News Karnataka Kannada
Friday, May 03 2024
ಮೈಸೂರು

ನಗರದ ಕರ್ನಾಟಕ ಪೋಲೀಸ್‌ ಅಕಾಡೆಮಿಗೆ ಭೇಟಿ ನೀಡಿದ ಸಚಿವ ಆರಗ ಜ್ಞಾನೇಂದ್ರ

Araga Jnanendra.
Photo Credit :

ಮೈಸೂರು ; ಪೋಲೀಸ್‌ ಅಕಾಡೆಮಿಗೆ ಭೇಟಿ ನೀಡಿ ಫೈರಿಂಗ್ ಸಿಮ್ಯುಲೇಟರ್ ಅನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ಉದ್ಘಾಟನೆ ಮಾಡಿದ್ದಾರೆ.
ಅವರು ಇಂದು ಮೈಸೂರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣ ಗಂಭೀರತೆ ಪಡೆದುಕೊಂಡಿದ್ದು ಈ ಬಗ್ಗೆ ಪೋಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲು ಮೈಸೂರಿಗೆ ಆಗಮಿಸಿರುವ ಗೃಹ ಸಚಿವ ಅರಗ ಜ್ಞಾನಂದ್ರ, ನಗರದ ಕರ್ನಾಟಕ ಪೋಲೀಸ್ ಅಕಾಡೆಮಿಗೆ ಭೇಟಿ ನೀಡಿದರು.ಕರ್ನಾಟಕ ಪೋಲೀಸ್ ಅಕಾಡೆಮಿಗೆ ಭೇಟಿ ನೀಡಿ ಅಲ್ಲಿಯೇ ತಿರುಗಾಡಿಕೊಂಡು ಕಟ್ಟಡ ಹಾಗೂ ವ್ಯವಸ್ಥೆ ಬಗ್ಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಮಾಹಿತಿ ಪಡೆದುಕೊಂಡರು. ಮಾಡೆಲ್ ಪೋಲೀಸ್ ಸ್ಟೇಷನ್, ಮೂಡ್ ಕೋರ್ಟ್, ಪರೀಕ್ಷಾರ್ಥಿಗಳ ಕೊಠಡಿ, ಸಭಾಂಗಣ, ಗ್ರಂಥಾಲಯ ಸೇರಿ ವ್ಯವಸ್ಥೆ ಬಗ್ಗೆ ಗೃಹ ಸಚಿವರು ಸಮಾಲೋಚನೆ ನಡೆಸಿದರು.
ಸಿಮ್ಯುಲೇಟರ್ ಚೇಂಬರ್ ನಲ್ಲಿ ಸಚಿವರಿಗೆ ಪೋಲೀಸ್ ಅಕಾಡೆಮಿ ನಿರ್ದೇಶಕ ವಿಫುಲ್ ಕುಮಾರ್ ಅವರು ಮಾಹಿತಿ ನೀಡಿದರು. ಇದೇ ವೇಳೆ ಫೈರಿಂಗ್ ಸಿಮ್ಯುಲೇಟರ್ ಉದ್ಘಾಟನೆ ಮಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ ಗನ್ ಹಿಡಿದು ಫೋಟೋಗೆ ಫೊಸ್‌ ನೀಡುತ್ತಾ ಶೂಟಿಂಗ್ ಪ್ರಾಕ್ಟೀಸ್ ಮಾಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು