News Karnataka Kannada
Wednesday, May 01 2024
ಬೆಂಗಳೂರು ನಗರ

ಹುಷಾರ್…! ಈ ಔಷಧಿಗಳ ಬಳಕೆ ನಿಷೇಧವಾಗಿದೆ

Tablet
Photo Credit :

ಬೆಂಗಳೂರು: ಆಗಾಗ್ಗೆ ಕರ್ನಾಟಕ ಔಷಧ ಪ್ರಯೋಗಾಲಯದ ಸರ್ಕಾರಿ ವಿಶ್ಲೇಷಕರು ಈಗಾಗಲೇ ಮಾರುಕಟ್ಟೆಯಲ್ಲಿರುವ ಔಷಧಿಗಳ ಗುಣಮಟ್ಟ ಪರಿಶೀಲನೆ ನಡೆಸಿ ಅವುಗಳಿಂದ ಅಡ್ಡಪರಿಣಾಮಗಳಿದ್ದರೆ ಅಂತಹ ಔಷಧಿಗಳ ಬಳಕೆಯನ್ನು  ಆಗಾಗ್ಗೆ ನಿಷೇಧ ಮಾಡುತ್ತಲೇ ಬರುತ್ತಿದ್ದಾರೆ.

ಇದೀಗ ಓಲ್‍ಬಿನ್ ಸೋಪ್, ಓರಿಪೆಂಟ್-40 ಟ್ಯಾಬ್ಲೆಟ್ಸ್ (ಪ್ಯಾಂಟೋಫ್ರಜೋಲ್ ಟ್ಯಾಬ್ಲೆಟ್ಸ್ ಐಪಿ 40 ಎಂಜಿ), ಜಿಪ್‍ಕೋಲ್ಡ್ –ಎನ್‍ಪಿ (ಅಸೆಕ್ಲೋಫೆನ್, ಪ್ಯಾರಸೆಟಮೋಲ್, ಫಿನೈಲ್‍ಫ್ರಿನ್ ಹೆದ್‍ಸಿಎಲ್, ಸಿಟ್ರಿಜನ್ ಹೆಚ್‍ಸಿಎಲ್ & ಕೆಫೀನ್ ಟ್ಯಾಬ್ಲೆಟ್ಸ್), ವಿಗ್ಲಿಪಿಟಿನ್ ಎಂ ಟ್ಯಾಬ್ಲೆಟ್ಸ್ (ವಿಲ್ಡಾಗ್ಲಿಪ್ಟಿನ್ & ಮೆಟಪಾರ್‍ಮಿನ್ ಹೈಡ್ರೋಕ್ಲೋರೈಡ್ ಟ್ಯಾಬ್ಲೆಟ್ಸ್ 50 ಎಂಜಿ +500ಎಂಜಿ), ಪ್ಯಾರಸೆಟಮೋಲ್ ಟ್ಯಾಬ್ಲೆಟ್ಸ್ ಐಪಿ 650 ಎಂಜಿ (ಥರ್ಮಡಾಲ್).

ಸಿಪ್ರ್ರೇಪ್ಲಾಕ್ಸಸಿನ್ ಹೈಡ್ರೋಕ್ಲೋರೈಡ್ ಟ್ಯಾಬ್ಲೆಟ್ಸ್ ಐ.ಪಿ 500ಎಂಜಿ, ಮೇಕೊಫೋಲ್ – ಪ್ಲಸ್ ಎನ್‍ಏಪ್ (ಮೀಥೈಲ್ಕೋಬಾಲಾಮಿನ್ ಆಸಿಡ್, ಪೋಲಿಕ್ ಆಸಿಡ್ ಅಚಿಡ್ ವಿಟಮಿನ್ ಬಿ6 ಕ್ಯಾಪ್ಸೂಲ್ಸ್), ನ್ಯೂಕೇನ್ ಜೆಲ್ (ಆಕ್ಸೆಟಾಕೈನ್, ಡ್ರೈಡ್ ಆಲ್ಯೂಮಿನಿಯಂ ಹ್ಶೆಡ್ರೋಕ್ಸಿಡ್ ಜೆಲ್ & ಮೆಗ್ನೀಷಿಯಂ ಹ್ಶೆಡ್ರೋಕ್ಸಿಡ್ ಜೆಲ್), ಗಿಲ್‍ಮೋಲ್-650, (ಪ್ಯಾರಸೆಟಮೋಲ್) ಟ್ಯಾಬ್ಲೆಟ್ಸ್ ಐ.ಪಿ 650 ಎಂಜಿ), ಆಗ್ಲೋಸಿಫ್ ಎಜಡ್-ಎಲ್‍ಬಿ (ಸೆಫೀಕ್ಸಿಮ್, ಅಜಿಥ್ರೋಮೈಸಿನ್ & ಲ್ಯಾಕ್‍ಟಿಕ್ ಆಸಿಡ್ ಬ್ಯಾಸಿಲಸ್ ಟ್ಯಾಬ್ಲೆಟ್ಸ್) ಮುಂತಾದ ಔಷಧಿಗಳನ್ನು ಉತ್ತಮ ಗುಣಮಟ್ಟದಲ್ಲ ಎಂದು ಕರ್ನಾಟಕ ಔಷಧ ಪ್ರಯೋಗಾಲಯದ ಸರ್ಕಾರಿ ವಿಶ್ಲೇಷಕರು ಘೋಷಣೆ ಮಾಡಿದ್ದಾರೆ.

ಆದ್ದರಿಂದ ಈ ಔಷಧಿಗಳು ಮತ್ತು ಕಾಂತಿವರ್ಧಕ ಔಷಧ ವ್ಯಾಪಾರಿಗಳು, ಸಗಟು ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವ್ಶೆದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂನವರು ದಾಸ್ತಾನು ಮಾಡುವುದಾಗಲೀ, ಮಾರಾಟ ಮಾಡುವುದಾಗಲೀ ಅಥವಾ ಉಪಯೋಗಿಸುವುದಾಗಲೀ ಮಾಡದಂತೆ ಅಧಿಕೃತ ಪ್ರಕಟಣೆ ಹೊರಡಿಸಲಾಗಿದ್ದು, ಇದನ್ನು ಮೀರಿ ಬಳಕೆ ಮಾಡಿದರೆ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ.

ಸಾರ್ವಜನಿಕರು ಈ ಸಂಬಂಧ ಎಚ್ಚರಿಕೆ ವಹಿಸುವುದು ಅಗತ್ಯವಾಗಿದ್ದು, ನಿಷೇಧಗೊಂಡಿರುವ ಈ ಔಷಧಿಗಳನ್ನು ನೀಡಿದ್ದೇ ಆದರೆ ದೂರು ನೀಡಬಹುದಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು