News Karnataka Kannada
Monday, April 29 2024
ಮೈಸೂರು

ಪತಿಯ ಸಾವಿನಿಂದ ಪತ್ನಿ ಆತ್ಮಹತ್ಯೆ : ತಾಯಿಗಾಗಿ ಉಸಿರು ಚೆಲ್ಲಿದ ಮಗಳು

ಪತಿಯ ಅಗಲಿಕೆಯಿಂದ ಮನನೊಂದ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಜೊತೆಗೆ ಮಗಳು ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸರಗೂರು ತಾಲೂಕಿನ ಶಂಖಹಳ್ಳಿ ಗ್ರಾಮದಲ್ಲಿ ನಡೆದಿದೆ.ಗೀತಾ (40), ಮಗಳು ಪೂರ್ಣಿಮ (15) ಮೃತ ದುರ್ದೈವಿಗಳು.
Photo Credit : NewsKarnataka

ಮೈಸೂರು: ಪತಿಯ ಅಗಲಿಕೆಯಿಂದ ಮನನೊಂದ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಜೊತೆಗೆ ಮಗಳು ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸರಗೂರು ತಾಲೂಕಿನ ಶಂಖಹಳ್ಳಿ ಗ್ರಾಮದಲ್ಲಿ ನಡೆದಿದೆ.ಗೀತಾ (40), ಮಗಳು ಪೂರ್ಣಿಮ (15) ಮೃತ ದುರ್ದೈವಿಗಳು.

ಪತಿಪತಿ ರಾಜನಾಯಕ ಆನಾರೋಗ್ಯದಿಂದ ಮೃತಪಟ್ಟಿದ್ದರು ಪತಿಯ ಅಗಲಿಕೆಯಿಂದ ಖಿನ್ನತೆ ಜಾರಿದ್ದ ಪತ್ನಿ ಪತಿಯ ಗುಂಗಿನಿಂದ ಹೊರ ಬಂದಿರಲಿಲ್ಲ. ತವರು ಮನೆಯವರು ಎಷ್ಟೇ ಸಂತೈಸಿದರು ಪತಿಯ ಗುಂಗಿನಿಂದ ಹೊರ ಬರದ ಗೀತಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತ ತಾಯಿಯ ಅಗಲಿಕೆ ಸುದ್ದಿ ತಿಳಿದ ಮಗಳು ಪೂರ್ಣಿಮಾ ಕೂಡ ಆತ್ಮಹತ್ಯೆ ಮಾಡಿಕೊಂಡು ತಾಯಿ ಮಡಿಲು ಸೇರಿದ್ದಾಳೆ.

ತಾಯಿ-ಮಗಳ ಸಾವಿನ ಸುದ್ದಿ ಕೇಳಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸರಗೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಸರಗೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು