ಮೈಸೂರು: ಮೈಸೂರಿನ 48 ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಇರೋದು ಧೃಡಪಟ್ಟಿದ್ದು, ಜಿಲ್ಲೆಯಲ್ಲಿ ಮೂರನೇ ಅಲೆ ಭೀತಿಯನ್ನು ಹೆಚ್ಚಳ ಮಾಡಿದೆ.
ಒಂದು ವಾರದ ಅವಧಿಯಲ್ಲಿ ಮೈಸೂರಿನ ಎರಡು ಖಾಸಗಿ ಕಾಲೇಜುಗಳ 48 ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ಇರೋದು ಧೃಡಪಟ್ಟಿದ್ದು, ವಿದ್ಯಾರ್ಥಿಗಳ ಜೊತೆಗಿದ್ದ ಇದ್ದ ವೈದ್ಯರು ಹಾಗೂ ರೋಗಿಗಳಲ್ಲಿ ಆತಂಕದ ವಾತವಾರಣವನ್ನು ನಿರ್ಮಾಣ ಮಾಡಿದೆ.
ಇನ್ನೂ ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿರುವ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಒಂದು ವಾರದ ಅವಧಿಯಲ್ಲಿ ನರ್ಸಿಂಗ್ ಕಾಲೇಜಿನ 48 ವಿದ್ಯಾರ್ಥಿಗಳಲ್ಲಿ ಕರೋನ ಸೊಂಕು ಇರೋದು ಪತ್ತೆಯಾಗಿದೆ ಅಂತ ಹೇಳಿದರು. ಇನ್ನೂ ಎಲ್ಲ ವಿದ್ಯಾರ್ಥಿಗಳು ಎರಡು ಡೋಸ್ ಲಸಿಕೆ ಪಡೆದುಕೊಂಡಿದ್ದು, ಎಲ್ಲರೂ ಕೂಡ ಲಕ್ಷಣರಹಿತರಾಗಿದ್ದಾರೆ ಅಂತ ಹೇಳಿದ್ದಾರೆ. ಇನ್ನೂ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.