News Karnataka Kannada
Thursday, May 09 2024
ಮೈಸೂರು

ಅವೈಜ್ಞಾನಿಕ ಯೋಜನೆಯಿಂದ ಪಾರಂಪರಿಕ ಕಟ್ಟಡಕ್ಕೆ ಧಕ್ಕೆ

Painting Competition
Photo Credit : News Kannada

ಮೈಸೂರು: ಪಾರಂಪರಿಕ ತಜ್ಞರ ಸಮಿತಿಯ ಅಭಿಪ್ರಾಯವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದ ಕಾರಣ ಮತ್ತು ಅವೈಜ್ಞಾನಿಕ ಯೋಜನೆಯಿಂದಾಗಿ ನಗರದ ಲ್ಯಾನ್ಸ್ ಡೌನ್ ಬಿಲ್ಡಿಂಗ್ ಮತ್ತು ದೇವರಾಜ ಮಾರುಕಟ್ಟೆ ಕುಸಿಯುವ ಹಂತ ತಲುಪಿದೆ ಎಂದು ಬಿಜೆಪಿ ಮುಖಂಡ ಆರ್. ರಘು ಕೌಟಿಲ್ಯ ಅಭಿಪ್ರಾಯಪಟ್ಟಿದ್ದಾರೆ.

ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ  ವಿಶ್ವ ಪಾರಂಪರಿಕ ದಿನಾಚರಣೆ  ಅಂಗವಾಗಿ ಒಂಟಿಕೊಪ್ಪಲಿನಲ್ಲಿರುವ ಮೈಸೂರು ಆಕಾಶವಾಣಿ ಎದುರಿನ ಚೆಲುವಾಂಬ ಉದ್ಯಾನವನದ ಆವರಣದಲ್ಲಿ ನಡೆದ ಮೈಸೂರಿನ ಪಾರಂಪರಿಕ ಕಟ್ಟಡಗಳ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಕೇಂದ್ರ ಸರ್ಕಾರ ಪಾರಂಪರಿಕ ಕಟ್ಟಡಗಳ ರಕ್ಷಣೆಗಾಗಿ ಪಾರಂಪರಿಕ ತಜ್ಞರ ಸಮಿತಿ ರಚಿಸಿದೆ ಅವರ ಅಭಿಪ್ರಾಯಗಳನ್ನ ಕೆಲವು ವರ್ಷಗಳ ಹಿಂದೆ ಸರಿಯಾಗಿ ಅನುಷ್ಠಾನಗೊಳಿಸದ ಜಿಲ್ಲಾಡಳಿತ ಮತ್ತು ನಗರಪಾಲಿಕೆ ಮತ್ತು ಕೆಲವು ಅವೈಜ್ಞಾನಿಕ ಯೋಜನೆಯಿಂದಾಗಿ ಕಾರಣದಿಂದಾಗಿ ಇಂದು ಲ್ಯಾನ್ಸ್ ಡೌನ್ ಬಿಲ್ಡಿಂಗ್ ಮತ್ತು ದೇವರಾಜ ಮಾರುಕಟ್ಟೆ ಬೀಳುವ ಪರಿಸ್ಥಿತಿ ಬಂದಿದೆ ಎಂದು ಹೇಳಿದರು.

ರಾಜರ ಕಾಲದಲಿದ್ದ ಅಭಿವೃದ್ಧಿ ಯೋಜನೆಗಳು ನಾವು ಕಾಣಲು ಕಷ್ಟವಾದರೂ ಉಳಿಸಿಕೊಂಡು ನಿರ್ವಹಣೆ ಮಾಡುವ ಆಡಳಿತ ವರ್ಗ ಮುಂದಾಗಬೇಕು, ಶಿಕ್ಷಣ ಎಂದರೆ ಅಕ್ಷರ ಕಲಿಕೆಯಲ್ಲ ಸಂಸ್ಕೃತಿಯ ಪ್ರತಿಬಿಂಬ, ಬೆಟ್ಟಗುಡ್ಡಗಳು ಪಾರಂಪರಿಕ ಕಟ್ಟಡಗಳು  ಕೆರೆಗಳು ಉಳಿದರೆ ರಾಜಮಹರಾಜರ ಊರು ನಮ್ಮ‌ ಪೂರ್ವಜರ ಮೈಸೂರು ಉಳಿದಂತೆ ಎಂದರು.

