News Karnataka Kannada
Sunday, April 28 2024
ಮೈಸೂರು

ಮೈಸೂರು: ಗುಬ್ಬಚ್ಚಿಯ ಸಂತತಿ‌ ಉಳಿಸುವುದು ನಮ್ಮ ಕರ್ತವ್ಯ

It is our duty to save the sparrow population.
Photo Credit : By Author

ಮೈಸೂರು: ಪರಿಸರ ಉಳಿದರೇ ಮಾತ್ರ ಭೂಮಂಡಲದಲ್ಲಿ ಮನುಷ್ಯರು ಬದುಕಲು ಸಾಧ್ಯ, ಬೇಸಿಗೆಯ ಬಿಸಲಿನ ತಾಪಮಾನ ಹೆಚ್ಚುತ್ತಿರುವದರಿಂದ ಸಣ್ಣಪುಟ್ಟ ಪ್ರಾಣಿಪಕ್ಷಿಗಳ ಜೀವ ಉಳಿಸಲು ಪ್ರತಿಯೊಬ್ಬರ ತಮ್ಮ ಮನೆಯ ತಾರಸಿಯ ಮೇಲೆ ನೀರು ಧಾನ್ಯಗಳನ್ನಿಟ್ಟು ಗುಬ್ಬಚ್ಚಿಯ ಸಂತತಿ‌ ಉಳಿಸಬೇಕಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಹೇಮಾ ನಂದೀಶ್ ಹೇಳಿದರು.

ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಗುಬ್ಬಚ್ಚಿ ಶಾಲೆಯಲ್ಲಿ ಅಂತರಾಷ್ಟ್ರೀಯ ಗುಬ್ಬಚ್ಚಿ ದಿನಾಚರಣೆ ಅಂಗವಾಗಿ ಕೆ ಎಂ ಪಿ ಕೆ ಚಾರಿಟಬಲ್  ಟ್ರಸ್ಟ್  ನಿರಂತರವಾಗಿ ನಡೆಯುತ್ತಿರುವ ಸಣ್ಣ ಪುಟ್ಟ ಪ್ರಾಣಿ ಪಕ್ಷಿಗಳ ಸಂರಕ್ಷಣ ಜಾಗೃತಿ ಕಾರ್ಯಕ್ರಮವು  ಶಾಲಾ ಮಕ್ಕಳಿಗೆ ಆಹಾರ ನೀರಿನ ಬಟ್ಟಲುಗಳನ್ನು ವಿತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಭೂಮಿಯಲ್ಲಿ ಮನುಷ್ಯರಂತೆ ಪ್ರಾಣಿಪಕ್ಷಿಗಳಿಗೂ ಬದುಕುವ ಸ್ವಾತಂತ್ರ್ಯವಿದೆ.  ಯುವಕರು ಹೆಚ್ಚಾಗಿ ಪರಿಸರ ಸೇವಾಮನೋಭಾವ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು.

ಅರಣ್ಯವನ್ನು ಮಾನವ ತನ್ನ ಅತಿಕ್ರಮಣ ಪ್ರವೇಶದಿಂದ ಬಳಸುತ್ತಿರುವುದರಿಂದ ಅದರ ಸಂಪತ್ತು ಕಾಲಕ್ರಮೇಣ ನಶಿಸುತ್ತಿದೆ. ಮನುಷ್ಯ ಎಲ್ಲಾ ಪ್ರಾಣಿಗಳಲ್ಲಿಯೇ ಶ್ರೇಷ್ಠ ಪ್ರಾಣಿಯಾಗಿದ್ದು ಆಹಾರವಿಲ್ಲದೆ ಅವನು ಹಲವು ದಿನಗಳವರೆಗೆ ಬದುಕಬಲ್ಲ. ಆದರೆ ಗಾಳಿ ನೀರಿಲ್ಲದೆ ಕ್ಷಣಮಾತ್ರ  ಬದುಕಲಾರ. ಇತ್ತೀಚೆಗೆ ಮಳೆ ಪ್ರಮಾಣ ಕಡಿಮೆಯಾಗುತ್ತಿರುವುದು ಮತ್ತು ಭೂಮಿಯಲ್ಲಿ ನೀರಿನ ಪ್ರಮಾಣ ಕುಸಿಯುತ್ತಿರುವುದರಿಂದ  ನೀರಿನ ಸಂರಕ್ಷಣೆಗಾಗಿ ಹಲವಾರು ಯೋಜನೆಗಳನ್ನು ಕೈಗೊಳ್ಳಬೇಕಿದೆ ಇದರಿಂದ ಸಣ್ಣಪುಟ್ಟ ಪ್ರಾಣಿಪಕ್ಷಿಗಳ ಸಂತತಿ ಉಳಿಯುತ್ತವೆ ಎಂದರು.

ಕೆ ಎಂ ಪಿ ಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಅಜಯ್ ಶಾಸ್ತ್ರಿ, ರವಿಚಂದ್ರ, ರಾಕೇಶ್, ಸುಚೇಂದ್ರ,ಶಾಲೆಯ ಮುಖ್ಯ ಶಿಕ್ಷಕರಾದ ಮೋಹನ್ ಕುಮಾರ್, ಸಹ ಶಿಕ್ಷಕರಾದ ಚಂಪ ಶ್ರೀ, ದಿವ್ಯ, ರೇಖಾ ಹಾಗೂ ಇನ್ನಿತರರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು