News Karnataka Kannada
Sunday, May 05 2024
ಮೈಸೂರು

ವಿದ್ಯಾಸಂಸ್ಥೆಗಳಲ್ಲಿನ ಸಮವಸ್ತ್ರವು ಸಮಾನತೆಗೆ ದಾರಿ: ಡಾ. ಶ್ವೇತಾಮಡಪ್ಪಾಡಿ

Shwetha Madappady
Photo Credit : News Kannada

ಮೈಸೂರು: ವಿದ್ಯಾಸಂಸ್ಥೆಗಳಲ್ಲಿನ ಸಮವಸ್ತ್ರವು ಸೌಹಾರ್ಧತೆ ಹಾಗೂ ಸಮಾನತೆಗೆ ದಾರಿಯಾಗುವುದು ಎಂದು ಲೇಖಕಿ, ಕಲಾವಿದೆ, ಹೋಟೇಲ್‌ ಉದ್ಯಮಿ ಡಾ. ಶ್ವೇತಾಮಡಪ್ಪಾಡಿ ಅಭಿಪ್ರಾಯಪಟ್ಟಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ವಿದ್ಯಾಸಂಸ್ಥೆಗಳಲ್ಲಿ ಹಿಜಾಬ್ ಮಾತ್ರವಲ್ಲ, ಕೇಸರಿ, ನೀಲಿ, ಕೆಂಪು ,ಕಪ್ಪುಯಾವುದಕ್ಕೂ ಆದ್ಯತೆಯಿಲ್ಲದ ಕೇವಲ ವಿದ್ಯೆಯನ್ನಷ್ಟೇ ಕೇಂದ್ರೀಕರಿಸ ಬಲ್ಲ ಸಮವಸ್ತ್ರಕ್ಕಷ್ಟೇ ಆದ್ಯತೆಯಿರಲಿ. ಆ ಮೂಲಕ ಎಲ್ಲರೂ ವಿವಿಧತೆಯಲ್ಲಿ ಏಕತೆಕಾಣಲಿ ಎಂದು ಅವರು ಹೇಳಿದ್ದಾರೆ.

ವಿದ್ಯಾಸಂಸ್ಥೆಗಳಲ್ಲಿನ ಸಮವಸ್ತ್ರವು ಸೌಹಾರ್ಧತೆ ಹಾಗೂ ಸಮಾನತೆಗೆ ದಾರಿಯಾಗುವುದು ನಾವು ದೂರದಲ್ಲಿ ನಿಂತು ರಾಜಕಾರಣಿಗಳಾಗಿಯೋ,ವಿಚಾರವಾದಿಗಳಾಗಿಯೋ,ಅಥವಾ ಧರ್ಮಪರ ಯೋಚನೆಯುಳ್ಳವರಾಗಿಯೋ ಶೈಕ್ಷಣಿಕ ಸಂಸ್ಥೆಗಳನ್ನು ಚಿಂತನೆಗೆ ಒಳಪಡಿಸುವುದರಿಂದ ಆಗಬಹುದಾದ ಎಲ್ಲಾ ತೊಂದರೆಗಳೂ ಇಂದು ನಮ್ಮೆದುರಿಗೆ ಬಂದು ನಿಂತಿವೆ.

ವಿದ್ಯಾರ್ಥಿ ಜೀವನವೆಂಬುದು ತಪಃಸ್ಸಾದನೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಒಬ್ಬ ಗೌರವ ತಪಸ್ವಿ ಎಂದು ಕುವೆಂಪು ಹೇಳಿದ್ದಾರೆ. ಕಾಲೇಜಿನಲ್ಲಿ ಭವಿಷ್ಯದ ಸುಂದರ ಕನಸುಗಳನ್ನು ಧ್ಯಾನಿಸಿ, ಜ್ಙಾನ ಸರಸ್ವತಿಯನ್ನಷ್ಟೇ ಆರಾಧಿಸಿ ತಮ್ಮ ಸಾಧನೆಯನ್ನಷ್ಟೇ ಗುನುಗ ಬೇಕಾದ ಯುವ ಮನಸುಗಳು ಇಂದು ವಸ್ತ್ರರಾಜಕಾರಣದ ಗುಂಗಿನಲ್ಲಿ ಕಳೆದುಹೋಗುತ್ತಿದ್ದಾರೆ.  ಮತೀಯ ಅಮಲು ಬಹಳ ಅಪಾಯಕಾರಿ ವಿಷವಿದ್ದಂತೆ. ಅದನ್ನು ನಾವು ಯುವ ಸಮುದಾಯಕ್ಕೆ ದಾಟಿಸುತ್ತಿರುವುದುಭವಿಷ್ಯದಲ್ಲಿ ಎದುರಾಗ ಬಹುದಾದ ಅತೀ ದೊಡ್ಡ ದುರಂತವನ್ನು ನಮ್ಮ ಮುಂದೆತೆರೆದಿಟ್ಟಿದೆ.

ಇಂಥ ವಿಷಮ ಪರಿಸ್ಥಿತಿಯಲ್ಲಿ ನಾನೊಬ್ಬಳು ಅಧ್ಯಾಪಕಿಯಾಗಿ, ಕಲಾವಿದೆಯಾಗಿ, ಲೇಖಕಿಯಾಗಿ ಎಲ್ಲಕ್ಕಿಂತ ಮುಖ್ಯವಾಗಿ ಒಬ್ಬಳು ಈ ದೇಶದ ನಾಗರೀಕಳಾಗಿ ನಮ್ಮ ಶೈಕ್ಷಣಿಕ ಸಂಸ್ಥೆಗಳ ಈ ಅಪಾಯಕಾರಿ ಸನ್ನಿವೇಶದ ಕುರಿತು ಪ್ರತಿಕ್ರಿಯೆ ನೀಡುವುದು ಬಹುಮುಖ್ಯವೆಂದು ಭಾವಿಸುತ್ತೇನೆ. ನಾವಿಲ್ಲಿ ವಿದ್ಯಾಸಂಸ್ಥೆಗಳನ್ನು ಶೈಕ್ಷಣಿಕ ಭಾಗವಾಗಿಯಷ್ಟೇ ಮುಖ್ಯಮಾಡಬೇಕು. ಶಾಲಾ ಕಾಲೇಜುಗಳ ಶಿಕ್ಷಣವೆಂದರೆ ಅದು ಪ್ರತೀ ವಿದ್ಯಾರ್ಥಿಯನ್ನು ಒಬ್ಬ ಗೌರವ ತಪಸ್ವಿಯನ್ನಾಗಿ ನಿರ್ಮಿಸ ಬಹುದಾದ ಜಾಗ. ಶಿಕ್ಷಣ ಕೇಂದ್ರಗಳ ಕಲಿಕೆಯೆಂದರೆ ಅದು ಮನೆಯ ಕಲಿಕೆಗಳಿಗಿಂತ ಭಿನ್ನವಾದುದು. ಮತ್ತು ಮನೆಯಲ್ಲಿನ ಕಟ್ಟುಪಾಡುಗಳಿಂದ ಒಂದಷ್ಟು ದೂರವುಳಿದು ಹೊಸತನದ ಶಿಕ್ಷಣವನ್ನು ಕರಗತ ಮಾಡಿಕೊಳ್ಳಲು ಅವಕಾಶವಿರಬಹುದಾದಜಾಗ. ನಮ್ಮಲ್ಲಿಗಾಂಧಿಅಂಬೇಡ್ಕರ್‌ರಿಂದ ಹಿಡಿದು ಹಲವು ಸಾಮಾಜಿಕ ಸುಧಾರಣೆಗಳಲ್ಲಿ ಬಹುಡೊಡ್ಡ ಪಾತ್ರವಹಿಸಿದ ಆದರ್ಶ ಪ್ರಾಯರು ಭಾರತದ ಹೊಸ ಶಿಕ್ಷಣ ವ್ಯವಸ್ಥೆಯಿಂದ, ಹಾಗಯೇ ಶಾಲಾಶಿಕ್ಷಣ ವ್ಯವಸ್ಥೆಯು ರೂಪುಗೊಳಿಸಿದ ಶೈಕ್ಷಣಿಕ ಕಾರ್ಯಕ್ರಮಗಳ ಪರಿಣಾಮದಿಂದ ತಯಾರಾದವರೆಂಬ ಅಂಶವನ್ನು ನಾವು ಮರೆಯುವಂತಿಲ್ಲ.

ಹೀಗಾಗಿ ಮನೆಯೊಳಗಿನ ಪಾರಂಪರಿಕತೆ ನೀಡುವ ಜ್ಞಾನಕ್ಕೆ ಭಿನ್ನವಾದುದನ್ನು ಶೈಕ್ಷಣಿಕ ಸಂಸ್ಥೆಗಳು ನೀಡಬಲ್ಲವು. ಅಲ್ಲದೇ ಸ್ವಾತಂತ್ರ್ಯದಅರ್ಥ, ಸೌಹಾರ್ಧತೆಯ ಸೌಂದರ್ಯ, ವಿದ್ಯೆಯ ಮಹತ್ವ ಎಲ್ಲವನ್ನೂ ಅರಿತು ಜ್ಞಾನದ ಹಸಿವನ್ನು ನೀಗಿಸಿಕೊಳ್ಳಬಹುದಾದ ಜಾಗವನ್ನು ನಾವು ಪರಂಪರೆ, ಧರ್ಮ ಮತ್ತುಅದರ ಹಕ್ಕಿನ ಕಾರಣ ನೀಡಿ ಹೊಸ ಬಗೆಯ ಧರ್ಮಸಂಕಟಕ್ಕೆ ತೆರೆದುಕೊಳ್ಳುವುದಕ್ಕೆ ಉತ್ಸುಕರಾಗಿರುವುದು ಅತ್ಯಂತ ಆತಂಕಕಾರಿ ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು