4.0 ರೇಟಿಂಗ್​ನೊಂದಿಗೆ 32ನೇ ಸ್ಥಾನ ಪಡೆದುಕೊಂಡಿದೆ.

ಮೈಸೂರು ಪಾಕ್ ಇತಿಹಾಸ:
ವಿಶಿಷ್ಟ ಬಗೆಯ ಮೈಸೂರ್ ಪಾಕ್ ಜನ್ಮ ತಾಳಿದ್ದು ಮೈಸೂರಿನ ಅರಮನೆಯ ಪಾಕಶಾಲೆಯಲ್ಲಿ ಎಂದರೆ ಅಚ್ಚರಿಯಾಗಬಹುದು. ಹೌದು. . .ಮೈಸೂರು ಅರಮನೆಯ ಪಾಕಶಾಲೆಯಲ್ಲಿ ಕಾಕಾಸುರ ಮಾದಪ್ಪ ಎಂಬ ಭಟ್ಟರು ಕೆಲಸ ಮಾಡಿಕೊಂಡಿದ್ದರು. ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಜಯ ಚಾಮರಾಜ ಒಡೆಯರ್ ಆಡಳಿತಾವಧಿಯಲ್ಲಿ ಅರಮನೆಯ ಪಾಕಶಾಲೆಯ ನೇತೃತ್ವವನ್ನು ಕಾಕಾಸುರ ಮಾದಪ್ಪನವರೇ ವಹಿಸಿಕೊಂಡಿದ್ದರು. ಒಂದು ದಿನ ಮಹಾರಾಜರು ಕಾಕಾಸುರು ಅವರಿಗೆ ಸಿಹಿ ತಿಂಡಿ ಮಾಡುವಂತೆ ಆದೇಶಿಸುತ್ತಾರೆ.

ಮಹಾರಾಜರ ಆದೇಶ ಸ್ವೀಕರಿಸಿದ ಕಾಕಾಸರು ಭಟ್ಟರು, ಮೊದಲು ಕಡಲೆ ಹಿಟ್ಟು, ತುಪ್ಪ ಮತ್ತು ಸಕ್ಕರೆ ಮೂರನ್ನು ಮಿಶ್ರಣ ಮಾಡಿಕೊಂಡರು. ನಂತರ ಪಾಕವನ್ನು ತಯಾರಿಸಿಕೊಂಡು ತಮಗೆ ಬೇಕಾದ ಆಕಾರಕ್ಕೆ ಒಣಗಲು ಬಿಟ್ಟು ಬಳಿಕ ಅದು ಮಿಠಾಯಿ ರೀತಿಯಲ್ಲಿ ಮೂಡಿ ಬಂದಿತ್ತು. ಕೊನೆಗೆ ಅದರ ಹೆಸರು ಕೇಳಿದಾಗ ಇದು ‘ಮೈಸೂರು ಪಾಕ್’ ಎಂದು ಹೇಳಿದರು.

ಹೊಸ ಸಿಹಿ ತಿಂಡಿಯ ರುಚಿ ಸವಿದ ಮಹಾರಾಜರು ಏನಿದರ ಹೆಸರು ಎಂದು ಕೇಳಿದ್ದರಂತೆ ಆಗಾ ಭಟ್ಟರು ಪಾಕದಿಂದ ಮಾಡಿದ ಸಿಹಿ ಅಂದರಂತೆ. ಹಾಗಾದರೆ ಮೈಸೂರು ಪಾಕ್ ಎಂದು ಹೆಸರು ಇಡೋಣ ಅಂತಾ ಹೇಳಿದ್ದರು ಎಂಬ ಕಥೆಯನ್ನು ಜನರು ಹೇಳುತ್ತಾರೆ.  ಕಾಕಾಸುರ ಭಟ್ಟರ ವಂಶಸ್ಥರು ಮೈಸೂರು ನಗರದಲ್ಲಿ ವಾಸಿಸುತ್ತಿದ್ದು, ಗುರು ಸ್ವೀಟ್ಸ್ ಎಂಬ ಸಿಹಿ ಅಂಗಡಿಯನ್ನು ಹೊಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು