News Karnataka Kannada
Sunday, April 28 2024
ಮೈಸೂರು

ಆಕಾಶದೆತ್ತರಕ್ಕೆ ಬೆಳೆದ ಮಹಿಳೆ: ಮಾತಾ ಮಂಜಮ್ಮ ಜೋಗುತಿ

Manjamma
Photo Credit :

ಮೈಸೂರು: ಅಡುಗೆ ಮನೆಯಲ್ಲಿ ಸೌಟು ಹಿಡಿಯುತ್ತಿದ್ದ ಮಹಿಳೆಯರು ವಿಮಾನವನ್ನು ಮುನ್ನಡೆ ಸುತ್ತಿದ್ದು, ಭೂಮಿಯಿಂದ ಆಕಾಶದ ವರೆಗೂ ಮಹಿಳೆ ತಲುಪಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಹೇಳಿದರು.

ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಶ್ರೀ ದುರ್ಗ ಫೌಂಡೇಷನ್ ವತಿಯಿಂದ ಏರ್ಪಡಿಸ ಲಾಗಿದ್ದ ಕಾರ್ಯಕ್ರಮದಲ್ಲಿ 70ಕ್ಕೂ ಹೆಚ್ಚು ಸಾಧಕ ಮಹಿಳೆ ಯರಿಗೆ ‘ಕರ್ನಾಟಕ ಮಹಿಳಾ ರತ್ನ’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿ, ಇಷ್ಟು ದಿನ ನಾನು ಬರೀ ಪ್ರಶಸ್ತಿಗಳನ್ನು ಮಾತ್ರ ಸ್ವೀಕರಿಸಿದ್ದೇನೆ. ಆದರೆ ಇಂದು ಇಷ್ಟು ಮಂದಿ ಸಾಧಕರಿಗೆ ಪ್ರಶಸ್ತಿ ನೀಡುತ್ತಿರುವುದು ಸಂತಸ ತಂದಿದೆ. ಪ್ರಶಸ್ತಿಗಳನ್ನು ಸ್ವೀಕರಿಸಿದ್ದೇವೆ ಎಂದರೆ ಜವಾಬ್ದಾರಿಗಳು ಹೆಚ್ಚಾಗುತ್ತದೆ ಎಂದರು.

ದೊಡ್ಡ ಕೆಲಸಗಳನ್ನು ಮಾಡಲು ಪ್ರೋತ್ಸಾಹಿ ಸುವುದರ ಜೊತೆಗೆ ಒತ್ತಡಗಳು ಹೆಚ್ಚಾಗುತ್ತದೆ. ಆದರೆ ಮಹಿಳೆಯರು ಸಮಾಜದಲ್ಲಿ ಧೈರ್ಯ ವಾಗಿರಬೇಕು ಎಂದು ಕಿವಿಮಾತು ಹೇಳಿದರು.

50 ವರ್ಷಗಳ ಹಿಂದೆ ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನವನ್ನು ಬರೆಯದಿದ್ದರೆ. ಒಬ್ಬ ತೃತೀಯ ಲಿಂಗಿಗೆ ಪದ್ಮಭೂಷಣ ಪ್ರಶಸ್ತಿ ದೊರಕಲು ಸಾಧ್ಯವಾಗುತ್ತಿ ರಲಿಲ್ಲ. ಮಹಿಳೆಯರಿಗೂ ಸಮಾಜದಲ್ಲಿ ಸಮಾನತೆ ದೊರಕುತ್ತಿರಲಿಲ್ಲ. ಆದರೆ ಇಂದಿನ ಕಾರ್ಯಕ್ರಮ ನೋಡುತ್ತಿದ್ದರೆ, ಅವರ ಕನಸು ನನಸಾಗಿದೆ ಅವರ ಆತ್ಮಕ್ಕೆ ಶಾಂತಿ ದೊರಕಿದೆ ಅನಿಸುತ್ತಿದೆ ಎಂದರು.

ಇವತ್ತು ನನಗೆ ಪದ್ಮಶ್ರೀ ಪ್ರಶಸ್ತಿಯನ್ನು ಸರ್ಕಾರ ನೀಡಿದೆ ಎಂದರೆ ಅದು ಮಂಜಮ್ಮನಿಗೆ ನೀಡಿರುವ ಪ್ರಶಸ್ತಿಯಲ್ಲ, ಜಾನಪದ ಕ್ಷೇತ್ರದ ತೃತೀಯ ಲಿಂಗಿಗೆ ದೇಶ ವಿದೇಶದಲ್ಲಿ ನೆಲೆಸಿರುವ ಕನ್ನಡಿಗರಿಗೆ, ಮಾಧ್ಯಮದವರಿಗೆ  ನೀಡಿರುವ ಪ್ರಶಸ್ತಿಯಾಗಿದೆ. ತೃತೀಯ ಲಿಂಗಿ ಯಾದ ನಾನು ಪದ್ಮಶ್ರೀ ಸ್ವೀಕರಿಸುವುದಕ್ಕೆ ಸಮಾಜದಲ್ಲಿ ಇತರೆ  ತೃತೀಯಲಿಂಗಗಳಿಗೂ ಗೌರವ ದೊರೆಯುತ್ತದೆ.  ಆದರೆ ನಿಮ್ಮ ಮನೆಯಲ್ಲಿ ತೃತೀಯಲಿಂಗ ಮಗು ಜನಿಸಿದರೆ ಅದನ್ನು ಮನೆಯಿಂದ ಹೊರಗೆ ಕಳಿಸಬೇಡಿ. ಅವರಿಗೆ ಮನೆ ಬೆಳ್ಳಿ ಬಂಗಾರ ನೀಡಬೇಡಿ ಬರೀ ವಿದ್ಯಾಭ್ಯಾಸ ನೀಡಿ ಏಕೆಂದರೆ ನಾನು 10ನೇ ತರಗತಿಯವರೆಗೆ ಓದಿ ಜನಪದದ ಕ್ಷೇತ್ರಕ್ಕೆ ಬಂದೆ.  ಆದ್ದರಿಂದ   ವಿದ್ಯಾಭ್ಯಾಸ ನೀಡಿ, ಅನುಕಂಪ ಬೇಡ ಅವಕಾಶ ನೀಡಿ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ ರವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು. ಕಿರುತೆರೆ ಚಲನಚಿತ್ರ ನಟಿ ವಾಣಿಶ್ರೀ ಹಾಗೂ ಚಂದನ್ ಗೌಡ, ಉದ್ಯಮಿ ಲಾವಣ್ಯ ಕಿಶೋರ್, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್, ಸುಯೋಗ್ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಎಸ್ ಪಿ ಯೋಗಣ್ಣ, ಹಿರಿಯ ಸಮಾಜ ಸೇವಕರಾದ ಕೆ ರಘುರಾಂ ವಾಜಪೇಯಿ, ಬಿಜೆಪಿ ಮುಖಂಡರಾದ ಯಶಸ್ವಿನಿ ಸೋಮಶೇಖರ್, ಕಾಂಗ್ರೆಸ್ ಮುಖಂಡರಾದ ರಾಜಾರಾಂ,  ಎನ್ ಎಂ ನವೀನ್ ಕುಮಾರ್, ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್, ಕವಿತಾ ರೆಡ್ಡಿ , ಪ್ರಭಾವತಮ್ಮ, ಕವಿತಾ , ಅರ್ಚನಾ ಪ್ರಕಾಶ್, ಮಹೇಶ್ ಕಾಮತ್, ಸಪ್ನಾ ಸಂತೋಷ್ ಮೊದಲಾದವರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು