ಒಡಿಶಾದ ಪುರಿ ಜಗನ್ನಾಥ ದೇವಾಲಯದ ಪವಿತ್ರ ‘ಪತಿತಪಾವನ ಬಾನಾ’ (ಧ್ವಜ) ಮತ್ತು ನೀಲಚಕ್ರದ ಮೇಲೆ ಹದ್ದೊಂದು ಕುಳಿತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಸಾಮಾನ್ಯವಾಗಿ ದೇವಾಲಯದ ಗೋಪುರದ ಮೇಲೆ ಪಕ್ಷಿಗಳು ಹಾರಾಡುವುದಿಲ್ಲ ಅಥವಾ ಕುಳಿತುಕೊಳ್ಳುವುದಿಲ್ಲ ಎಂಬ ನಂಬಿಕೆಯಿದೆ. ಹೀಗಿರುವಾಗ ಹದ್ದು ಕಾಣಿಸಿಕೊಂಡಿರುವುದು ಭಕ್ತರಲ್ಲಿ ಎರಡು ರೀತಿಯ ಭಾವನೆಗಳನ್ನು ಮೂಡಿಸಿದೆ.

ಕೆಲವರು ಇದನ್ನು ಭಗವಾನ್ ವಿಷ್ಣುವಿನ ವಾಹನ ‘ಗರುಡ’ನೇ ಸ್ವತಃ ಜಗನ್ನಾಥನನ್ನು ರಕ್ಷಿಸಲು ಬಂದಿದ್ದಾನೆ ಎಂದು ಶುಭ ಸಂಕೇತವೆಂದು ಭಾವಿಸಿದರೆ, ಇನ್ನು ಕೆಲವರು ಇದನ್ನು ದೇಶಕ್ಕೆ ಅಥವಾ ಜಗತ್ತಿಗೆ ಎದುರಾಗಲಿರುವ ಯಾವುದೋ ದೊಡ್ಡ ವಿಪತ್ತಿನ ಮುನ್ಸೂಚನೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ವಿಶೇಷವಾಗಿ ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಯುದ್ಧದ ಉದ್ವಿಗ್ನತೆಯ ಸಮಯದಲ್ಲಿ ಈ ಘಟನೆ ನಡೆದಿರುವುದು ಭವಿಷ್ಯ ಮಾಲಿಕಾದ ಮುನ್ಸೂಚನೆಗಳತ್ತ ಜನರ ಗಮನ ಸೆಳೆದಿದೆ.

View this post on Instagram

A post shared by News Karnataka (@newskarnataka)