News Karnataka Kannada
Friday, May 17 2024
ಮೈಸೂರು

ಚಾಮುಂಡಿಬೆಟ್ಟದಲ್ಲಿ ಭಕ್ತರಿಗೆ 25ಸಾವಿರ ಮ್ಯಾಂಗೋ ಬರ್ಫಿ ವಿತರಣೆ

25,000 mango barfis distributed to devotees at Chamundi Hill
Photo Credit : By Author

ಮೈಸೂರು: ಮೊದಲ ಆಷಾಢ ಶುಕ್ರವಾರದಂದು ಚಾಮುಂಡೇಶ್ವರಿ ದರ್ಶನಕ್ಕೆ ಚಾಮುಂಡಿಬೆಟ್ಟಕ್ಕೆ ಬರುವ ಭಕ್ತರಿಗೆ ವಿತರಿಸಲು 25 ಸಾವಿರ ಮ್ಯಾಂಗೋ ಬರ್ಫಿಯನ್ನು ತಯಾರು ಮಾಡಲಾಗುತ್ತಿದೆ.

ಮೊದಲ ಆಷಾಢ ಶುಕ್ರವಾರದಂದು ಕಳೆದ 18ವರ್ಷಗಳಿಂದ ಪ್ರಸಾದ ವ್ಯವಸ್ಥೆ ಮಾಡುತ್ತಿರುವ ನೂರಡಿ ರಸ್ತೆಯ ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ ಈ ಬಾರಿಯೂ ಪ್ರಸಾದ ವಿತರಣೆ ಮಾಡುತ್ತಿದೆ. ಅದಕ್ಕಾಗಿ ಭಕ್ತರಿಗೆ ವಿತರಿಸಲು 25ಸಾವಿರ ಮ್ಯಾಂಗೋ ಬರ್ಫಿ ತಯಾರಾಗುತ್ತಿದೆ. ನಗರದ ನಿತ್ಯಾನಂದ ಕಲ್ಯಾಣ ಮಂಟಪದಲ್ಲಿ 8 ಬಾಣಸಿಗರ ತಂಡದಿಂದ ಬರ್ಫಿ ತಯಾರಿಕೆ ಮಂಗಳವಾರ ಶುರುವಾಗಿದ್ದು, ಮೂರು ದಿನಗಳಲ್ಲಿ 25 ಸಾವಿರ ಭರ್ಪಿ ತಯಾರಿಕೆ ಕಾರ್ಯ ಪೂರ್ಣಗೊಳ್ಳಲಿದೆ.

30 ಕೆಜಿ ಮೈದಾ, 200 ಕೆಜಿ ಹಾಲುಕೋವಾ, 400 ಕೆಜಿ ಸಕ್ಕರೆ, 100 ಲೀಟರ್ ಮಾವಿನ ಹಣ್ಣಿನ ಪಲ್ಫ್, 3 ಕೆಜಿ ಪಿಸ್ತಾ, 5 ಕೆಜಿ ಬಾದಾಮಿ, 2 ಟಿನ್ ನಂದಿನಿ ತುಪ್ಪ, 30 ಕೆಜಿ ನಂದಿನಿ ಮಿಲ್ಕ್ ಪೌಡರ್ ಬಳಸಿ ಬರ್ಫಿ ತಯಾರಿಸಲಾಗುತ್ತಿದೆ. ಇದರ ಜವಾಬ್ದಾರಿಯನ್ನು ಆದಿತ್ಯ ಕೇಟರರ್ಸ್ ವಹಿಸಿಕೊಂಡಿದೆ.

ಬೆಟ್ಟದ ಪಾರ್ಕಿಂಗ್ ಜಾಗದಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿದ್ದು, ಶುಕ್ರವಾರ ಬೆಳಗ್ಗೆಯಿಂದಲೇ ಪ್ರಸಾದ ವಿತರಣೆ ಆರಂಭವಾಗಲಿದೆ. ಅಂದು ಬೆಳಗ್ಗೆ ಉಪಹಾರಕ್ಕೆ ಫೈನಾಪಲ್ ಕೇಸರ್‌ಬಾತ್, ಪೊಂಗಲ್, ರವಾವಾಂಗೀ ಬಾತ್ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ ಊಟಕ್ಕೆ ಕೋಸಂಬರಿ, ಪಲ್ಯಾ, ಬಿಸಿಬೇಳೇಬಾತ್, ಅನ್ನ ಸಾಂಬಾರ್, ಹಪ್ಪಳ, ಮೊಸರು ಹಾಗೂ ಮ್ಯಾಂಗೋಬರ್ಫಿ ವಿತರಿಸಲಾಗುತ್ತದೆ. ಇದಕ್ಕಾಗಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು