News Karnataka Kannada
Friday, May 10 2024
ಮೈಸೂರು

ಮೈಸೂರು: 7 ತಿಂಗಳ ಗರ್ಭಿಣಿ ಅನುಮಾನಾಸ್ಪದ ಸಾವು

Model found dead by hanging
Photo Credit :

ಮೈಸೂರು : ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇನ್ನೆರಡು ತಿಂಗಳಲ್ಲಿ ಆ ಮನೆಯಲ್ಲಿ ಸಂಭ್ರಮ ಮನೆ ಮಾಡುತ್ತಿತ್ತು. ಆದರೆ, ವಿಧಿಯಾಟವೇ ಬೇರೆ ಇತ್ತು. ಮಗುವಿನ ನೀರಿಕ್ಷೆಯಲ್ಲಿದ್ದ 7 ತಿಂಗಳ ಗರ್ಭಿಣಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಈಕೆ ಗಂಡನ ಮೇಲೆ ಕೊಲೆ ಆರೋಪ ಕೇಳಿಬಂದಿದೆ.

ವಿಜಯನಗರ ನಿವಾಸಿ ಅಶ್ವಿನಿ (23) ಮೃತ ಗರ್ಭಿಣಿ. ಮೈಸೂರು ತಾಲೂಕಿನ ಮೈದನಹಳ್ಳಿಯ ಪ್ರಮೋದ್ ಮತ್ತು ಅಶ್ವಿನಿ ಪರಸ್ಪರ ಪ್ರೀತಿಸಿ 2021ರ ಜೂನ್ 13ರಂದು ಮದುವೆಯಾಗಿದ್ದರು. 7 ತಿಂಗಳ ಗರ್ಭಿಣಿಯಾಗಿದ್ದ ಅಶ್ವಿನಿ ತಂದೆ ಮನೆಯಲ್ಲಿದ್ದಳು. ಮಾ.18ರ ರಾತ್ರಿ ಮಾವನ ಮನೆಯಿಂದ ತನ್ನ ಪತ್ನಿಯನ್ನ ಪ್ರಮೋದ್​ ಕರೆದೊಯ್ದಿದ್ದ. ಇದೀಗ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.

ಮಗಳನ್ನು ಅಳಿಯನೇ ಕೆರೆಗೆ ತಳ್ಳಿ ಕೊಲೆ ಮಾಡಿದ್ದಾನೆ. ಇಬ್ಬರೂ ಪ್ರೀತಿಸಿ ವಿವಾಹವಾಗಿದ್ದರು. ಇದೀಗ ಜಾತಿ ನೆಪದಲ್ಲಿ ನಿಂದಿಸಿ ಕೊಲೆ ಮಾಡಿದ್ದಾನೆ ಎಂದು ಮೃತಳ ಪೋಷಕರು ದೂರಿದ್ದಾರೆ. ಇಲವಾಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು