News Karnataka Kannada
Tuesday, April 30 2024
ಮನರಂಜನೆ

ವಿಶ್ವದಾದ್ಯಂತ ಜೂನ್ 23 ಕ್ಕೆ ಸರ್ಕಸ್ ತುಳು ಸಿನಿಮಾ ಅದ್ದೂರಿಯಾಗಿ ಬಿಡುಗಡೆ

'Circus Tulu' to be released worldwide on June 23
Photo Credit : News Kannada

ಮಂಗಳೂರು: ಬಿಗ್ ಬಾಸ್ ಒಟಿಟಿ, ಸೀಸನ್ ೯ ರ ವಿನ್ನರ್ ರೂಪೇಶ್ ಶೆಟ್ಟಿ ನಿರ್ದೇಶನ ಮತ್ತು ಅಭಿನಯದ, ಶೂಲಿನ್ ಫಿಲಂಸ್, ಮುಗ್ರೋಡಿ ಫಿಲಂಸ್ ಲಾಂಛನದಡಿ ನಿರ್ಮಾಣವಾದ ಸರ್ಕಸ್ ತುಳು ಸಿನಿಮಾ ವಿಶ್ವದಾದ್ಯಂತ ಜೂನ್ ೨೩ ಕ್ಕೆ ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಎಂದು ಚಿತ್ರ ನಿರ್ದೇಶಕ ರೂಪೇಶ್ ಶೆಟ್ಟಿ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು ಈಗಾಗಲೇ ಬಿಡುಗಡೆಗೆ ಮುನ್ನವೇ ದೇಶ ವಿದೇಶಗಳಲ್ಲಿ ೫೧ ಪ್ರೀಮಿಯರ್ ಶೋ ಗಳನ್ನು ಮಾಡಲಾಗಿದ್ದು ಚಿತ್ರಕ್ಕೆ ಅಭೂತಪೂರ್ವ ಪ್ರಕ್ರಿಯೆ ಸಿಕ್ಕಿದೆ. ತುಳು ಸಿನಿಮಾ ರಂಗದಲ್ಲಿ ಅತಿ ದೊಡ್ಡ ಹಿಟ್ ಚಿತ್ರ ಗಿರಿಗಿಟ್ ಭರ್ಜರಿ ಯಶಸ್ಸಿನ ಬಳಿಕ ಇದು ೨ ನೇ ಚಿತ್ರವಾಗಿದೆ ಈಗಾಗಲೇ ಪ್ರಿಮಿಯರ್ ಶೋ ನಲ್ಲಿ ಉತ್ತಮ ಸ್ಪಂದನೆಯನ್ನು ವೀಕ್ಷಕರು ನೀಡಿದ್ದು ದೇಶ ವಿದೇಶಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.

ಒಟ್ಟು ೫೦ ಕ್ಕೂ ಅಧಿಕ ಸೆಂಟರ್ನಲ್ಲಿ ಏಕಕಾಲದಲ್ಲಿ ಚಿತ್ರ ವೀಕ್ಷಣೆ ಅವಕಾಶ ಕಲ್ಪಿಸಲಾಗಿದೆ….ಮಂಗಳೂರಿನಲ್ಲಿ ೪ ಸಾವಿರಕ್ಕೂ ಅಧಿಕ ವೀಕ್ಷಕರು ನಮ್ಮ ಚಿತ್ರದ ಪ್ರೀಮಿಯರ್ ಶೋ ವೀಕ್ಷಿಸುವ ಮೂಲಕ ಉತ್ತಮ ಸ್ಪಂದನೆ ನೀಡಿದ್ದಾರೆ. ಇದ್ರಂತೆ ಮುಂದೆಯು ಜನ್ರು ನಮಗೆ ಸಹಕಾರ ನೀಡ್ತಾರೆ ಎಂದವರು ಹೇಳಿದರು.

ಈ ವೇಳೆ ತುಳು ಚಿತ್ರರಂಘದ ಕಲಾವಿದರಾದ ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಚಿತ್ರ ಸಂಭಾಷಣೆಕಾರ ಪ್ರಸನ್ನ ಶೆಟ್ಟಿ ಬೈಲೂರು, ಸಲಗ ಖ್ಯಾತಿಯ ಯಶ್ ಶೆಟ್ಟಿ, ಚಿತ್ರ ನಟಿ ರಚನಾ ರೈ, ಮ್ಯೂಸಿಕ್ ಡೈರೆಕ್ಟರ್ ಲೋಯ್ ವೆಲೈಂಟೈನ್ ಸಲ್ಡಾನ, ನಿರ್ಮಾಪಕ ಮಂಜುನಾಥ್ ಅತ್ತಾವರ, ಮತ್ತಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು