News Karnataka Kannada
Monday, April 29 2024
ಮೈಸೂರು

ಮೈಸೂರು: ಸೆ.27ರಿಂದ ಮೈಸೂರು ದಸರಾ ಚಲನಚಿತ್ರೋತ್ಸವ

Gold card released for Dasara viewing
Photo Credit : By Author

ಮೈಸೂರು: ದಸರಾ ಚಲನಚಿತ್ರ ಪ್ರದರ್ಶನ ಸೆ.27ರಿಂದ ಅ.3ರವರೆಗೆ ನಡೆಯಲಿದ್ದು, ನಗರದ ಎರಡು ಮಲ್ಟಿಫ್ಲೆಕ್ಸ್‌ಗಳಲ್ಲಿ ವಿದೇಶಿ ಮತ್ತು ದೇಶದ  ವಿವಿಧ ಭಾಷೆಗಳ ಒಟ್ಟು 112 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಸೆ.26ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಹ್ಯಾಟ್ರಿಕ್ ಹಿರೋ ಶಿವರಾಜ್‌ಕುಮಾರ್ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಸೆ. 27ರಿಂದ ಚಿತ್ರಗಳ ಪ್ರದರ್ಶನ ಆರಂಭಗೊಳ್ಳಲಿದೆ.

ಇದೇ ವೇಳೆ ಕಿರುಚಿತ್ರ ತಯಾರಿಕೆ ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು, ಹೆಸರಾಂತ ಚಿತ್ರ ನಿರ್ದೇಶಕರು ಪಾಲ್ಗೊಳ್ಳಲಿದ್ದಾರೆ. ಜತೆಗೆ ಕಿರುಚಿತ್ರ ಪ್ರದರ್ಶನ ನಡೆಯಲಿದೆ.  ಚಲನಚಿತ್ರೋತ್ಸವದಲ್ಲಿ ಕನ್ನಡ ಸಿನಿಮಾ ಸೇರಿದಂತೆ ವಿದೇಶಿ ಸಿನಿಮಾಗಳು, ಪನೋರಮ, ದೇಶದ ವಿವಿಧ ಭಾಷೆಗಳ  ಚಿತ್ರಗಳು ಪ್ರದರ್ಶನಗೊಳ್ಳಲಿವೆ. ನಟ ಪುನೀತ್ ರಾಜ್‌ಕುಮಾರ್ ಮುಖ್ಯ ಆಕರ್ಷಣೆಯಾಗಿರುತ್ತಾರೆ.

ಅಪ್ಪು ಅಭಿನಯದ ಬ್ಲಾಕ್‌ಬಸ್ಟರ್ ಸಿನಿಮಾಗಳು, ಸಾಮಾಜಿಕ ಸಂದೇಶ ಸಾರುವ ಚಿತ್ರಗಳನ್ನು ಪ್ರದರ್ಶಿಸಲಾಗುವುದು. ಬಾಲ ನಟನಾಗಿ ನಟಿಸಿದ  ಬೆಟ್ಟದ ಹೂ ಚಿತ್ರವೂ ಪ್ರದರ್ಶನಗೊಳ್ಳಲಿದೆ. ಅಪ್ಪು ಅಗಲಿಕೆ ನೋವಿನಲ್ಲಿರುವ ಅಭಿಮಾನಿಗಳಿಗಾಗಿ ಚಿತ್ರೋತ್ಸವದ ಒಂದು ದಿನ ಮೀಸಲಿಡಲಾಗಿದೆ. 112ಸಿನಿಮಾಗಳಲ್ಲಿ ಕನ್ನಡ 28, ಪನೋರಮಾ 28, 28 ವರ್ಲ್ಡ್ ಸಿನಿಮಾ ಪ್ರದರ್ಶನಗೊಳ್ಳಲಿವೆ. ಐನೋಕ್ಸ್‌ನಲ್ಲಿ 84, ಡಿಆರ್‌ಸಿಯಲ್ಲಿ 28 ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಸೆ.22ರಿಂದ 24ರವರೆಗೆ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಸಿನಿಮಾ ನಿರ್ಮಾಣದ ಕೌಶಲಗಳನ್ನು  ತಿಳಿಸಲಾಗುತ್ತದೆ. ಜತೆಗೆ ಕಡಿಮೆ ಬಜೆಟ್‌ನಲ್ಲಿ ಉತ್ತಮ ಚಿತ್ರ ನಿರ್ಮಾಣದ ಕುರಿತು ಕಲಿಸಲಾಗುತ್ತದೆ. ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕಾರ್ಯಾಗಾರ ಉದ್ಘಾಟಿಸಲಿದ್ದಾರೆ.

ಇದೇ ವೇಳೆ 5 ನಿಮಿಷಗಳ ಕಿರುಚಿತ್ರ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಕನ್ನಡ ಸಿನಿಮಾಗಳ ಹೊರತುಪಡಿಸಿ ಇತರೆ ಭಾಷೆಯ ಸಿನಿಮಾಗಳಿಗೆ ಅಡಿ ಬರಹ ಇರಬೇಕು. ಮೊದಲ ಬಹುಮಾನ 10 ಸಾವಿರ ನಗದು, ದ್ವಿತೀಯ 8 ಸಾವಿರ ನಗದು, 5 ಸಾವಿರ ತೃತೀಯ ನಗದು ಬಹುಮಾನ ನೀಡಲಾಗುತ್ತದೆ. ಇಬ್ಬರಿಗೆ 2 ಸಾವಿರ ರೂ. ಸಮಾಧಾನಕರ ಬಹುಮಾನ ನೀಡಲಾಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು