News Karnataka Kannada
Monday, April 29 2024
ಮೈಸೂರು

ನಿರ್ಲಕ್ಷ್ಯಕ್ಕೊಳಗಾದರೂ ಆಕರ್ಷಿಸುವ ಗನ್ ಹೌಸ್!

Mysuru
Photo Credit : News Kannada

ಮೈಸೂರು: ನಗರದಲ್ಲಿ ಸುತ್ತಾಡುವ ಪ್ರವಾಸಿಗರು ಅರಮನೆ ಬಳಿಗೆ ತೆರಳಿದಾಗ ನಿರ್ಲಕ್ಷ್ಯಕ್ಕೊಳಗಾದ ಕಟ್ಟಡವೊಂದು ಗಮನಸೆಳೆಯುತ್ತದೆ. ಇದ್ಯಾವ ಕಟ್ಟಡವೆಂದು ಅಚ್ಚರಿಯ ನೋಟ ಬೀರುತ್ತಾರೆ.

ನೋಡಲು ವಿಭಿನ್ನ ಮತ್ತು ವಿಶಿಷ್ಟವಾಗಿರುವ ಈ ಕಟ್ಟಡವನ್ನು ಗನ್ ಹೌಸ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಎಲ್ಲ ಹೋರಾಟಗಳು ಈ ಕಟ್ಟಡದ ಬಳಿಯಿಂದಲೇ ಆರಂಭವಾಗುತ್ತದೆ.

ಈ ಕಟ್ಟಡವನ್ನು ಅಭಿವೃದ‍್ದಿಗೊಳಿಸಿದ್ದರೆ ಇದೊಂದು ಪ್ರವಾಸಿ ತಾಣವಾಗಿ ಗಮನಸೆಳೆಯುತ್ತಿತ್ತು. ಆದರೆ ಇವತ್ತು ಸುತ್ತಲೂ ಕಾಡು ಆವರಿಸಿ ಮೂಲೆಗುಂಪಾಗುತ್ತಿದೆ. ಸಾಮಾನ್ಯವಾಗಿ ಮೈಸೂರು ನಗರದಲ್ಲಿರುವ ಒಂದೊಂದು ಕಟ್ಟಡಗಳಿಗೂ ತನ್ನದೇ ಆದ ಇತಿಹಾಸವಿದೆ. ಅದರಂತೆ ’ಗನ್‌ಹೌಸ್’ ಕೂಡ ಇತಿಹಾಸದ ಕಥೆ ಹೇಳುತ್ತದೆ.

ಮೈಸೂರು ಮಹಾರಾಜರ ಕಾಲದಲ್ಲಿ ಈ ಕಟ್ಟಡದಲ್ಲಿ ಯುದ್ದ ಸಾಮಗ್ರಿ, ಮದ್ದುಗುಂಡುಗಳನ್ನು ಶೇಖರಿಸಲಾಗುತ್ತಿತ್ತಂತೆ ಹಾಗಾಗಿ ಇದನ್ನು ಮದ್ದಿನಮನೆ(ಗನ್‌ಹೌಸ್) ಎಂದೇ ಕರೆಯಲಾಗುತ್ತಿದೆ.

ನಗರದ ಪ್ರಮುಖ ಪಾರಂಪರಿಕ ಕಟ್ಟಡಗಳಲ್ಲಿ ಒಂದಾದ ಗನ್ ಹೌಸ್ ಪಾರಂಪರಿಕ ಕಟ್ಟಡಗಳ ಪಟ್ಟಿಯಲ್ಲಿದ್ದು ರಾಜವಂಶಸ್ಥರ ಖಾಸಗಿ ಆಸ್ತಿಯಾಗಿದೆ. ಪಾರಂಪರಿಕ ಕಟ್ಟಡಗಳು ಖಾಸಗಿ ಒಡೆತನದಲ್ಲಿದ್ದರೂ ಅವನ್ನು ಪರಭಾರೆ ಮಾಡುವುದಾಗಲಿ ಅಥವಾ ಅದರ ಮೂಲ ವಿನ್ಯಾಸಕ್ಕೆ ಧಕ್ಕೆ ತರುವಂತಹ ಕಾರ್ಯದ ಮೇಲೆ ಶಾಶ್ವತ ನಿರ್ಬಂಧವಿದೆ.

ಮುಂದಿನ ದಿನಗಳಲ್ಲಿ ರಾಜವಂಶಸ್ಥರು ಈ ಕಟ್ಟಡವನ್ನು ದುರಸ್ತಿಗೊಳಿಸಿ ಉತ್ತಮ ಉದ್ದೇಶಕ್ಕೆ ಬಳಕೆ ಮಾಡಿದರೆ ಪ್ರವಾಸಿಗರಿಗೆ ಅನುಕೂಲವಾಗುವುದರೊಂದಿಗೆ ಗನ್ ಹೌಸ್ ನ ಖ್ಯಾತಿಯೂ ಇಮ್ಮಡಿಸಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು