News Karnataka Kannada
Wednesday, May 01 2024
ಮೈಸೂರು

ಮೈಸೂರು: ಮನೆಮನೆ ವರಮಹಾಲಕ್ಷ್ಮಿ ಫೋಟೋ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

distributed to the winners of varamahalakshmi photo competition.
Photo Credit : By Author

ಮೈಸೂರು: ಕರ್ನಾಟಕ ವಿಪ್ರ ವೇದಿಕೆ ವತಿಯಿಂದ ಆಯೋಜಿಸಿದ್ದ ಮನೆಮನೆ ವರಮಹಾಲಕ್ಷ್ಮಿ ಫೋಟೋ ಸ್ಪರ್ಧೆಯಲ್ಲಿ ಮೊದಲನೇ ಬಹುಮಾನ ನಿವೇದಿತಾ ನಗರ ನಿವಾಸಿ   ಜೆ ಎಸ್ ಮಂಜುಳಾ ರಾಜ್ ,ಎರಡನೇ ಬಹುಮಾನ ಗೋಕುಲಂ ನಿವಾಸಿ ಮಂಜರಿ ಎಂ ವಿ ,ಮೂರನೇ ಬಹುಮಾನ ಅಗ್ರಹಾರದ ರಾಮಾನುಜ ರಸ್ತೆಯ ನಿವಾಸಿ ಶ್ರೀವಾಣಿ ಪಡೆದುಕೊಂಡಿದ್ದಾರೆ.

ನಾಲ್ಕನೇ ಬಹುಮಾನ ಸುಬ್ರಾಯನ ಕೆರೆಯ  ಕೊತ್ವಾಲ್ ರಾಮಯ್ಯ ರಸ್ತೆ  ನಿವಾಸಿ ರಮ್ಯಾ ಸಂದೀಪ್ ,ಐದನೇ ಬಹುಮಾನ ಕುವೆಂಪು ನಗರ ನಿವಾಸಿ ಎನ್ ಲೀಲಾವತಿ ಅವರು ಪಡೆದುಕೊಂಡಿದ್ದಾರೆ. ವಾಟ್ಸಪ್ ಮೂಲಕ 250ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದು ಅದರಲ್ಲಿ ತುಂಬಾ ಸುಂದರವಾಗಿ ಅಲಂಕರಿಸಿ ವರಮಹಾಲಕ್ಷ್ಮಿ ಪೂಜೆ ಮಾಡಿದ 5ಜನರಗೆ ಕುವೆಂಪುನಗರದ ನೃಪತುಂಗ ರಸ್ತೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ  ಸನ್ಮಾನಿಸಿ ಪ್ರಶಸ್ತಿ ಪತ್ರ ನೀಡಲಾಯಿತು .

ಈ ವೇಳೆ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷರಾದ ಡಾ ವೈ ಡಿ ರಾಜಣ್ಣ ಅವರು, ವರಮಹಾಲಕ್ಷ್ಮಿ ಹಬ್ಬದಂತಹ ಧಾರ್ಮಿಕ ಆಚರಣೆಗಳು ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಯಾಗಲಿಕ್ಜೆ ನೆರವಾಗುತ್ತವೆ. ಮನೆಗಳಲ್ಲಿ ಮಕ್ಜಳಲ್ಲಿ ಸಂಸ್ಕಾರ ಬೆಳೆಸಿಕೊಳ್ಳಲು ಪ್ರೇರೇಪಣೆ ನೀಡುತ್ತವೆ.ಇಂತಹ ಹಬ್ಬಗಳ ಆಚರಣೆ ಮನಸ್ಸಿಗೆ ಸಾಂತ್ವನ  ತಂದುಕೊಡುತ್ತದೆ. ಹಬ್ಬದ ಆಚರಣೆಗಳಲ್ಲಿ ಇಂತಹ ಸ್ಪರ್ಧೆಗಳು ಮಹಿಳೆಯರಲ್ಲಿ ಹಾಗೂ ಮಕ್ಕಳಲ್ಲಿ ಹೆಚ್ಚಿನ ಮಟ್ಟದಲ್ಲಿ ಆಸಕ್ತಿ ಹಾಗೂ ಅಭಿರುಚಿ ಮೂಡಿಸಿಕೊಳ್ಳಲು ಒತ್ತಾಸೆಯಾಗಿ ನಿಲ್ಲುತ್ತದೆ ಎಂದರು

ಕಾಂಗ್ರೆಸ್ ಯುವ ಮುಖಂಡ ಎನ್ ಎಂ ನವೀನ್ ಕುಮಾರ್  ಮಾತನಾಡಿ ಮಹಿಳೆಯರಲ್ಲಿ ವಿಶೇಷ ಶಕ್ತಿಯಿದೆ. ತಪ್ಪು ಮಾಡುವವರನ್ನು ಸಂಯಮ, ತಾಳ್ಮೆ, ಪ್ರೀತಿ ಮೂಲಕ ಸರಿದಾರಿಗೆ ತರುವಲ್ಲಿ ಸ್ತ್ರೀಯರು ಮಹತ್ವದ ಪಾತ್ರ ವಹಿಸುತ್ತಾರೆ. ಸಾತ್ವಿಕ  ಮನೋಭಾವ ಹಾಗೂ  ಮಾತೃತ್ವವನ್ನು ಪಾಲಿಸಿ ಸಾಧ್ವಿತನದ ಮೂಲಕ ಕುಟುಂಬದಲ್ಲಿನ ತಪ್ಪುಗಳನ್ನು ತಿದ್ದಿ ಜೀವನವನ್ನು ಸಾಕಾರಗೊಳಿಸಲು ಮಹಿಳೆಯರು ವಿಶೇಷ ಶಕ್ತಿ ಹೊಂದಿದ್ದಾರೆ ಎಂದರು

ಒಕ್ಕಲಿಗರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ರಾದ ಸಿ ಜಿ ಗಂಗಾಧರ್ , ಕರ್ನಾಟಕ ವಿಪ್ರ ವೇದಿಕೆ ಅಧ್ಯಕ್ಷರಾದ ಅನಿಲ್ ಕುಮಾರ್ , ಶ್ರೀ ಕನ್ಯಕಾಪರಮೇಶ್ವರಿ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾದ ಎಚ್ ಎಂ ಸಂದೀಪ್, ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ವಿನಯ್ ಕಣಗಾಲ್ , ಸ್ವಾತಿ ಹಾಗೂ ಇನ್ನಿತರರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು