News Karnataka Kannada
Wednesday, May 01 2024
ಮೈಸೂರು

ಮೈಸೂರು: ಮೈಸೂರು ಮೃಗಾಲಯಕ್ಕೆ ಬಂದ ಹೊಸ ಅತಿಥಿ

A new guest arrives at Mysuru Zoo
Photo Credit :

ಮೈಸೂರು: ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿದ್ದ ಬಬ್ಲಿ ಜಿರಾಫೆ ಮುದ್ದಾದ ಮರಿಗೆ ಜನ್ಮ ನೀಡಿದೆ. ಆ ಮೂಲಕ ಜಿರಾಫೆಗಳ ಸಂಖ್ಯೆ ಮೃಗಾಲಯದಲ್ಲಿ 3 ಗಂಡು, 4 ಹೆಣ್ಣು ಜಿರಾಫೆ ಸೇರಿದಂತೆ ಒಟ್ಟು 7 ಕ್ಕೆ ಏರಿದೆ.

ಮೃಗಾಲಯದಲ್ಲಿನ ಬಬ್ಲಿ ಮತ್ತು ಭರತ್ ಜೋಡಿ ಸೋಮವಾರ ಬೆಳಗ್ಗೆ ಮೂರನೇ ಹೆಣ್ಣು ಮರಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮರಿ ಆರೋಗ್ಯದಿಂದಿವೆ. ಮುದ್ದಾದ ಮರಿಗೆ ಜನ್ಮ ನೀಡಿರುವ ಜಿರಾಫೆ ಮನೆ ಸಮೀಪ ಯಾರನ್ನು ಬಿಟ್ಟಿಲ್ಲ. ಜತೆಗೆ ತಾಯಿ ಮತ್ತು ಮರಿಗೆ ಭಯವಾಗಬಾರದೆಂಬ ಮುಂದಾಲೋಚನೆಯಿಂದ ಮರಿಗೆ ಪಾಲಕರನ್ನು ಹೊರತುಪಡಿಸಿ, ಉಳಿದಂತೆ ಎಲ್ಲರ ವೀಕ್ಷಣೆಗೆ ನಿರ್ಬಂಧ ಹೇರಲಾಗಿದೆ.

ಈ ಸಂಬಂಧ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ ಮಾತನಾಡಿ, ಸುತ್ತೂರು ಶ್ರೀಗಳು ಭೇಟಿ ನೀಡಿದ್ದ ದಿನವೇ ಜಿರಾಫೆ ಮರಿಗೆ ಜನನ ನೀಡಿರುವುದು  ಮೃಗಾಲಯದ ಸೌಭಾಗ್.  ಈ ಹಿಂದೆ ಸುತ್ತೂರು ಕ್ಷೇತ್ರದ ಕಿರಿಯ ಸ್ವಾಮೀಜಿ ಭೇಟಿ ನೀಡಿದ್ದ ವೇಳೆಯೂ ಜಿರಾಫೆ ಮರಿ ಜನನವಾಗಿತ್ತು. ಈಗ ಹಿರಿಯ ಸ್ವಾಮೀಜಿ ಮೃಗಾಲಯಕ್ಕೆ ಭೇಟಿ ನೀಡಿದ್ದ ದಿನವೇ ಬಬ್ಲಿ ಹಾಗೂ ಭರತ್ ಜೋಡಿಗೆ ಹೆಣ್ಣು ಮರಿ ಜನನವಾಗಿದೆ ಎಂದರು.

ವಿಶ್ವದಲ್ಲೇ ಜಿರಾಫೆಗಳ ಸಂಖ್ಯೆ ಕ್ಷೀಣಿಸಿದೆ. ಅಳವಿನಂಚಿನಲ್ಲಿರುವ ಜಿರಾಫೆ ಸಂತತಿ ವೃದ್ಧಿಗಾಗಿ ಶ್ರಮಿಸಲಾಗುತ್ತಿದೆ. ವಿಶ್ವದಲ್ಲೇ ಕೇವಲ 2 ಸಾವಿರಕ್ಕಿಂತ ಕಡಿಮೆ ಸಂಖ್ಯೆಯ ಜಿರಾಫೆಗಳಿರುವುದರಿಂದ ಒಂದೊಂದು ಮರಿ ಜನಿಸಿದರೂ ಅತ್ಯಂತ ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು