ಹುಣಸೂರು : ಹುಣಸೂರು ನಗರದ ಕಲ್ಪತರು ವೃತ್ತದ ಬಳಿ ನಡೆದು ತೆರಳುತ್ತಿದ್ದ ಪಾದಾಚಾರಿಗಳ ಮೇಲೆ ಹಟಾತ್ ದಾಳಿ ನಡೆಸಿದ ಹುಚ್ಚು ನಾಯಿಗಳು 50ಕ್ಕೂ ಹೆಚ್ಚು ಮಂದಿಗೆ ಗಾಯಗೊಳಿಸಿದೆ.
ತೀವ್ರ ಗಾಯಗೊಂಡಿದ್ದ ವೃದ್ದ ಮಹಿಳೆಯೊಬ್ಬರು ಸೇರಿದಂತೆ ತೀವೃ ಗಾಯಗೊಂಡಿದ್ದ 9 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದ್ದು. ಹುಣಸೂರು ಸಾರ್ವಜನಿಕ ಆಸ್ಪತ್ರೆಯಲ್ಲಿ 29 ಮಂದಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದರೆ. ಶಾಲಾ ಮಕ್ಕಳು ಸೇರಿದಂತೆ 18 ಮಂದಿ ಒಳ ರೋಗಿಗಳಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹುಣಸೂರಲ್ಲಿ ಸಾರ್ವಜನಿಕರಿಗೆ ಕಚ್ಚಿರುವ ನಾಯಿ ಹತ್ತಾರು ಬೀದಿ ನಾಯಿಗಳಿಗೂ ಕಚ್ಚಿದ್ದು. ನಗರಸಭೆ ಸಿಬ್ಬಂದಿಗಳು ಹುಚ್ಚು ನಾಯಿ ಕಚ್ಚಿರುವ ಬೀದಿ ನಾಯಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ.