ಮೈಸೂರು: ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ 80ನೇ ವರ್ಧಂತಿಯನ್ನು ಶಾಲಾ ಮಕ್ಕಳಿಗೆ ಓದುವ ಪಠ್ಯ ಸಾಮಗ್ರಿಗಳ ಹಾಗೂ ವಿವಿಧ ಜಾತಿಯ ಸಸಿಗಳನ್ನು ನೆಟ್ಟು ಆಚರಿಸಲಾಯಿತು.
ಚಾಮುಂಡಿಪುರಂನಲ್ಲಿರುವ ಬಾಲಬೋಧಿನಿ ಶಾಲೆಯಲ್ಲಿ ಮೈಸೂರು ಬ್ರಾಹ್ಮಣ ಯುವ ವೇದಿಕೆ ಹಾಗೂ ಅಪೂರ್ವ ಸ್ನೇಹ ಬಳಗ ಮತ್ತು ಶ್ರೀ ಗಣಪತಿ ಸಚ್ಚಿದಾನಂದ ಭಕ್ತವೃಂದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನ ನಿಕಟಪೂರ್ವ ಅಧ್ಯಕ್ಷರಾದ ಡಾ.ವೈಡಿ ರಾಜಣ್ಣ ರವರು ಮಾತನಾಡಿ ಗಣಪತಿ ಸಚ್ಚಿದಾನಂದ ಆಶ್ರಮ ಆಧ್ಯಾತ್ಮಿಕ ಧಾರ್ಮಿಕ ಕೇಂದ್ರದೊಂದಿಗೆ ಪರಿಸರ ಪೋಷಣೆ ಮನಃಶಾಂತಿ ಸಿಗುವ ತಾಣವಾಗಿದೆ ಪ್ರವಾಸೋದ್ಯಮದಲ್ಲಿ ದೇಶವಿದೇಶದಿಂದ ಭಕ್ತವೃಂದವನ್ನು ಆಕರ್ಷಿಸುತ್ತದೆ, ಯಾವುದೇ ಜಾತಿಭೇದವಿಲ್ಲದೆ ಜನಮುಖಿ ಕೇಂದ್ರವಾಗಿದೆ, ಕಳೆದ ಕೋವಿಡ್ ಸಂಧರ್ಭದಲ್ಲಿ ಲಕ್ಷಾಂತರ ಮಂದಿಗೆ ಪ್ರತಿನಿತ್ಯ ಅನ್ನದಾನ ಮತ್ತು ವೈದ್ಯಕೀಯ ನೆರವು ನೀಡಿ ಮಾನವೀಯತೆ ಮೆರೆದಿದೆ ಎಂದರು.
ಇದೇ ಸಂದರ್ಭದಲ್ಲಿ ಗ್ರ್ಯಾಜುಯೇಟ್ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕರಾದ ಟಿ ಎಸ್ ರವಿಶಂಕರ್, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಕೇಬಲ್ ಮಹೇಶ್, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಅಜಯ್ ಶಾಸ್ತ್ರಿ, ಉದ್ಯಮಿ ಜಯರಾಮ್, ಸುಚೀಂದ್ರ , ವಿಕಾಸ್ ಶಾಸ್ತ್ರಿ, ತೇಜಸ್ ಕೌಶಿಕ್ ಹಾಗೂ ಶಾಲೆಯ ಮುಖ್ಯಶಿಕ್ಷಕರು ಮತ್ತು ಶಿಕ್ಷಕ ವೃಂದ ಹಾಗೂ ಇನ್ನಿತರರು ಹಾಜರಿದ್ದರು.