News Karnataka Kannada
Monday, April 29 2024
ಮೈಸೂರು

ಮೈಸೂರು: ದೊನ್ನೆ ಬಿರಿಯಾನಿ ಉದ್ಘಾಟಿಸಿದ ನಟ ಡಾಲಿ ಧನಂಜಯ್

Actor Dali Dhananjay inaugurates Donne Biryani
Photo Credit :

ಮೈಸೂರು: ಮೈಸೂರಿನ ವಿವಿ ಮೊಹಲ್ಲಾದ ಲಾಯಲ್ ವರ್ಲ್ಡ್ ಎದುರುಗಡೆ ಇರುವ ಬೆಂಗಳೂರಿನ ಹೆಮ್ಮೆಯ ಚಿಕ್‌ಪೇಟ್ ದೊನ್ನೆ ಬಿರಿಯಾನಿ ಹೋಟೆಲ್ ಅನ್ನು  ನಟ ಡಾಲಿ ಧನಂಜಯ್ ಶುಕ್ರವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಡಾಲಿ ಧನಂಜಯ್, ಚಿಕ್‌ಪೇಟ್ ದೊನ್ನೆ ಬಿರಿಯಾನಿ ಫೇಮಸ್ ಆಗಿದ್ದು, ಚಿಕ್ಕಪೇಟೆಗೆ ದೊಣ್ಣೆ ಬಿರಿಯಾನಿ ತಿನ್ನಲು ಹೋಗುವವರಿಗೆ ಇದು ತುಂಬಾ ಒಳ್ಳೆಯದು. ಇದರ ಹೊರತಾಗಿ ನಾನು ಈ ಹೋಟೆಲ್‌ಗೆ ಪ್ರವೇಶಿಸಿದಾಗ ಕರ್ನಾಟಕದ ದಂತಕಥೆಗಳ ಫೋಟೋಗಳನ್ನು ನೋಡಿ ನನಗೆ ಆಶ್ಚರ್ಯವಾಯಿತು ಮತ್ತು ಸಂತೋಷವಾಯಿತು. ರುಚಿ ಕೂಡ ತುಂಬಾ ಚೆನ್ನಾಗಿದೆ ಎಂದರು.

ಮೈಸೂರಿನ ಚಿಕ್ಕಪೇಟೆಯ ದೊನ್ನೆ ಬಿರಿಯಾನಿಯ ಪಾಲುದಾರರಲ್ಲಿ ಒಬ್ಬರಾದ ಅಭಿಷೇಕ್  ಮಾತನಾಡಿ “ಚಿಕ್‌ಪೆಟ್ ದೊನ್ನೆ ಬಿರಿಯಾನಿಯು ಬಿರಿಯಾನಿ ಪ್ರಿಯರನ್ನು ಎಂದಿಗೂ  ನಿರಾಶೆಗೊಳಿಸಲಿಲ್ಲ. ಚಿಕ್ಕಪೇಟೆಯ ನಮ್ಮ ಪ್ರತಿಷ್ಠಿತ ಮಳಿಗೆಗಳಲ್ಲಿ ಬಿರಿಯಾನಿ ಸಾಂಪ್ರದಾಯಿಕ ಪಾಕವಿಧಾನಗಳು, ಕೈಯಿಂದ ಆಡಿಸಿದ ಮಸಾಲೆಗಳು, ಎಚ್ಚರಿಕೆಯಿಂದ ಆರಿಸಿದ  ಮಾಂಸ, ನಾಟಿ ಶೈಲಿಯ ಅಡುಗೆ ಮತ್ತು ಉತ್ತಮವಾಗಿ ತಯಾರಿಸುತ್ತಿರುವುದಾಗಿ ಹೇಳಿದರು.

 ಈ ವೇಳೆ ಪಾಲುದಾರರಾದ ಸುಪ್ರಿತ್ ಮತ್ತು ಮಹೇಶ್, ಶಾಸಕ ನಾಗೇಂದ್ರ, ಕಾರ್ಪೊರೇಟರ್ ಭಾಗ್ಯ ಮಾದೇಶ್, ಮೈಸೂರು ಜಿಮ್ ಮತ್ತು ಫಿಟ್ನೆಸ್ ಮಾಲೀಕರ ಸಂಘದ ಸಂಸ್ಥಾಪಕ ಎಂ.ಎಸ್.ಹರ್ಷ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು