ಮೈಸೂರು : 2025-26ನೇ ಸಾಲಿನ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಬಜೆಟ್ ಜಿಲ್ಲಾಧಿಕಾರಿ, ಮೂಡ ಅಧ್ಯಕ್ಷ ಲಕ್ಷ್ಮಿಕಾಂತ ರೆಡ್ಡಿ ನೇತೃತ್ವದಲ್ಲಿ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಸಭಾಂಗಣದಲ್ಲಿ ಮಂಡನೆ ಮಾಡಲಾಯಿತು.

ಬಜೆಟ್ ಕುರಿತು MDA ಆಯುಕ್ತ ರಕ್ಷಿತ್ ಕೆ ಆರ್ ವಿವರಣೆ ನೀಡಿದರು. 871 ಕೋಟಿ ನಿರೀಕ್ಷಿತಾ ಬಜೆಟ್ ಮಂಡನೆ ಮಾಡಲಾಯಿತು. 548 ಕೋಟಿ ರೂ ವಿವಿಧ ಅಭಿವೃದ್ಧಿಗೆ ಮೀಸಲಿಡಲಾಗಿದೆ.
ಕೆರೆ ಅಭಿವೃದ್ಧಿ ಯೋಜನೆ, ಮೂಲ ಸೌಕರ್ಯ, ರಸ್ತೆ ನಿರ್ಮಾಣ, ನೀರು ಸರಬರಾಜು, ವಸತಿ ಬಡಾವಣೆ ಅಭಿವೃದ್ಧಿಗೆ ಅನುದಾನ ಬಳಕೆ ಮಾಡಲಾಗಿದೆ. ನಗರದ ಹಲವು ರಸ್ತೆಗಳಿಗೆ ವೈಟ್ ಟಾಪಿಂಗ್ ಭಾಗ್ಯ ಸಿಕ್ಕಿದೆ.