ಇತಿಹಾಸ ತಜ್ಞರು ಹಾಗೂ ಪಾರಂಪರಿಕ ಸಮಿತಿಯ ಹಿರಿಯ ಸದಸ್ಯರು ಪ್ರೊ ರಂಗರಾಜು,ಹಾಗೂ ಶೆಲ್ವಪಿಳ್ಳೆ ಅಯ್ಯಂಗಾರ್ ,ವಿವಿ ಪುರಂ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ವೆಂಕಟೇಶ್, ಸಬ್ ಇನ್ಸ್ ಪೆಕ್ಟರ್ ಲೇ ಪಕ್ಷ, ವಿವಿ ಪುರಂ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ನಾಗರಾಜು,

ಹಿರಿಯ ಸಮಾಜ ಸೇವಕರಾದ ಕೆ ರಘುರಾಂ ವಾಜಪೇಯಿ, ಮೈಸೂರು ನಗರ ಬಿಜೆಪಿ ಹಿಂದುಳಿದ ವರ್ಗದ ಅಧ್ಯಕ್ಷ ಜೋಗಿ ಮಂಜು ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಕೆ.ಎಂ.ನಿಶಾಂತ್, ಜಯಸಿಂಹ, ಸುಚೀಂದ್ರ, ಚಕ್ರಪಾಣಿ, ಚೇತನ್ ಕಾಂತರಾಜು, ರಾಕೇಶ್ ಕುಂಚಿಟಿಗ, ಹರೀಶ್ ನಾಯ್ಡು, ವರಲಕ್ಷ್ಮಿ ಅಜಯ್, ವಿದ್ಯಾ, ಶ್ರುತಿ ರಾಮ್, ಹಾಗೂ ಇನ್ನಿತರರು ಹಾಜರಿದ್ದರು

ಇದಕ್ಕೂ ಮುನ್ನ ನಡೆದ ಪಾರಂಪರಿಕ ಕಟ್ಟಡಗಳ ಚಿತ್ರಕಲಾ ಸ್ಪರ್ಧೆಯಲ್ಲಿ ವಿವಿಧ ವಯೋಮಿತಿಯ  ಸ್ಪರ್ಧಾಳುಗಳು ಭಾಗವಹಿಸಿದ್ದರು. 8 ವರ್ಷ ದಿಂದ  12ವರ್ಷ, 12 ವರ್ಷ ದಿಂದ 18 ವರ್ಷ,18 ವರ್ಷದಿಂದ ಮೇಲ್ಪಟ್ಟವರು  ಮೈಸೂರಿನ ಪಾರಂಪರಿಕಕಟ್ಟಡಗಳನ್ನು  ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ 200ಕ್ಕೂ ಹೆಚ್ಚು ಜನ  ಭಾಗಿಯಾಗಿದ್ದರು

ಮೂರೂ ವಿಭಾಗದಲ್ಲೂ ಮೊದಲನೇ, ದ್ವಿತೀಯ ಹಾಗೂ ತೃತೀಯ ಹಾಗೂ ಸಮಾಧಾನಕರ ಬಹುಮಾನ ವಿತರಿಸಲಾಯಿತು.ಹಾಗೆಯೇ ಸ್ಪರ್ಧಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ನೆನಪಿನ ಕಾಣಿಕೆ ಹಾಗೂ ಪ್ರಮಾಣ ಪತ್ರ ನೀಡಲಾಯಿತು.

ಚಿತ್ರಕಲಾ ಸ್ಪರ್ಧೆ ಮೈಸೂರು ಪಾರಂಪರಿಕ ಕಟ್ಟಡಗಳಾದ ಮೈಸೂರಿನ ಅರಮನೆ, ದೊಡ್ಡ ಮಾರ್ಕೆಟ್, ಲ್ಯಾನ್ಸ್ ಡೌನ್ ಬಿಲ್ಡಿಂಗ್, ದೊಡ್ಡ ಗಡಿಯಾರ ,ಚಾಮುಂಡಿ ಬೆಟ್ಟ ,ಲಲಿತ ಮಹಲ್ ,ದೊಡ್ಡ ಗಡಿಯಾರ ಹಾಗು ಚಿಕ್ಕ ಗಡಿಯಾರ, ಪುರಭವನ ಸೇರಿದಂತೆ ಇನ್ನಿತರ ಚಿತ್ರಗಳನ್ನು ಚಿತ್ರಕಲಾ ಸ್ಪರ್ಧೆಯಲ್ಲಿ ಚಿತ್ರ ಬಿಡಿಸುವ ಮೂಲಕ   ಗಮನ ಸೆಳೆದರು.

ತೀರ್ಪುಗಾರರಾಗಿ ಖ್ಯಾತ ವ್ಯಂಗ್ಯಚಿತ್ರಕಾರರಾದ ನಾಗೇಂದ್ರಬಾಬು, ಸಿದ್ಧಾರ್ಥ ನಗರದ ಜೆಎಸ್ ಎಸ್ ಶಾಲೆಯಚಿತ್ರಕಲಾ ಶಿಕ್ಷಕಿ ಅನಿತಾ ಕಾರ್ಯ ನಿರ್ವಹಿಸಿದ್ದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು