News Karnataka Kannada
Thursday, May 02 2024
ಮೈಸೂರು

ಮೈಸೂರು: ಪರಿಸರ ಸ್ನೇಹಿ ತಂಡದಿಂದ ಸಾಧಕರಿಗೆ ಸನ್ಮಾನ

Mysuru: Eco-friendly team felicitates achievers
Photo Credit : By Author

ಮೈಸೂರು: ಪರಿಸರ ಸ್ನೇಹಿ ತಂಡದ ವತಿಯಿಂದ ವಿಶ್ವ ಹಾವು ಗಳ ದಿನಾಚರಣೆ ಅಂಗವಾಗಿ  85,000 ಸಾವಿರಕ್ಕೂ ಹೆಚ್ಚು ಹಾವುಗಳನ್ನು  ಸಂರಕ್ಷಿಸಿದ ಉರುಗ ತಜ್ಞ ಸ್ನೇಕ್ ಶಾಮ್ ಹಾಗೂ ವೈಲ್ಡ್ ಲೈಫ್ ಕನ್ಸರ್ವೇಷನ್ ಫೌಂಡೇಷನ್ ರಾಜ್ ಕುಮಾರ್, ಸೂರ್ಯ ಕೀರ್ತಿ ಮತ್ತು ಪ್ರದೀಪ್  ಅವರನ್ನು ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಸರ್ಕಾರಿ ಮಿಶ್ರಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಉರಗತಜ್ಞ ಸ್ನೇಕ್ ಶ್ಯಾಮ್ ಅವರು, ಉರಗ ಸಂತತಿಯ ಉಳಿವು ಮುಖ್ಯವಾಗಿದ್ದು, ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತಮುತ್ತಲಿನ ಉಪಯುಕ್ತ ಸ್ಥಳದಲ್ಲಿಯೇ ಗಿಡಗಳನ್ನು ನೆಟ್ಟು ಬೆಳೆಸಬೇಕು. ಆ ಮೂಲಕ  ಪರಿಸರವನ್ನು ಶುದ್ಧವಾಗಿಸುವ ಅಲ್ಪ ಸೇವೆಯನ್ನು ಮಾಡಿದಂತಾಗುತ್ತದೆ. ಪರಿಸರದಲ್ಲಿರುವ ಪ್ರತಿಯೊಂದು ಜೀವಿಯೂ ಒಂದನ್ನೊಂದು ಅವಲಂಬಿಸಿಯೇ ಬದುಕುವ ಕಾರಣ ಪ್ರತಿಯೊಂದಕ್ಕೂ ಪ್ರಾಮುಖ್ಯತೆಯಿದೆ. ಎಲ್ಲವನ್ನೂ ಗೌರವಿಸಿ ಎಂದು ಹೇಳಿದ ಅವರು, ಉರಗಗಳ ಬಗೆಗೆ ವಿಶೇಷ ಮಾಹಿತಿಯನ್ನು ನೀಡಿದರು. ಉರಗ ಪ್ರಭೇದಗಳು, ಅವುಗಳ ಸಂತತಿ, ಹಾವಿನ ಕಡಿತದ ಬಳಿಕ ನಡೆಸುವ ಪ್ರಥಮ ಚಿಕಿತ್ಸೆಗಳ ಕುರಿತು ಸಚಿತ್ರ ಮಾಹಿತಿ ನೀಡಿದರು.

ವೈಲ್ಡ್ ಲೈಫ್ ಕನ್ಸರ್ವೇಷನ್ ಫೌಂಡೇಷನ್ ಡಿ. ರಾಜಕುಮಾರ್ ಮಾತನಾಡಿ ಹಾವನ್ನ‌ ನಾವು ಜೀವಭಯದಿಂದ ಹಿಡಿಯಬಾರದು.  ವೈಜ್ಞಾನಿಕವಾಗಿ ಜೀವರಕ್ಷಣೆಯಿಂದ ಹಿಡಿಯಬೇಕು, ಹಬ್ಬ ಹರಿದಿನ ಇತಿಹಾಸದಲ್ಲೂ ಸಹ ಪ್ರತಿಯೊಂದು ಪ್ರಾಣಿ ಪಕ್ಷಿಗಳಿಗೂ ಸಹ ನಮ್ಮ‌ ಪೂರ್ವಜರು ಪೂಜ್ಯ ಸ್ಥಾನ ನೀಡಿದ್ದಾರೆ, ಮಕ್ಕಳು ಸಣ್ಣ ವಯಸ್ಸಿನಲ್ಲೇ ಪರಿಸರ ಸಂರಕ್ಷಣೆ ಕಾಳಜಿ ಬೆಳೆಸಿಕೊಳ್ಳವಲ್ಲಿ ಮುಂದಾಗಬೇಕು ಎಂದರು

ಇದೇ ಸಂದರ್ಭದಲ್ಲಿ ಇಳೆಯಾಳ್ವಾರ್ ಸ್ವಾಮೀಜಿ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣ್  ಗೌಡ , ಕಾಂಗ್ರೆಸ್ ಯುವ ಮುಖಂಡ ಎನ್ ಎಂ ನವೀನ್ ಕುಮಾರ್, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಮೃಗಾಲಯ ಪ್ರಾಧಿಕಾರ  ಸದಸ್ಯಜ್ಯೋತಿ ರೇಚಣ್ಣ, ಪರಿಸರ ಸ್ನೇಹಿ ತಂಡದ ಅಧ್ಯಕ್ಷ ಲೋಹಿತ್, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ್ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಸುಚೇಂದ್ರ, ಚಕ್ರಪಾಣಿ, ಶಿಕ್ಷಕರಾದ ಚಂಪಾಶ್ರೀ, ಮಮತಾ, ದಿವ್ಯ ಹಾಗೂ ಇನ್ನಿತರರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು