News Karnataka Kannada
Friday, May 03 2024
ಮೈಸೂರು

ಇನ್ಮುಂದೆ ಆಯುಕ್ತರ ಕಚೇರಿ ಬ್ಯಾಂಡ್ ಮ್ಯೂಸಿಯಂ

ಪಾರಂಪರಿಕ ಶೈಲಿಯಲ್ಲಿರುವ ನಗರ ಪೊಲೀಸ್ ಆಯುಕ್ತರ ಹಳೆಯ ಕಚೇರಿ ಇನ್ನು ಮುಂದೆ ಕರ್ನಾಟಕ ಪೊಲೀಸ್ ಬ್ಯಾಂಡ್ ಮ್ಯೂಸಿಯಂ ಆಗಿ ಕಾರ್ಯ ನಿರ್ವಹಿಸುವ ಮೂಲಕ ಎಲ್ಲರ ಗಮನಸೆಳೆಯಲಿದೆ.
Photo Credit : By Author

ಮೈಸೂರು: ಪಾರಂಪರಿಕ ಶೈಲಿಯಲ್ಲಿರುವ ನಗರ ಪೊಲೀಸ್ ಆಯುಕ್ತರ ಹಳೆಯ ಕಚೇರಿ ಇನ್ನು ಮುಂದೆ ಕರ್ನಾಟಕ ಪೊಲೀಸ್ ಬ್ಯಾಂಡ್ ಮ್ಯೂಸಿಯಂ ಆಗಿ ಕಾರ್ಯ ನಿರ್ವಹಿಸುವ ಮೂಲಕ ಎಲ್ಲರ ಗಮನಸೆಳೆಯಲಿದೆ.

ಇದೀಗ  ಹಳೆಯ ಕಟ್ಟಡವನ್ನು 64ಲಕ್ಷ ರೂ. ವೆಚ್ಚದಲ್ಲಿ ನವೀಕರಣಗೊಳಿಸಲಾಗಿದ್ದು, ಶೀಘ್ರವೇ ಉದ್ಘಾಟನೆಯಾಗಲಿದೆ. ಹಿಂದೆ ಈ ಕಟ್ಟಡದಲ್ಲಿ ನಗರ ಪೊಲೀಸ್ ಆಯುಕ್ತರು ಸೇರಿದಂತೆ ಡಿಸಿಪಿ ಕಚೇರಿಗಳು ಕಾರ್ಯಗಳು ನಿರ್ವಹಿಸುತ್ತಿದ್ದವು. ಹೊಸ ಕಟ್ಟಡಕ್ಕೆ ಆಯುಕ್ತರ ಕಚೇರಿ ಸಂಪೂರ್ಣ ಸ್ಥಳಾಂತರ ಗೊಂಡಿತ್ತು. ಬಳಿಕ ಖಾಲಿ ಇದ್ದ ಹಳೆಯ ಕಟ್ಟಡವನ್ನು ಆರ್‌ಬಿಐ ನೋಟು ಮುದ್ರಣಾಲಯದ ಸಿಎಸ್‌ಆರ್ ಅನುದಾನದಿಂದ ನವೀಕರಣ ಕಾಮಗಾರಿ ನಡೆಸಲಾಗಿದ್ದು, ಈಗ ಪೂರ್ಣಗೊಂಡಿದೆ.

ಮಹರಾಜರ ಕಾಲದಲ್ಲಿ ಈ ಕಟ್ಟಡದಲ್ಲಿ ಪೊಲೀಸ್ ವಾದ್ಯಗಳು ಮತ್ತು ಸಲಕರಣಿಗಳನ್ನು ಇರಿಸಲಾಗಿತ್ತು. ನಂತರ ಮೌಂಟೆಂಡ್ ಪೊಲೀಸ್‌ನ ಕಟ್ಟಡಕ್ಕೆ ಪೊಲೀಸ್ ಬ್ಯಾಂಡ್‌ನ ವಾದ್ಯಗಳನ್ನು ಸ್ಥಳಾಂತರಿಸಲಾಗಿತ್ತು. ಈಗ ಹೊಸ ನವೀಕರಣಗೊಂಡ ಕಟ್ಟಡ  ಬ್ಯಾಂಡ್ ಹೌಸ್ ಆಗಿ ಸಂಪೂರ್ಣವಾಗಿ ಪರಿವರ್ತನೆಯಾಗಲಿದ್ದು, ಪ್ರವಾಸಿಗರನ್ನು ಸೆಳೆಯಲಿದೆ.

ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ  ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಅವರು,  ನಗರ ಪೊಲೀಸ್ ಆಯುಕ್ತರ ಹಳೆಯ ಕಟ್ಟಡದ ನವೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ಜ.22ರಂದು ಉದ್ಘಾಟಿಸಲು ನಿರ್ಧರಿಸಲಾಗಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಬ್ಯಾಂಡ್ ಹೌಸ್ ವಸ್ತು ಸಂಗ್ರಹಾಲಯವಾಗಿ ಪ್ರವಾಸಿಗರನ್ನು ಸೆಳೆಯಲಿದೆ ಎಂದು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು