ಮೈಸೂರು : ಹೊಸ ವರ್ಷಾಚರಣೆಗೆ ಮೈಸೂರು ನಗರ ಕಮೀಷನರ್ ರಿಂದ ಮಾರ್ಗಸೂಚಿ ಬಿಡುಗಡೆಯಾಗಿದೆ.

ಯಾವುದೇ ಅಹಿತಕರ ಘಟನೆಗಳು ನಡೆಯದ ರೀತಿ‌ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಹೊಸವರ್ಷಚರಣೆಗೆ 4 ಡಿಸಿಪಿ, 7ಎಸಿಪಿ, 29 ಇನ್ಸ್ಪೆಕ್ಟರ್ , 55 ಸಬ್ ಇನ್ಸ್ಪೆಕ್ಟರ್, 103 ಎಎಸ್ಐ, 761 ಪುರುಷ ಪೊಲೀಸ್, 154 ಮಹಿಳಾ ಪೊಲೀಸರು ಸೇರಿದಂತೆ ಒಟ್ಟು 1113 ಪೊಲೀಸರ ನಿಯೋಜನೆ ಮಾಡಲಾಗಿದೆ.

ಚಾಮುಂಡಿ ಬೆಟ್ಟಕ್ಕೆ ಡಿ. 31ರ ರಾತ್ರಿ 7 ಗಂಟೆಯಿಂದ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ. ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಹೆಚ್ಚಿನ ಸಿಸಿ ಕ್ಯಾಮರಾ ಆಳವಡಿಸಿವುದಕ್ಕೆ ಖಾಕಿ ಪಡೆ ಮುಂದಾಗಿದೆ.

ನಗರ ವ್ಯಾಪ್ತಿಯಲ್ಲಿ ಡಿಜೆ ಬಳಸುವುದಕ್ಕೆ ನಿರ್ಬಂಧ ಹೇರಿದೆ. 31 ರಾತ್ರಿಯಿಂದ ಬೆಳಗ್ಗೆಯ ವರೆಗೂ ಚಾಮುಂಡಿ ಪಡೆ, 112 ಸೇರಿದಂತೆ ನಗರದ ಎಲ್ಲಾ ಕಡೆ ಪೊಲೀಸರ ಗಸ್ತು ನಿಯೋಜಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನಗರ ಹೊರ ಭಾಗದಲ್ಲಿ ಎಲ್ಲಾ ಕಡೆ ಚೆಕ್ ಪೊಸ್ಟ್ ನಿರ್ಮಾಣ ಮಾಡಲಾಗಿದೆ.