ಶಿಶಿಲ : ಬೆಳ್ತಂಗಡಿ ತಾಲೂಕಿನ ಕಲ್ಲುಗುಂಡಿ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಜನಾರ್ಧನ ನಾಯ್ಕ ಕೀಲಾರು ಇವರ ಮಕ್ಕಳು ಶಾಲೆ ಬಿಟ್ಟು ಸಂಜೆ ವೇಳೆಗೆ ಮನೆಗೆ ತೆರಳುವ ಸಂದರ್ಭದಲ್ಲಿ ಕಾಡಾನೆಗಳ ಹಿಂಡು ಈ ಮಕ್ಕಳನ್ನು ಬೆನ್ನಟ್ಟಿ ಬಂದಿರುವ ಆಘಾತಕಾರಿ ಘಟನೆ ನಡೆದಿದೆ.

ಪವಾಡಸದೃಶವಾಗಿ ಮಕ್ಕಳು ಪಾರಾಗಿರುವ ಘಟನೆ ನಡೆದಿದ್ದು, ಕಳೆದ ತಿಂಗಳಿಂದ ಬಂಟೋಡಿ, ಕೀಲಾರು, ಕೀಲಾರುಮೂಲೆ, ಕೈಪಡ್ಕ ಭಾಗಗಳಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟಿದೆ.

ಕಾಡಾನೆಗಳ ಹಿಂಡನ್ನು ಓಡಿಸುವಲ್ಲಿ ಅರಣ್ಯ ಇಲಾಖೆ ತಕ್ಷಣವೇ ಕಾರ್ಯಪ್ರವೃತ್ತರಾಗಬೇಕೆಂದು ಈ ಭಾಗದ ಜನರು ಮನವಿ ಮಾಡಿಕೊಂಡಿದ್ದಾರೆ.