ಮೈಸೂರು: ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿರುವ ಗೊರಿಲ್ಲಾ ಡೆಂಬನಿಗೆ 9ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಈ ವೇಳೆ ಮೃಗಾಲಯದ ಸಿಬ್ಬಂದಿ ಮತ್ತು ಪ್ರವಾಸಿಗರು ಶುಭ ಕೋರಿದರು.ಕಳೆದ ಅಕ್ಟೋಬರ್ ನಲ್ಲಿ ಮೈಸೂರು ಮೃಗಾಲಯಕ್ಕೆ ಜರ್ಮನಿಯಿಂದ ತಂದ ಡೆಂಬ ನಿಗೆ
ಮೃಗಾಲಯದ ಸಿಬ್ಬಂದಿ ವಿವಿಧ ತರಕಾರಿಗಳನ್ನು ಇಟ್ಟು ಜನುಮ ದಿನಕ್ಕೆ ವಿಶಿಷ್ಟ ರೀತಿಯಲ್ಲಿ ಶುಭಕೋರಿದರೆ, ಪ್ರವಾಸಿಗರು ತಮ್ಮ ಮೊಬೈಲ್ ನಲ್ಲಿ ವೀಡಿಯೋ, ಫೋಟೊ ಕ್ಲಿಕ್ಕಿಸಿ ಶುಭ ಹಾರೈಸಿದ್ದು ವಿಶೇಷವಾಗಿತ್ತು.
ಪೋಲೋ ಹೆಸರಿನ ಗೊರಿಲ್ಲಾದ ನಂತರ ದೇಶದಲ್ಲಿಯೇ ಯಾವ ಮೃಗಾಲಯದಲ್ಲಿಯೂ ಗೊರಿಲ್ಲ ಇರಲಿಲ್ಲ. ಇದೀಗ 7 ವರ್ಷದ ನಂತರ ಜರ್ಮನಿಯಿಂದ 2 ಗಂಡು ಗೊರಿಲ್ಲಾ ತರಲಾಗಿದ್ದು, ತಾಬೊ ಹಾಗೂ ಡೆಂಬ ಮೃಗಾಲಯದ ಪ್ರಮುಖ ಆಕರ್ಷಣೆಗಳಾಗಿವೆ.